ನೆಲಜಿ ಸಂಘಕ್ಕೆ ₹41.21 ಲಕ್ಷ ನಿವ್ವಳ ಲಾಭ, ಶೇ 11 ಡಿವಿಡೆಂಡ್

ನೆಲಜಿ ಸಂಘಕ್ಕೆ ₹41.21 ಲಕ್ಷ ನಿವ್ವಳ ಲಾಭ, ಶೇ 11 ಡಿವಿಡೆಂಡ್

ನೆಲಜಿ ಸಂಘಕ್ಕೆ ₹41.21 ಲಕ್ಷ ನಿವ್ವಳ ಲಾಭ, ಶೇ 11 ಡಿವಿಡೆಂಡ್

ನಾಪೋಕ್ಲು: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹41.21 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 11 ಡಿವಿಡೆಂಡ್ ನೀಡುವ ಪ್ರಸ್ತಾವನೆ ಮಂಡಿಸಲು ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ.ಅಪ್ಪಚ್ಚ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 1,294 ಸದಸ್ಯರಿದ್ದು, ₹1 ಕೋಟಿ 88 ಲಕ್ಷ ಷೇರು ಬಂಡವಾಳ ಹಾಗೂ ಕ್ಷೇಮ ನಿಧಿ ಸೇರಿದಂತೆ ಇತರೆ ನಿಧಿಗಳಲ್ಲಿ ₹1.93 ಕೋಟಿ ಠೇವಣಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಬಂಡವಾಳದ ಪೈಕಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾಲು ಹಣ, ಕ್ಷೇಮ ನಿಧಿ, ನಿರಖು ಠೇವಣಿ ಹಾಗು ಇತರೆ ಸಹಕಾರ ಸಂಸ್ಥೆಗಳಲ್ಲಿ ಪಾಲು ಮತ್ತು ಠೇವಣಿ ರೂಪದಲ್ಲಿ ಒಟ್ಟು ₹7.76 ಕೋಟಿ ಹೂಡಿಕೆ ಮಾಡಲಾಗಿದೆ. ಸದಸ್ಯರ ಅಗತ್ಯಕ್ಕೆ ಅನುಗುಣವಾಗಿ ₹10.69 ಕೋಟಿ ಮತ್ತು ₹1.98 ಕೋಟಿ ಜಾಮೀನು ಸಾಲ ವಿತರಿಸಲಾಗಿದೆ ಎಂದರು.

ರಸಗೊಬ್ಬರ, ಕೃಷಿ ಉಪಕರಣಗಳು ಹಾಗು ಇತರೆ ಅಗತ್ಯ ಸಾಮಗ್ರಿಗಳ ಮಾರಾಟದಿಂದ ₹2.01 ಕೋಟಿ ವಹಿವಾಟು ನಡೆಸಿ ₹9.14 ಲಕ್ಷ ಲಾಭ ಗಳಿಸಿದೆ. ₹50,000 ದಿಂದ ₹2 ಲಕ್ಷದವರೆಗೆ ಜಾಮೀನು ಸಾಲ ನೀಡಲಾಗುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರಿಶೀಲನೆ ಯಂತ್ರವನ್ನು ಅಳವಡಿಸಲಾಗಿದೆ. ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಂಘದ 50ನೇ ವಾರ್ಷಿಕ ಮಹಾಸಭೆಯು ಸೆ.19ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ವಿ. ರೀನಾ, ನಿರ್ದೇಶಕರಾದ ಬದ್ದಂಜೆಟ್ಟೀರ ಎ.ತಿಮ್ಮಯ್ಯ, ಐರೀರ ಜಿ. ಟಿಂಶ, ಚೀಯಕಪೂವಂಡ ಡಿ. ನಾಚಪ್ಪ, ಕರವಂಡ ಜಿ. ಅಪ್ಪಣ್ಣ, ಮಚ್ಚುರ ಎಂ.ರವೀಂದ್ರ, ಮಣವಟ್ಟೀರ ಬಿ. ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ. ದಯಾ ಚಿಣ್ಣಪ್ಪ, ಚೀಯಕಪೂವಂಡ ಎ. ಸುನಿಲ್, ಮಣವಟ್ಟೀರ ಎನ್ ಕುಶಾಲಪ್ಪ, ಅಪ್ಪುಮಣಿಯಂಡ ಬಿ. ಕಾವೇರಮ್ಮ, ಪಿ.ಎಂ.ವಿಜು ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ