ಕೊಪ್ಪಳ| ಬಾಲಕಿ ಮೇಲೆ ಅತ್ಯಾಚಾರ; ಘಟನೆ ನಡೆದು ವರ್ಷದ ಬಳಿಕ ದೂರು ನೀಡಿದ ಪೋಷಕರು

ಕೊಪ್ಪಳ| ಬಾಲಕಿ ಮೇಲೆ ಅತ್ಯಾಚಾರ; ಘಟನೆ ನಡೆದು ವರ್ಷದ ಬಳಿಕ ದೂರು ನೀಡಿದ ಪೋಷಕರು

ಕೊಪ್ಪಳ| ಬಾಲಕಿ ಮೇಲೆ ಅತ್ಯಾಚಾರ; ಘಟನೆ ನಡೆದು ವರ್ಷದ ಬಳಿಕ ದೂರು ನೀಡಿದ ಪೋಷಕರು

ಕೊಪ್ಪಳ: ಜಿಲ್ಲೆಯ ಗ್ರಾಮವೊಂದರಲ್ಲಿ ಪ್ರೌಢಶಾಲೆ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೋಷಕರು ಆರೋಪಿಸಿದ್ದು ಘಟನೆ ನಡೆದು ಒಂದು ವರ್ಷದ ಬಳಿಕ ಇಲ್ಲಿನ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಒಂದು ವರ್ಷದ ಹಿಂದೆ ಮಗಳು ಕೊಪ್ಪಳದ ಬಸ್‌ ನಿಲ್ದಾಣದಲ್ಲಿದ್ದಾಗ ಹರ್ಷಾ ಎನ್ನುವ ಯುವಕ ಬೈಕ್‌ ಮೇಲೆ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಮತ್ತು ಬರುವ ಜ್ಯೂಸ್‌ ಕುಡಿಸಿ ಗ್ರಾಮವೊಂದರ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾನೆ. ಆ ವಿಡಿಯೊವನ್ನು ನನ್ನ ಮಗಳ ಮೊಬೈಲ್‌ಗೆ ಕಳುಹಿಸಿ ಲೈಂಗಿಕವಾಗಿ ಸಹಕರಿಸಬೇಕೆಂದು ಹಲವು ಬಾರಿ ವ್ಯಾಟ್ಸ್‌ಆ್ಯಪ್‌ ಕರೆ ಮಾಡಿ ಬೇಡಿಕೆ ಇಟ್ಟಿದ್ದು, ಅದನ್ನು ಸ್ಕ್ರೀನ್‌ ರೆಕಾರ್ಡ್‌ ಮಾಡಿಕೊಂಡಿದ್ದಾನೆ. ಆ ವಿಡಿಯೊವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2025ರ ಅಕ್ಟೋಬರ್‌ 10ರಂದು ಘಟನೆ ನಡೆದಿದ್ದು ಇದೇ 8ರಂದು ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ