ಚಿತ್ತಾಪುರ: ದಂಡಗುಂಡ ಬಸವಣ್ಣ ದೇವರ ಜಾತ್ರೆಗೆ ಸಿದ್ಧತೆ

ಚಿತ್ತಾಪುರ: ದಂಡಗುಂಡ ಬಸವಣ್ಣ ದೇವರ ಜಾತ್ರೆಗೆ ಸಿದ್ಧತೆ

ಚಿತ್ತಾಪುರ: ದಂಡಗುಂಡ ಬಸವಣ್ಣ ದೇವರ ಜಾತ್ರೆಗೆ ಸಿದ್ಧತೆ

ಚಿತ್ತಾಪುರ: ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರ ದಂಡಗುಂಡ ಗ್ರಾಮದ ಬಸವಣ್ಣ ದೇವರ ಜಾತ್ರೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಕಾರ್ಯಕ್ರಮಗಳು ದೇವಾಲಯದ ಟ್ರಸ್ಟ್ ನೇತೃತ್ವದಲ್ಲಿ ಶ್ರಾವಣ ಮಾಸದ ನಡುವಿನ (ಆ.31) ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಲಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜಾತ್ರಾ ಸಂಪ್ರದಾಯದಂತೆ ಜರುಗಲಿದ್ದು, ಮಹಾಂತಗೌಡ ಪಾಟೀಲ ಅವರ ಮನೆಯಿಂದ ಕುಂಭ, ಸಂಗಣ್ಣಗೌಡ ಪೊಲೀಸ್ ಪಾಟೀಲ ಅವರ ಮನೆಯಿಂದ ರಥದ ಕಳಸದ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದವರೆಗೆ ನಡೆಯಲಿದೆ.

ಸಂಜೆ 6 ಗಂಟೆಗೆ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ. ಬಳಿಕ ದೇವಸ್ಥಾನದ ಪರಿಸರದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 1 ರಂದು ಕೈಕುಸ್ತಿ ಪಂದ್ಯಗಳು ನಡೆಯಲಿವೆ. ಜಾತ್ರಾ ಕಾರ್ಯಕ್ರಮಕ್ಕೆ ಕಲಬುರಗಿ, ಯಾದಗಿರಿ, ಸೇಡಂ, ಕಾಳಗಿ ಕಡೆಯಿಂದ ಭಕ್ತರು ಬಂದು ಹೋಗಲು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಜಾತ್ರಾ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ತಿಳಿಸಿದ್ದಾರೆ.

ಕಾರ್ಕಳ ಶಿಲೆಯಿಂದ ದೇವಾಲಯ ನಿರ್ಮಾಣ: ದಂಡಗುಂಡ ಬಸವೇಶ್ವರ ದೇವಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಕಾರ್ಕಳ ಶಿಲೆಯಿಂದ ನೂತನ ದೇವಾಲಯ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಕಪ್ಪುಶಿಲೆಯ ಅತ್ಯಾಕರ್ಷಕ ಕಲಾತ್ಮಕ ಕಂಬಗಳನ್ನು ಅಳವಡಿಸಲಾಗಿದೆ. ಗರ್ಭಗುಡಿ, ಅದರ ಪ್ರದಕ್ಷಿಣಾ ಪಥ, ವಿಶಾಲ ಪ್ರಾಂಗಣ ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲೆ ಅತ್ಯಾಕರ್ಷಕ ಶಿಖರ ನಿರ್ಮಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ.

‘ಅತ್ಯಂತ ಹಿಂದುಳಿದ ಗ್ರಾಮದಲ್ಲಿ ದೈವಭಕ್ತಿ ಅನನ್ಯವಾಗಿದೆ. ಭಕ್ತರ ಸಹಾಯ, ಸಹಕಾರದಿಂದ ಸುಂದರ ದೇವಾಲಯ ನಿರ್ಮಾಣ ಸಾಧ್ಯವಾಗುತ್ತಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರು, ಉಪಾಧ್ಯಕ್ಷ ಬಿ.ಜಿ. ಪಾಟೀಲ, ಸದಸ್ಯ ಭೀಮಣ್ಣಾ ಸಾಲಿ ಅವರು ಹೇಳುತ್ತಾರೆ.

ಹನುಮಾನ ದೇವಾಲಯದಿಂದ ಕಳಸ ಮೆರವಣಿಗೆ

ನೂತನ ದೇವಸ್ಥಾನದ ಶಿಖರಕ್ಕೆ ಕಳಸಾರೋಹಣಕ್ಕೆಂದು ಗ್ರಾಮದ ತವರು ಮನೆಯಿಂದ ಮದುವೆ ಮಾಡಿಕೊಂಡು ಹೋಗಿರುವ ಮಹಿಳೆಯರು ತಲಾ ₹1,100 ಕಾಣಿಕೆ ನೀಡಿದ್ದರಿಂದ ಭಾನುವಾರ ಕಳಸಾರೋಹಣ ಸಡಗರ, ಸಂಭ್ರಮದಿಂದ, ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಂಪ್ರದಾಯದಂತೆ ನೆರವೇರಿಸಲಾಯಿತು. ಇದಕ್ಕೂ ಮುಂಚೆ ಗ್ರಾಮದ ಹನುಮಾನ ದೇವಾಲಯದಿಂದ ಬಸವಣ್ಣ ದೇವಸ್ಥಾನದವರೆಗೆ ಕಳಸದ ಭವ್ಯ ಮೆರವಣಿಗೆ ನಡೆಸಲಾಯಿತು. ಕಳಸಕ್ಕೆಂದು ಕಾಣಿಕೆ ಹಣ ನೀಡಿದ ಮಹಿಳೆಯರು ಅರಿಶಿನ ಬಣ್ಣದ ಸೀರೆ ತೊಟ್ಟು ಗಮನ ಸೆಳೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-34-1505918162

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ