ಕಮಲಾಪುರ: ರೇವಣಸಿದ್ದೇಶ್ವರ ಗುಡ್ಡದ ಐತಿಹ್ಯ

ಕಮಲಾಪುರ: ರೇವಣಸಿದ್ದೇಶ್ವರ ಗುಡ್ಡದ ಐತಿಹ್ಯ

ಕಮಲಾಪುರ: ರೇವಣಸಿದ್ದೇಶ್ವರ ಗುಡ್ಡದ ಐತಿಹ್ಯ

ಕಾಳಗಿ: ಈಚೆಗೆ ಕಾಳಗಿ ತಾಲ್ಲೂಕಿನಿಂದ ಬೇರ್ಪಟ್ಟು ಕಮಲಾಪುರ ತಾಲ್ಲೂಕಿಗೆ ಒಳಪಟ್ಟಿರುವ ಧಾರ್ಮಿಕ ಪುಣ್ಯಕ್ಷೇತ್ರ ‘ರೇವಗ್ಗಿ ಗುಡ್ಡ’ ಹಲವು ವರ್ಷಗಳಿಂದ ‘ರಟಕಲ್ ರೇವಣಸಿದ್ದೇಶ್ವರ ಗುಡ್ಡ’ ಎಂದೇ ಹೆಸರು ವಾಸಿಯಾಗಿದೆ.

ಇಲ್ಲಿ ಪ್ರತಿವರ್ಷ ಶ್ರಾವಣ ಮಾಸದ 3ನೇ ಸೋಮವಾರ ನಡೆಯುವ ಜಾತ್ರಾ ಮಹೋತ್ಸವ ಕಲ್ಯಾಣ ಕರ್ನಾಟಕ ಪ್ರದೇಶದ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ. ಈ ದಿನ ಸಂಜೆ 4.30ಕ್ಕೆ ನಡೆಯುವ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವ ನೋಡಲು ನಾಡು–ಹೊರನಾಡಿನ ಸಾವಿರಾರು ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ.

ಶತಮಾನಗಳ ಹಿಂದೆ ಬಾಲಕನ ರೂಪದಲ್ಲಿದ್ದ ರೇವಣಸಿದ್ದೇಶ್ವರರು ರಟಕಲ್ ಗ್ರಾಮದ ನಡುವಿನ ಮಠಕ್ಕೆ ಬಂದು ಉಳಿದುಕೊಂಡಿದ್ದರು. ಮಠದ ಮುಂದಿನ ಕಲಶೆಟ್ಟಿ ಎಂಬುವವರ ಮನೆಯಲ್ಲಿ ದುಡಿದು ಎಣ್ಣೆಗಾಣ ಹೊಡೆಯುತ್ತಿದ್ದರು. ಎಳ್ಳ ಅಮಾವಾಸ್ಯೆ ದಿನ ಈ ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಸ್ನಾನಗೈದು ಪೂಜೆ, ಧ್ಯಾನದಲ್ಲಿ ಮಗ್ನರಾಗಿದ್ದರು. ಮನೆಯವರು ಬಂದು ನೋಡಿದಾಗ ತಾನು ‘ರೇವಣಸಿದ್ದೇಶ್ವರ ದೇವರು’ ಇರುವುದಾಗಿ ಹೇಳಿ ಆಶೀರ್ವಾದ ಮಾಡಿ ಅಲ್ಲಿಂದ ಕುದುರೆಯೊಂದಿಗೆ ಹೊರಟು ಹೊರವಲಯದ ಗುಡ್ಡ ‘ಸಾವಳಗಿ ಸಿದ್ದಲಿಂಗಪ್ಪ’ ಎಂಬ ಗವಿಗೆ ತೆರಳಿದ್ದರು’ ಎನ್ನುತ್ತಾರೆ ಹಿರಿಯರು.

ಗವಿಯ ವಾತಾವರಣವು ಹಿಡಿಸಲಾಗದ ರೇವಣಸಿದ್ದೇಶ್ವರರು ಪಾದಗಟ್ಟಿ ಮತ್ತು ಈಗಿನ ‘ಕಮರಿ ಮಠ’ದ ಸ್ಥಳಕ್ಕೆ ತೆರಳಿದ್ದರು. ಇಲ್ಲಿಯೂ ಜನಜಂಜಾಟ ನೋಡಲಾಗದೆ ಕೊನೆಗೆ ಐಕ್ಯವಾಗಿರುವ ಸ್ಥಳವೇ ‘ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡವಾಗಿದೆ’ ಎಂದು ಹೇಳುತ್ತಾರೆ ಮುಖಂಡ ವೀರಣ್ಣಾ ಗಂಗಾಣಿ.

ಆಗಿನಿಂದ ಈಗಲೂ ಶ್ರಾವಣಮಾಸದಲ್ಲಿ ಪ್ರತಿದಿನ ರಟಕಲ್ ಗ್ರಾಮದ ಸಿದ್ದಪ್ಪ ಭೀಮಳ್ಳಿ ಮನೆತನದಿಂದ ರೇವಣಸಿದ್ದೇಶ್ವರನಿಗೆ ನೈವೇದ್ಯ ಸಲ್ಲಿಕೆಯಾಗುತ್ತದೆ. ಜಾತ್ರೆ ವೇಳೆ ರಟಕಲ್ ಭಕ್ತರೇ ಸಾಮೂಹಿಕ ಭಜನೆಯೊಂದಿಗೆ ಕಾಲ್ನಡಿಗೆ ಮೂಲಕ ಗುಡ್ಡಕ್ಕೆ ತೆರಳಿ ಮಂಗಳಾರತಿ ಮಾಡುತ್ತಾರೆ.

‘ರೇವಗ್ಗಿ ದೇವರಮನೆಯವರು ನಮ್ಮೂರಿನ ರುದ್ರಶೆಟ್ಟಿ ಗುರುಮಠಕಲ್ ಎಂಬುವರ ಕೈಗೆ ಉತ್ಸವಮೂರ್ತಿ ಕೊಟ್ಟ ನಂತರವೇ ಬೆಳ್ಳಿ ಅಲಂಕೃತ ಪಲ್ಲಕ್ಕಿ ಮೆರವಣಿಗೆ ಶುರುಮಾಡಿ ಎರಡು ಸುತ್ತು ಭವ್ಯ ಪ್ರದಕ್ಷಿಣೆ ಹಾಕುತ್ತದೆ. ಬಳಿಕ ಬೆನಕನ ಅಮಾವಾಸ್ಯೆ ನಂತರದ ಶುಕ್ರವಾರ ಈ ಉತ್ಸವಮೂರ್ತಿಯನ್ನು ದೇವರ ಮನೆಯವರಿಗೆ ಮೆರವಣಿಗೆಯೊಂದಿಗೆ ಒಪ್ಪಿಸಲಾಗುತ್ತದೆ’ ಎನ್ನುತ್ತಾರೆ ರಟಕಲ್ ಭಕ್ತರು.

ರೇವಣಸಿದ್ದೇಶ್ವರರು ರಟಕಲ್ ಗ್ರಾಮದಲ್ಲಿ ಕುದುರೆ ಮೇಲೆ ಓಡಾಡಿದ್ದರಿಂದ ಗ್ರಾಮದಲ್ಲಿ ಯಾರೂ ಯಾವುದೇ ಕಾರಣಕ್ಕೂ ಇಲ್ಲಿವರೆಗೂ ನಾಲು ಬಳಸಿರುವುದಿಲ್ಲ. ನಮ್ಮೂರಿನವರೇ ₹15 ಲಕ್ಷ ದೇಣಿಗೆಯಿಂದ ಗುಡ್ಡದಲ್ಲಿ 108 ಮೆಟ್ಟಿಲುಗಳೊಂದಿಗೆ ದ್ವಾರಬಾಗಿಲು ನಿರ್ಮಿಸಿದ್ದೇವೆ. ಗುಡ್ಡದಲ್ಲಿ ಇವತ್ತಿಗೂ ರಟಕಲ್ ಭಕ್ತರ ಕಾರ್ಯಭಾರವೇ ಹೆಚ್ಚಿರುತ್ತದೆ ಎನ್ನುತ್ತಾರೆ ರೇವಣಸಿದ್ದ ಬಡಾ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-34-1366115367

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ