
ಯೋಗ, ಮಾನಸಿಕ ಆರೋಗ್ಯ ಕಾರ್ಯಾಗಾರ ಸೆ.10 ಮತ್ತು 11ರಂದು ಸೋಮವಾರಪೇಟೆಯಲ್ಲಿ
ಸೋಮವಾರಪೇಟೆ: ಕಾಲೇಜು ಶಿಕ್ಷಣ ಇಲಾಖೆ ಹಾಗೂ ಯಡೂರಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವುಗಳ ಆಶ್ರಯದಲ್ಲಿ ಸೆ. 10 ಮತ್ತು 11ರಂದು ಎರಡು ದಿನಗಳ ಕಾಲ ಯೋಗ ಮತ್ತು ಮಾನಸಿಕ ಆರೋಗ್ಯ ಕಾರ್ಯಾಗಾರ ಸಮಚಿತ್ತ ಜೀವನದಿಂದ ಸಮಗ್ರ ವಿಕಾಸದೆಡೆಗೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಸೆ. 10ರಂದು ಬೆಳಿಗ್ಗೆ 10.30ಕ್ಕೆ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೋಮಿಯೋಪತಿ ಆಸ್ಪತ್ರೆಯ ಡಾ. ಸೌಪರ್ಣೀಕಾ ಅವರು ಮಾಹಿತಿ ನೀಡಲಿದ್ದಾರೆ. ಸೆ. 11ರಂದು ಜೀವನಕ್ಕಾಗಿ ಯೋಗ ತರಬೇತಿಯನ್ನು ಆಯುಷ್ ಆಸ್ಪತ್ರೆಯ ಯೋಗ ತರಬೇತುದಾರರಾದ ಬಿ.ಎಸ್. ಕೌಶಿಕ್ ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಡಿ. ಹರ್ಷ ತಿಳಿಸಿದ್ದಾರೆ.