
ಗಣೇಶ ಹಬ್ಬದ ಪ್ರಯುಕ್ತ ಕೋಲಾರದಲ್ಲಿ ಸೆ.14ರಂದು ಮದ್ಯ ಮಾರಾಟ ನಿಷೇಧ
ಕೋಲಾರ: ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯ ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ಸೆ.14ರಂದು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದ ವರದಿ ಆಧಾರದಲ್ಲಿ ಕೋಲಾರ ನಗರ ಠಾಣೆ, ಮಾಲೂರು ನಗರ ಠಾಣೆ, ಶ್ರೀನಿವಾಸಪುರ ಪಟ್ಟಣ ಠಾಣೆ ಹಾಗೂ ಮುಳಬಾಗಿಲು ನಗರ ಠಾಣಾ ಸರಹದ್ದಿನ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚಲು ಸೂಚನೆ ನೀಡಿದ್ದಾರೆ.
ಅಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.