
ನೀಲಗುಂದ ಗ್ರಾಮದಲ್ಲಿ ಸಾಮೂಹಿಕ ವಿವಾಹ ಸಮಾರಂಭ ಸೆ.13 ರಂದು ಜರುಗಲಿದೆ
ಕುಳಗೇರಿ ಕ್ರಾಸ್: ಸಮೀಪದ ನೀಲಗುಂದ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ 28ನೇ ವರ್ಷದ ಪುರಾಣ ಮಹಾಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಸೆ.13 ರಂದು ಜರುಗಲಿದೆ.
ಬೆಳಿಗ್ಗೆ 8 ಗಂಟೆಗೆ ಶಿವಪ್ಪಯ್ಯನ ಗದ್ದುಗೆಗೆ ಮಹಾಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಹಾಗೂ ಕುಂಭ ಮೇಳ, ಎತ್ತಿನ ಜೋಡಿಗಳು, ಕರಡಿ ಮಜಲು, ನೀಲಗುಂದ ಗ್ರಾಮದ ಹಿರೇಮಠ ಭಜನಾ ಸಂಘ ಹಾಗೂ ವಿವಿಧ ವಾಧ್ಯ ಮೇಳಗಳೊಂದಿಗೆ ಶಿವಪ್ಪಯ್ಯನ ಭಾವಚಿತ್ರದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠ ತಲುಪಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ ಜರುಗಲಿವೆ.
ಗದಗ– ಡಂಬಳ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ನರಸಾಪುರ ಹಿರೇಮಠದ ಮರುಳಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಾದಾಮಿಯ ನವಗ್ರಹ ಹಿರೇಮಠದ ಶಿವಪುಜಾ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ತೀರ್ಥ ಬಸವೇಶ್ವರ ಕ್ಷೇತ್ರದ ಶಿವಲೋಹಿತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಿವಯೋಗಿಶ್ವರ ವಿಶ್ವಸ್ತ ಮಂಡಳಿಯ ಅಧ್ಯಕ್ಷ ಎನ್.ಡಿ.ದೊಡ್ಡನಿಂಗಪ್ಪನವರ ಅಧ್ಯಕ್ಷತೆ ವಹಿಸುವರು. ವೀರಭದ್ರಯ್ಯ ಶಿವಪ್ಪಯ್ಯನಮಠ, ಶಿವಯೋಗಿಶ್ವರ ವಿಶ್ವಸ್ತ ಮಂಡಳಿಯ ಕಾರ್ಯಾಧ್ಯಕ್ಷ ಕೃಷ್ಣರಾವ್ ದೇಸಾಯಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.