ಸಂತೇಬೆನ್ನೂರು | ತುಂಗಭದ್ರಾ ನದಿಯಿಂದ ಕೆರೆಗಳಿಗೆ ಸಮೃದ್ಧ ನೀರು

ಸಂತೇಬೆನ್ನೂರು | ತುಂಗಭದ್ರಾ ನದಿಯಿಂದ ಕೆರೆಗಳಿಗೆ ಸಮೃದ್ಧ ನೀರು

ಸಂತೇಬೆನ್ನೂರು | ತುಂಗಭದ್ರಾ ನದಿಯಿಂದ ಕೆರೆಗಳಿಗೆ ಸಮೃದ್ಧ ನೀರು

ಸಂತೇಬೆನ್ನೂರು: ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಮೂರು ತಿಂಗಳಿಂದ ನಿರಂತರ ನೀರು ಹರಿಸಲಾಗುತ್ತಿದೆ. ಮಳೆ ಕೊರತೆಯಲ್ಲೂ ಕೆರೆಗಳಲ್ಲಿ ನೀರಿನ ಸಂಗ್ರಹ ನಿರಂತರ ಹೆಚ್ಚುತ್ತಿರುವುದು ರೈತರಿಗೆ ಸಂತಸ ನೀಡಿದೆ.

ಚನ್ನಗಿರಿ, ಹೊನ್ನಾಳಿ, ಭದ್ರಾವತಿ, ದಾವಣಗೆರೆ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕುಗಳ 121 ಕೆರೆಗಳಿಗೆ ಸಾಸ್ವೆಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ನೀರು ಪಂಪ್ ಮಾಡಲಾಗುತ್ತಿದೆ. ಸಂತೇಬೆನ್ನೂರು ಹೋಬಳಿಯ ಹಲವು ಕೆರೆಗಳು ಪೂರ್ಣಮಟ್ಟ ತಲುಪಿವೆ. ಅಧಿಕ ವಿಸ್ತೀರ್ಣದ ಕೆರೆಗಳು ಶೇ 60ರಷ್ಟು ಭರ್ತಿ ಆಗಿವೆ. ಸಣ್ಣ ಕೆರೆಗಳು ತುಂಬಿ ತುಳುಕುತ್ತಿವೆ. ತಾಂತ್ರಿಕ ಸಮಸ್ಯೆಗಳಿಂದ ಕೆಲವು ಕೆರೆಗಳಿಗೆ ನೀರಿನ ಹರಿವು ಮಂದಗತಿಯಲ್ಲಿದೆ.

‌‘ಸಂತೇಬೆನ್ನೂರು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 46 ಕೆರೆಗಳಿಗೆ ನೀರು ಹರಿಯುತ್ತಿದೆ. ಅಂತರ್ಜಲ ಮಟ್ಟ ವೃದ್ಧಿಸಿದೆ. ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಬರಗಾಲದ ಬವಣೆ ರೈತರನ್ನು ಹೈರಾಣಾಗಿಸಿ ಬೆಳೆಗಳು ನಾಶವಾಗಿವೆ. ಮಳೆ ನಂಬಿ ಬಿತ್ತನೆಗೆ ಹಣ ಸುರಿದಿದ್ದರಿಂದ ಕೈ ಖಾಲಿಯಾಗಿದೆ. ಕನಿಷ್ಠ ಕೆರೆಗಳಲ್ಲಿ ನೀರು ತುಂಬಿರುವುದು ಬದುಕಿಗೆ ಭರವಸೆ ನೀಡಿದೆ’ ಎನ್ನುತ್ತಾರೆ ರೈತರಾದ ರಾಜಪ್ಪ, ರುದ್ರೇಶ್.

‘ಭಣಗುಡುತ್ತಿದ್ದ ಭೀಮ ಸಮುದ್ರದ ಬೃಹತ್‌ ಕೆರೆಗೆ ಏತ ನೀರಾವರಿ ನೀರು ಹರಿಯುತ್ತಿರುವುದು ರೈತರಿಗೆ ಸಂತಸ ನೀಡಿದೆ. ಸುತ್ತಮುತ್ತಲಿನ 30 ಹಳ್ಳಿಗಳ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸಿದೆ.‌ ಅಡಿಕೆ ತೋಟಗಳೇ ವ್ಯಾಪಿಸಿರುವ ಪ್ರದೇಶದಲ್ಲಿ ಕೆರೆಗೆ ನೀರು ತುಂಬಿಸುತ್ತಿರುವುದು ಭರವಸೆ ಮೂಡಿಸಿದೆ’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆಯ ಬಸವಾಪುರ ಗ್ರಾಮದ ಜಗದೀಶ್.

₹ 421.24 ಕೋಟಿ ವೆಚ್ಚದ ಈ ಯೋಜನೆಯಿಂದ ಎರಡು ವರ್ಷಗಳಿಂದ ನೀರು ಹರಿಸಲಾಗುತ್ತಿದೆ. ಒಟ್ಟು 1.692 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಜುಲೈನಿಂದ ಡಿಸೆಂಬರ್‌ವರೆಗೆ 180 ದಿನ, ಸತತವಾಗಿ ತುಂಗಭದ್ರಾ ನದಿಯಿಂದ ನೀರನ್ನು ಕೆರೆಗಳಿಗೆ ಹರಿಸಲಾಗುವುದು. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹಾಗೂ ಪಂಪ್‌ಗಳಿಗೆ ಲಭ್ಯತೆ ಆಧಾರದಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುವುದು’ ಎಂದು ನಿರ್ವಹಣಾ ಎಂಜನಿಯರ್ ತಿಳಿಸಿದ್ದಾರೆ.‌

ಸಾಸ್ವೆಹಳ್ಳಿ ಏತ ನೀರಾವರಿಯಿಂದ ಕೆಲ ತಾಂತ್ರಿಕ ಸಮಸ್ಯೆಗಳಿಂದ ನೀರು ಹರಿಸುವುದು ತಡವಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಾರಂಭಕ್ಕೆ ಪ್ರಯತ್ನ ನಡೆಸಲಾಯಿತು. ಸದ್ಯ 121 ಕೆರೆಗಳಿಗೆ ಕಳೆದ ಎರಡು ಮುಂಗಾರು ಅವಧಿಯಲ್ಲಿ ನೀರು ತುಂಬಿಸಲಾಗುತ್ತಿದೆ. ಕೆರೆಯ ಜಲಸಿರಿ ರೈತರಿಗೆ ಭರವಸೆ ಮೂಡಿಸಿದೆ. ರೈತರ ಬದುಕು ಹಸನಾಗಲು ಏತ ನೀರಾವರಿ ಯೋಜನೆ ಸಹಕಾರಿಯಾಗಿದೆ. ಚನ್ನಗಿರಿ ತಾಲ್ಲೂಕಿಗೆ ಏತ ನೀರಾವರಿ ಯೋಜನೆ ಮಂಜೂರಾಗಿದೆ.

ಬಸವರಾಜು ಶಿವಗಂಗಾ, ಶಾಸಕ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ