ಹೆಬ್ರಿ | ಕೆಸರು, ಹೊಂಡ ಕಲ್ಲುಗಳ ರಾಶಿ: ಸಂಚಾರಕ್ಕೆ ಸಂಕಷ್ಟ

ಹೆಬ್ರಿ | ಕೆಸರು, ಹೊಂಡ ಕಲ್ಲುಗಳ ರಾಶಿ: ಸಂಚಾರಕ್ಕೆ ಸಂಕಷ್ಟ

ಹೆಬ್ರಿ | ಕೆಸರು, ಹೊಂಡ ಕಲ್ಲುಗಳ ರಾಶಿ: ಸಂಚಾರಕ್ಕೆ ಸಂಕಷ್ಟ

ಹೆಬ್ರಿ: ನಮ್ಮ ರಸ್ತೆಗೆ ಬೇಸಿಗೆಯಲ್ಲಿ ಎಷ್ಟೇ ಮಣ್ಣು ತುಂಬಿಸಿ ದುರಸ್ತಿ ಮಾಡಿದರೂ ಮಳೆಗಾಲದಲ್ಲಿ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿ ಗುಂಡಿಗಳು ಉಂಟಾಗುತ್ತಿವೆ. ದೊಡ್ಡ ಕಲ್ಲುಗಳಿಂದ ಕೂಡಿದ ರಸ್ತೆಯ ಮೇಲೆ ನಡೆದಾಡಲೂ ಕಷ್ಟವಾಗುತ್ತಿದೆ...

ಇದು ತಾಲ್ಲೂಕಿನ ಹೆಬ್ರಿ ಗ್ರಾಮದ ಸಾಂತೊಳ್ಳಿ ಮಣಿಗುಂಡಿ ಪರಿಸರದ ಗ್ರಾಮಸ್ಥರು ಮಳೆಗಾಲದ ಸಂದರ್ಭದಲ್ಲಿ ಅನುಭವಿಸುತ್ತಿರುವ ಸಂಕಷ್ಟ.

ಹೆಬ್ರಿಯಿಂದ ಸಾಂತೊಳ್ಳಿ ಮಣಿಗುಂಡಿ ಕಾರ್ಕಳಜಡ್ಡು ಪ್ರದೇಶಕ್ಕೆ ತಲುಪಲು 7 ಕಿ.ಮೀ ದೂರವಿದೆ. ಹೆಬ್ರಿ ಬಚ್ಚಪ್ಪು ಕಬ್ಬಿನಾಲೆ ಮುಖ್ಯ ರಸ್ತೆಗೆ 3 ಕಿ.ಮೀ ಕ್ರಮಿಸಬೇಕು. 17 ಮನೆಗಳಿರುವ ಸಾಂತೊಳ್ಳಿ ಮಣಿಗುಂಡಿ ಪ್ರದೇಶದ ಮನೆಮಂದಿ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿ ಮನೆಯಲ್ಲಿ ವಾಹನಗಳಿದ್ದರೂ ಅವುಗಳನ್ನು ರಸ್ತೆಗೆ ಇಳಿಸುವಂತಿಲ್ಲ. ಈ ಅಸಹಾಯಕತೆ ಇಲ್ಲಿನ ರಸ್ತೆಯ ಅವ್ಯವಸ್ಥೆಗೆ ಕನ್ನಡಿ ಹಿಡಿಯುವಂತಿದೆ ಎಂದು ಸ್ಥಳೀಯರಾದ ರಜನಿ ಪೂಜಾರಿ ಮಾಹಿತಿ ನೀಡಿದರು.

ಡೇರಿಗೆ ಹಾಲು ನೀಡಲು ಹೋಗುವವರು, ಶಾಲೆಗೆ ಹೋಗುವ ಮಕ್ಕಳು, ಹಿರಿಯರು ಸೇರಿ ಇಲ್ಲಿನ‌ ಮನೆಯವರು ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಇದೆ. ಯಾರಿಗಾದರೂ ಅನಾರೋಗ್ಯವಿದ್ದಾಗ ಅವರನ್ನು ಹೊತ್ತುಕೊಂಡೇ ಹೋಗಬೇಕಿದೆ. ಇಂಥ ಸಂಕಷ್ಟ ಕಾಲದಲ್ಲಿ 2 ಸಾವು ಸಂಭವಿಸಿದೆ ಎಂದು ರಜನಿ ಪೂಜಾರಿ ನೋವು ತೋಡಿಕೊಂಡರು.

ಡಾಂಬರ್ ರಸ್ತೆ ಕನಸಾಗಿಯೇ ಉಳಿದಿದೆ. ಹಲವು ಬಾರಿ ಶಾಸಕರು ಸಹಿತ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಸ್ಪಂದನೆ ಸಿಕ್ಕಿಲ್ಲ. ನಮ್ಮಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ತುರ್ತು ಸಮಸ್ಯೆ ಎದುರಾದರೆ ನಮಗೆಲ್ಲ ದಿಕ್ಕು ತೋಚದಾಗುತ್ತದೆ.‌ ಕಾರ್ಕಳಜಡ್ಡು ಮನೆಗೆ ಮಳೆಗಾಲದಲ್ಲಿ ನಡೆದುಕೊಂಡು ಹೋಗಲು ಕೂಡ ಆಗುವುದಿಲ್ಲ. ರಸ್ತೆಯ ಮೇಲೆಯ ಹೊಳೆ ಹರಿಯುತ್ತದೆ. ಇದ್ದ ಒಂದು ಸಣ್ಣ ಕಾಲು ಸಂಕದಲ್ಲಿ ಹೋಗಲು ಸಾಧ್ಯವಿಲ್ಲ. ಕಾರ್ಕಳಜಡ್ಡಿನಲ್ಲಿ ಸೇತುವೆ ನಿರ್ಮಾಣ ಆಗಬೇಕು ಎಂದು ಗ್ರಾಮಸ್ಥರು ಇಲ್ಲಿನ ಸಂಕಷ್ಟದ ಸ್ಥಿತಿಯನ್ನು ವಿವರಿಸಿದರು.

ಜಿಲ್ಲಾಧಿಕಾರಿ ನಮ್ಮ ಪರಿಸ್ಥಿತಿಯನ್ನು ಅರಿತು ರಸ್ತೆಯ ಕನಸು ನನಸು ಮಾಡಬೇಕು. ಹೆಬ್ರಿ ತಹಶೀಲ್ದಾರ್‌ಗೂ ಮತ್ತೊಮ್ಮೆ ಮನವಿ ನೀಡುತ್ತೇವೆ ಎಂದು ಗ್ರಾಮಸ್ಥರು ಹೇಳಿದರು.

ಕರುಣಾಕರ ಹೆಗ್ಡೆ, ಮಂಜುನಾಥ್, ಕೃಷ್ಣ ಹೆಗ್ಡೆ, ಅಮಿತಾ, ಮಣಿಶ್ರೀ, ಸುಂದರ್, ಅಶ್ವಿನಿ, ರಮೇಶ್, ನಾರಾಯಣ ಕುಲಾಲ್ ಸೇರಿದಂತೆ ಗ್ರಾಮಸ್ಥರು ಸಾಂತೊಳ್ಳಿ ಮಣಿಗುಂಡಿ ಕಾರ್ಕಳಜಡ್ಡು ರಸ್ತೆಯನ್ನು ಕೂಡಲೇ ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಾಂತೊಳ್ಳಿ ಮಣಿಗುಂಡಿ ಮನೆಮಂದಿಯ ಸಂಕಷ್ಟ ಹೇಳ ತೀರದು. ಅಧಿಕಾರಿ ವರ್ಗದವರು ಇಲ್ಲಿನ ಜನರ ಸಮಸ್ಯೆಯನ್ನು ಅರಿತು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬೇಕು. ಗ್ರಾಮಸ್ಥರೊಂದಿಗೆ ತೆರಳಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವಿ ನೀಡುತ್ತೇವೆ ಎಂದು ಸಾಮಾಜಿಕ ಹೋರಾಟಗರ ಶ್ರೀಕಾಂತ್ ಪೂಜಾರಿ ಕುಚ್ಚೂರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-28-1720912048

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ