ಬೋರನಕಣಿವೆ ಬುಡದಲ್ಲೇ ನೀರಿಗೆ ಬರ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಾಹಾಕಾರ

ಬೋರನಕಣಿವೆ ಬುಡದಲ್ಲೇ ನೀರಿಗೆ ಬರ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಾಹಾಕಾರ

ಬೋರನಕಣಿವೆ ಬುಡದಲ್ಲೇ ನೀರಿಗೆ ಬರ: ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಾಹಾಕಾರ

ಹುಳಿಯಾರು: ಹೋಬಳಿಯೂ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಜನರು ನೀರಿಗಾಗಿ ಪರದಾಡುತ್ತಿದ್ದಾರೆ.

ಹುಳಿಯಾರು ಹೋಬಳಿಯ ಬರಕನಹಾಳ್‌, ದಸೂಡಿ, ದೊಡ್ಡಬಿದರೆ, ಗಾಣಧಾಳು, ತಿಮಲಾಪುರ, ಶೆಟ್ಟಿಕೆರೆ ಹೋಬಳಿಯ ದುಗುಡಿಹಳ್ಳಿ, ಕುಪ್ಪೂರು, ಹೊನ್ನೆಗಾಗಿ, ಕಂದಿಕೆರೆ ಹೋಬಳಿಯ ಕಂದಿಕೆರೆ, ತೀರ್ಥಪುರ ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಈಗಾಗಲೇ ನಾಲ್ಕು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಾಲ್ಕು ಗ್ರಾಮಗಳಲ್ಲಿ ನೀರಿನ ಲಭ್ಯತೆ ಕಡಿಮೆ ಸೇರಿದಂತೆ ಒಟ್ಟು 12 ಗ್ರಾಮಗಳಲ್ಲಿ ನೀರಿನ ಕೊಳವೆಬಾವಿ ಬತ್ತಿ ಹೋಗಿವೆ.

ಬೋರನಕಣಿವೆ ಬುಡದಲ್ಲೇ ನೀರಿಗೆ ಬರ: ತಾಲ್ಲೂಕಿನ ಜನರ ಜೀವನಾಡಿ ಬೋರನಕಣಿವೆ ಜಲಾಶಯದಲ್ಲಿ ನೀರಿದ್ದರೂ ಸುತ್ತಮುತ್ತಲ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಆರಂಭವಾಗಿದೆ. ಜಲಾಶಯದ ನೀರು ಹರಿಯುವ ಬೆಳ್ಳಾರ ಗ್ರಾಮದ ಸುತ್ತಮುತ್ತ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಇನ್ನೂ ಜಲಾಶಯಕ್ಕೆ ಹೊಂದಿಕೊಂಡಿರುವ ತಿಮ್ಮಪ್ಪಹಟ್ಟಿ, ಕಲ್ಲೇನಹಳ್ಳಿ, ನುಲೇನೂರು, ಬರಕನಹಾಳ್ ಸುತ್ತಮುತ್ತಲ ಗ್ರಾಮಗಳಲ್ಲೂ ನೀರಿಗೆ ಬರ ಬಂದಿದೆ.

ಈಗಾಗಲೇ ಹುಳಿಯಾರು ಪಟ್ಟಣಕ್ಕೆ ಬೋರನಕಣಿವೆ ಜಲಾಶಯದಿಂದ ನೀರನ್ನು ನೀಡಲಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಸುಮುತ್ತಲ ಹೊಯ್ಸಳಕಟ್ಟೆ, ದಸೂಡಿ, ಗಾಣಧಾಳು, ಬರಕನಹಾಳ್‌, ಕೆಂಕೆರೆ, ದೊಡ್ಡಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 72 ಗ್ರಾಮಗಳಿಗೆ ಕೇಂದ್ರ ಸರ್ಕಾರದ ಜಲ ಜೀವನ ಮಿಷನ್‌ ಯೋಜನೆ ಮೂಲಕ ಕುಡಿಯುವ ನೀರು ಒದಗಿಸುವ ಮಹತ್ವಾಂಕ್ಷೆಯ ಯೋಜನೆ ನನೆಗುದಿಗೆ ಬಿದ್ದಿದೆ.

2023ರಲ್ಲಿ ಆರಂಭವಾದ ಯೋಜನೆ 2024ರಲ್ಲಿ ಮುಗಿಯಬೇಕಿತ್ತು. ಆದರೆ ಯೋಜನೆ ಅವಧಿ ಮುಗಿದು ಎರಡು ವರ್ಷ ಕಳೆದರೂ ಯಾವ ಗ್ರಾಮಗಳಿಗೂ ಹನಿ ನೀರು ಹರಿದಿಲ್ಲ. ಯೋಜನೆ ತೀವ್ರಗತಿಯಲ್ಲಿ ಸಾಗದೆ ಆರಂಭದಿಂದಲೂ ಮಂದಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಕೆಲ ಗ್ರಾಮಗಳಲ್ಲಿ ಮನೆಮನೆಗೆ ಗಂಗೆ ಯೋಜನೆಯ ಪೈಪ್‌ಲೈನ್‌ ಹಾಗೂ ನಲ್ಲಿ ಅಳವಡಿಸುವ ಕಾಮಗಾರಿ ಮುಗಿದಿದೆ. ಇನ್ನೂ ಸಾಕಷ್ಟು ಗ್ರಾಮಗಳಲ್ಲಿ ನಲ್ಲಿ ಅಳವಡಿಕೆ ಕಾರ್ಯವೇ ನನೆಗುದಿಗೆ ಬಿದ್ದರೆ, ನಲ್ಲಿ ಅಳವಡಿಸಿರುವ ಗ್ರಾಮಗಳಲ್ಲಿ ನೀರು ಹರಿಯದೆ ನಲ್ಲಿಗಳು ಹಾಳಾಗಿವೆ.

ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಹು ದಿನಗಳಿಂದ ಕುಂಟುತ್ತಾ ಸಾಗುತ್ತಿದೆ. ಯೋಜನೆ ನಿಗದಿತ ಸಮಯಕ್ಕೆ ಮುಗಿದಿದ್ದರೆ ಒಂದಿಷ್ಟು ಗ್ರಾಮಗಳ ಕುಡಿಯುವ ನೀರಿನ ಬವಣೆಯಾದರೂ ತಪ್ಪುತ್ತಿತ್ತು ಎನ್ನುತ್ತಾರೆ ಬಹುಗ್ರಾಮ ಯೋಜನೆ ಒಳಪಡುವ ಗ್ರಾಮಸ್ಥರು.

‘ಜಲಾಶಯದ ಸುತ್ತಮುತ್ತ ನೀರಿನ ಗ್ರಹಿಕೆ ಸುಳ್ಳು’

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-17-1176578078

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ