ಪ್ರಿಸ್ಕೂಲ್‌ಗೆ ಕಟ್ಟುವ ಫೀಸ್‌ನಲ್ಲಿ ಖರೀದಿಸಬಹುದು ಐಶಾರಾಮಿ ಕಾರು : ಅಂಥದ್ದೇನಿದೆ ಇಲ್ಲಿನ ಶಿಕ್ಷಣದಲ್ಲಿ?

ಪ್ರಿಸ್ಕೂಲ್‌ಗೆ ಕಟ್ಟುವ ಫೀಸ್‌ನಲ್ಲಿ ಖರೀದಿಸಬಹುದು ಐಶಾರಾಮಿ ಕಾರು : ಅಂಥದ್ದೇನಿದೆ ಇಲ್ಲಿನ ಶಿಕ್ಷಣದಲ್ಲಿ?

ಪ್ರಿಸ್ಕೂಲ್‌ಗೆ ಕಟ್ಟುವ ಫೀಸ್‌ನಲ್ಲಿ ಖರೀದಿಸಬಹುದು ಐಶಾರಾಮಿ ಕಾರು : ಅಂಥದ್ದೇನಿದೆ ಇಲ್ಲಿನ ಶಿಕ್ಷಣದಲ್ಲಿ?

ಶಿಕ್ಷಣ ಎನ್ನುವುದು ಈಗ ವ್ಯಾಪಾರ ಆಗಿದೆ ಎಂದರೆ ತಪ್ಪಲ್ಲ. ಮಗು ಹುಟ್ಟುವ ಮುನ್ನವೇ ಯಾವ ಶಾಲೆಗೆ ಮಗುವನ್ನು ಸೇರಿಸಬೇಕು ಎನ್ನುವ ಲೆಕ್ಕಾಚಾರ ಶುರುವಾಗುತ್ತದೆ. ಕೆಲವೊಂದು ಶಾಲೆಗಳಲ್ಲಿ ಮಗು ಹುಟ್ಟಿದ ಕೂಡಲೇ ಶಾಲೆಯಲ್ಲಿ ಸೀಟ್‌ ರಿಸರ್ವ್‌ ಮಾಡಲಾಗುತ್ತದೆ. ಪ್ರಿಸ್ಕೂಲ್‌ಗೇ ಲಕ್ಷ ಲಕ್ಷ ಫೀಸ್‌ ಸುರಿಯಬೇಕಾಗುತ್ತದೆ.

ಇದೀಗ ಅಮೆರಿಕದ ಸಿಮ್ಸ್‌ಬರಿಯಲ್ಲಿ ವಾಸಿಸುವ ಭಾರತೀಯ ಕಟೆಂಟ್‌ ಕ್ರಿಯೇಟರ್‌ ಸೋನಾಲ್ ಚೌಧರಿ, ಅಮೆರಿಕನ್ ಪ್ರಿಸ್ಕೂಲ್ ವ್ಯವಸ್ಥೆಯ ಬಗ್ಗೆ ಒಂದು ವಿಡಿಯೋವನ್ನು ಶೇರ್‌ ಮಾಡಿದ್ದಾರೆ. ಭಾರತದೊಂದಿಗೆ ಅಲ್ಲಿನ ಪ್ರಿಸ್ಕೂಲ್ ಫೀಸ್‌ ಅನ್ನು ಹೋಲಿಸಿದ್ದಾರೆ. ಅಮೆರಿಕಾದ ಪ್ರಿ ಸ್ಕೂಲ್‌ಗೆ ಕಟ್ಟುವ ಫೀಸ್‌ನಿಂದ ಒಂದು ಐಶಾರಾಮಿ ಕಾರನ್ನು ಖರೀದಿಸಬಹುದು ಎಂದು ಹೇಳಿದ್ದಾರೆ.

ಆರಂಭಿಕ ಶಿಕ್ಷಣದ ವೆಚ್ಚ ಲಕ್ಷಗಳಲ್ಲಿ

ಸೋನಾಲ್ ತನ್ನ ಎರಡು ವರ್ಷದ ಮಗಳನ್ನು ಶಾಲೆಗೆ ಸೇರಿಸಲು ಪ್ರಿಸ್ಕೂಲ್ ಸೆಂಟರ್‌ಗೆ ಹೋಗಿದ್ದರು. ಈ ಸೆಂಟರ್‌ ಸುಮಾರು 68 ವರ್ಷಗಳಿಂದ ಇದೆ. ಅಲ್ಲಿದ್ದ ಮಹಿಳೆ ಶಾಲೆಯ ಫೀಸ್‌, ಕ್ಲಾಸ್‌ ರೂಂ ಮತ್ತು ಕಲಿಸುವ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿನ ಫೀಸ್‌ ಸ್ಟ್ರಕ್ಚರ್‌ ನೋಡಿಯೇ ಸೋನಾಲ್ ಶಾಕ್‌ ಆಗಿದ್ದಾರೆ. ಅಮೆರಿಕದಲ್ಲಿ, ಚಿಕ್ಕ ಮಕ್ಕಳ ಆರಂಭಿಕ ಶಿಕ್ಷಣದ ವೆಚ್ಚವೇ ಲಕ್ಷ ರೂಪಾಯಿಗಳನ್ನು ದಾಟುವುದು ಎಂದು ಅವರು ವೀಡಿಯೊದಲ್ಲಿ ವಿವರಿಸಿದ್ದಾರೆ.

ನಾಲ್ಕು ಮಕ್ಕಳಿಗೆ ಒಬ್ಬ ಶಿಕ್ಷಕಿ

ಇಲ್ಲಿ ಪ್ರತಿ ನಾಲ್ಕು ಮಕ್ಕಳಿಗೆ ಒಬ್ಬರಂತೆ ಶಿಕ್ಷಕರಿರುತ್ತಾರೆ. ಹಾಗಾಗಿ ಇಲ್ಲಿನ ಫೀಸ್‌ ಕೂಡಾ ಹೆಚ್ಚಾಗಿರುತ್ತದೆ. ಅಲ್ಲಿನ ಮಕ್ಕಳ ಆರೈಕೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಶಾಲೆ ತಿಳಿಸಿದೆ. ಕೇಂದ್ರದಲ್ಲಿ ಪ್ರತಿ ಎಂಟು ಮಕ್ಕಳಿಗೆ ಇಬ್ಬರು ಶಿಕ್ಷಕರಿರುತ್ತಾರೆ. ಅಂದರೆ ಒಬ್ಬ ಶಿಕ್ಷಕಿಗೆ ನಾಲ್ಕು ಮಕ್ಕಳ ಜವಾಬ್ದಾರಿ. ಇಲ್ಲಿ ಚಿಕ್ಕ ಮಕ್ಕಳಿಗೆ ಪುಸ್ತಕಗಳ ಮೂಲಕ ಮಾತ್ರ ಕಲಿಸುವುದಿಲ್ಲ. ಇದರ ಬದಲಿಗೆ, ಮಕ್ಕಳಿಗೆ ಆಟದ ಜೊತೆಯಲ್ಲಿಯೇ ಎಲ್ಲವನ್ನೂ ಕಲಿಸಲಾಗುತ್ತದೆ. ಒಂದು ರೀತಿಯಲ್ಲಿ ಆಟದ ಮಧ್ಯೆ ಪಾಠ ಇದ್ದ ಹಾಗೆ. ತರಗತಿಯಲ್ಲಿ, ಮಕ್ಕಳಿಗೆ ಹಾಡುಗಳು, ಯೋಗ, ಫೋಟೋ ಆಕ್ಟಿವಿಟಿ, ಹೆಸರು ಬರೆಯುವ ಅಭ್ಯಾಸ ಮತ್ತು ವಿವಿಧ ಆಟಗಳನ್ನು ನೀಡಲಾಗುತ್ತದೆ. ಇದಲ್ಲದೆ, ಮಕ್ಕಳಿಗೆ ಆಟವಾಡಲು ಬೇಕಾಗಿರುವ ಎಲ್ಲಾ ಸಾಮಗ್ರಿಗಳನ್ನು ನೀಡಲಾಗ್ತದೆ.

ಕೇವಲ 3 ಗಂಟೆಗಳ ಕ್ಲಾಸ್‌, ಫೀಸ್‌ ಮಾತ್ರ ಲಕ್ಷಗಳಲ್ಲಿ

ವೀಡಿಯೊದಲ್ಲಿ, ಸೋನಾಲ್ ಶಾಲೆಯಿಂದ ಪಡೆದ ಫೀಸ್‌ ರಿಸೀಟ್‌ ಅನ್ನು ಕೂಡಾ ತೋರಿಸಿದ್ದಾರೆ. ಇದರಲ್ಲಿ 2026-27ನೇ ಸಾಲಿಗೆ 2 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ವಿಧಿಸಿರುವ ಫೀಸ್‌ ಮತ್ತು ಎಷ್ಟು ಸಮಯದವರೆಗೆ ಕ್ಲಾಸ್‌ ನಡೆಯುತ್ತದೆ ಎನ್ನುವುದನ್ನು ಕೂಡಾ ವಿವರಿಸಲಾಗಿದೆ. ಈ ರಿಸೀಟ್‌ನ ಪ್ರಕಾರ, ಬೆಳಿಗ್ಗೆ 8:45 ರಿಂದ 11:45 ರವರೆಗೆ ಕ್ಲಾಸ್‌ ನಡೆಯುತ್ತವೆ. ಅಂದರೆ ದಿನಾ ಕೇವಲ 3 ಗಂಟೆಗಳ ಕ್ಲಾಸ್.‌ ಫೀಸ್‌ ಅನ್ನು ವರ್ಷಪೂರ್ತಿಗೆ ಫಿಕ್ಸ್‌ ಮಾಡಲಾಗಿರುತ್ತದೆ.

2 ವರ್ಷದ ಮಗುವಿನ 8 ಲಕ್ಷಕ್ಕಿಂತ ಹೆಚ್ಚು ಫೀಸ್‌

ಫೀಸ್‌ ಸ್ಟ್ರಕ್ಷರ್‌ ಪ್ರಕಾರ, ಒಂದು ಮಗುವಿಗೆ 2 ವರ್ಷ ವಯಸ್ಸಾಗಿದ್ದು, ವಾರಕ್ಕೆ 2 ದಿನ ಶಾಲೆಗೆ ಕಳುಹಿಸಿದರೆ, ವಾರ್ಷಿಕ ಶುಲ್ಕ ಸುಮಾರು 5.70 ಲಕ್ಷ. ವಾರಕ್ಕೆ 3 ದಿನ ಶಾಲೆಗೆ ಕಳುಹಿಸಿದರೆ ಫೀಸ್‌ ಸುಮಾರು 5.40 ಲಕ್ಷಕ್ಕೆ ಏರುತ್ತದೆ. ಒಂದು ವೇಳೆ ವಾರಕ್ಕೆ 4 ದಿನ ಶಾಲೆಗೆ ಕಳುಹಿಸುವುದಾದರೆ ಫೀಸ್‌ 7.10 ಲಕ್ಷಕ್ಕೆ ತಲುಪುತ್ತದೆ. ಇನ್ನು ವಾರದ 5 ದಿನ ಶಾಲೆ ಬೇಕಾದರೆ 8.44 ಲಕ್ಷ ಫೀಸ್‌ ಕಟ್ಟಬೇಕಾಗುತ್ತದೆ. ಅಂದರೆ 2 ವರ್ಷದ ಪುಟ್ಟ ಮಗುವಿನ ಪ್ರಿಸ್ಕೂಲ್ ಫೀಸ್‌ ಅನೇಕ ಭಾರತೀಯ ಕುಟುಂಬಗಳ ವಾರ್ಷಿಕ ವೆಚ್ಚವನ್ನು ಮೀರಬಹುದು.

3 ರಿಂದ 5 ವರ್ಷದ ಮಕ್ಕಳಿಗೂ ಲಕ್ಷಗಟ್ಟಲೆ ರೂಪಾಯಿ ಖರ್ಚು

ಮಗುವು 3 ರಿಂದ 5 ವರ್ಷದ್ದಾಗಿದ್ದರೆ ಫೀಸ್ ಸ್ವಲ್ಪ ಕಡಿಮೆಯಾಗುತ್ತದೆ. ಇವರು ವಾರಕ್ಕೆ ಎರಡು ದಿನಗಳ ತರಗತಿಗಳಿಗೆ ವಾರ್ಷಿಕ ಶುಲ್ಕ ಸುಮಾರು 2.91 ಲಕ್ಷ. ಮೂರು ದಿನಗಳ ಕ್ಲಾಸ್‌ಗೆ 4.15 ಲಕ್ಷ, ನಾಲ್ಕು ದಿನಗಳ ಕ್ಲಾಸ್‌ಗೆ 5.45 ಲಕ್ಷ ಮತ್ತು ಐದು ದಿನಗಳ ಶಾಲೆಗೆ ಸುಮಾರು 6.80 ಲಕ್ಷ ಫೀಸ್‌ ಕಟ್ಟಬೇಕಾಗುತ್ತದೆ.

ಹೆಚ್ಚು ಸಮಯ ಬೇಕಿದ್ದರೆ ಎಕ್ಸ್ಟ್ರಾ ದುಡ್ಡು

ಇನ್ನು ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಡಬೇಕಾದರೆ ಪ್ರತ್ಯೇಕ ಶುಲ್ಕ ಕಟ್ಟಬೇಕಾಗುತ್ತದೆ. ಬೆಳಿಗ್ಗೆ 7:30 ರಿಂದ 8:45 ರವರೆಗಿನ ಸಮಯಕ್ಕೆ ದಿನಕ್ಕೆ ಸರಿಸುಮಾರು 1900 ರೂಪಾಯಿ ಪಾವತಿಸಬೇಕಾಗುತ್ತದೆ. ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 1:30 ರವರೆಗೆ ಶಾಲೆಯಲ್ಲಿ ಇರುವ ಮಕ್ಕಳಿಗೆ ದಿನಕ್ಕೆ ಸರಿಸುಮಾರು 2000 ರೂಪಾಯಿಗಳ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಫೀಸ್‌ ಹಣದಲ್ಲಿ ಆರಾಮಾಗಿ ಬರುತ್ತದೆ ಈ ಕಾರು

ಸೋನಾಲ್ ಈ ಶುಲ್ಕವನ್ನು ಭಾರತದಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಬ್ರೆಝಾ ಎಸ್‌ಯುವಿಗೆ ಹೋಲಿಸಿದ್ದಾರೆ. ಮಾರುತಿ ಬ್ರೆಝಾ ಭಾರತದಲ್ಲಿ ಸುಮಾರು 7.40 ಲಕ್ಷದಿಂದ ಪ್ರಾರಂಭವಾಗುತ್ತದೆ. ಅಮೆರಿಕದಲ್ಲಿ, 2 ವರ್ಷದ ಮಗುವಿನ ವಾರಕ್ಕೆ ನಾಲ್ಕು ದಿನಗಳ ಪ್ರಿಸ್ಕೂಲ್ ಫೀಸ್‌ ಸುಮಾರು 7.10 ಲಕ್ಷವಾಗಿದ್ದು, ಇದು ಭಾರತದಲ್ಲಿ ಬ್ರೆಝಾ ಬೇಸಿಕ್‌ ಮಾದರಿಯನ್ನು ಖರೀದಿಸಲು ಸಾಕಾಗುತ್ತದೆ. ಇನ್ನು ಮಗು ವಾರಕ್ಕೆ ಐದು ದಿನ ಶಾಲೆಗೆ ಹೋದರೆ, ಫೀಸ್‌ ಸುಮಾರು 8.44 ಲಕ್ದವರೆಗೆ ಆಗುತ್ತದೆ. ಇದು ಬ್ರೆಝಾದ ಆರಂಭಿಕ ಬೆಲೆಗಿಂತಲೂ ಹೆಚ್ಚಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ

ಈ ವಿಡಿಯೋ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಅಮೆರಿಕ ಮತ್ತು ಭಾರತದ ಶಿಕ್ಷಣ ವ್ಯವಸ್ಥೆಗಳನ್ನು ಹೋಲಿಸುವುದಕ್ಕೆ ಶುರು ಮಾಡಿದ್ದಾರೆ. ಅಮೆರಿಕದಲ್ಲಿ ಖಾಸಗಿ ಪ್ರಿಸ್ಕೂಲ್‌ಗಳು ದುಬಾರಿಯಾಗಿದ್ದರೂ, ಮಕ್ಕಳ ಆರೈಕೆ, ಸ್ಟುಡೆಂಟ್‌ ಟೀಚರ್‌ ರೇಶಿಯೋ ಮತ್ತು ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡುತ್ತವೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ, ಕಿಂಡರ್‌ಗಾರ್ಟನ್‌ನಿಂದ 12 ನೇ ತರಗತಿಯವರೆಗಿನ ಸಾರ್ವಜನಿಕ ಶಾಲೆಗಳು ಹೆಚ್ಚಿನ ಮಕ್ಕಳಿಗೆ ಫ್ರೀಯಾಗಿದೆ ಎಂದು ಸೋನಾಲ್ ಗಮನಸೆಳೆದಿದ್ದಾರೆ. ಅಲ್ಲಿನ ಸುಮಾರು 90 ಪ್ರತಿಶತ ಮಕ್ಕಳು ಸರ್ಕಾರಿ ಶಾಲೆಗಳಿಗೆಯೇ ಹೋಗುತ್ತಾರೆ.

ಆದರೆ ಖಾಸಗಿ ಪ್ರಿಸ್ಕೂಲ್‌ಗಳು ನೀಡುವ ಕೆಲವು ಸೌಲಭ್ಯಗಳಿಂದಾಗಿ ಆರಂಭಿಕ ಬಾಲ್ಯದ ಶುಲ್ಕಗಳು ಹೆಚ್ಚಾಗಿರುತ್ತವೆ. ಈ ಪ್ರಕರಣವು ಬೇರೆ ಬೇರೆ ದೇಶಗಳಲ್ಲಿ ಮಕ್ಕಳ ಆರಂಭಿಕ ಶಿಕ್ಷಣಕ್ಕಾಗಿ ಲಭ್ಯವಿರುವ ವೆಚ್ಚ ಮತ್ತು ಸೌಲಭ್ಯಗಳಲ್ಲಿನ ಅಗಾಧ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ, ಜನ ಕಾರು ಖರೀದಿಸಲು ಇಷ್ಟು ಹಣ ಬೇಕು ಎಂದು ಲೆಕ್ಕ ಹಾಕುತ್ತಿದ್ದರೆ ಅಮೆರಿಕದಲ್ಲಿ, ಅನೇಕ ಕುಟುಂಬಗಳು ತಮ್ಮ ಮಕ್ಕಳ ಆರಂಭಿಕ ಶಿಕ್ಷಣಕ್ಕಾಗಿ ಈ ಮೊತ್ತವನ್ನು ಖರ್ಚು ಮಾಡುತ್ತಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ