ಬೆಂಗಳೂರು: ನಗರದ ಸ್ಟಾರ್ಟ್ಅಪ್ ಯುಫೊಟಿಕ್ ಲ್ಯಾಬ್ಸ್‌ನ ಸಹ-ಸಂಸ್ಥಾಪಕ ಯತಿನ್ ವರಾಚಿಯಾ( 34) ಎನ್ನುವವರು ಆಹಾರ ತಯಾರಿಸುವ ರೋಬಾಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು 120 ರೀತಿಯ ಅಡುಗೆಗಳನ್ನು ತಯಾರಿಸುತ್ತದೆ.
ಗುಜರಾತ್‌ನ ಕಾಂಟ್ವಾ ಎಂಬ ಸಣ್ಣ ಹಳ್ಳಿಯ ಯತಿನ್ 2008 ರಲ್ಲಿ ಅಧ್ಯಯನಕ್ಕಾಗಿ ಬೆಂಗಳೂರಿಗೆ ತೆರಳಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಯಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಎಲ್ಲೆಡೆ ಉತ್ತಮ ಆಹಾರವನ್ನು ಪಡೆಯಲು ಸಾಧ್ಯವಾಗದೆ ಹೆಣಗಾಡಿದ್ದರು.
ಯತಿನ್ ಮದುವೆಯಾದ ಬಳಿಕ ಪತ್ನಿಯೂ ಉದ್ಯೋಗಿಯಾದ ಕಾರಣ ಅಡುಗೆ ತಯಾರಿಸಲು ಸಮಯವಿರದೆ ರುಚಿಕರ ಅಡುಗೆಗಾಗಿ ಹುಡುಕಾಡಿದರು.
ಹೀಗಾಗಿ ಮೂವರು ಸ್ನೇಹಿತರೊಂದಿಗೆ ಚರ್ಚಿಸಿ ಮೂರು ವರ್ಷಗಳ ಸತತ ಪ್ರಯತ್ನದಿಂದ ಅಡುಗೆ ಮಾಡುವ ಸ್ವಯಂಚಾಲಿತ ರೊಬೋಟ್ ತಯಾರಿಸಿದ್ದಾರೆ.
ಯಂತ್ರವು ಮೈಕ್ರೊವೇವ್‌ನ ಗಾತ್ರದ್ದಾಗಿದೆ. ಬೇಕಾದ ಮಸಾಲೆಗಳನ್ನು ಅದರ ಪಾತ್ರೆಗೆ ಹಾಕಿದರೆ ರುಚಿಯಾದ ಆಹಾರ ತಯಾರಿಸಿಕೊಡುತ್ತದೆ ಎನ್ನುತ್ತಾರೆ ಯತಿನ್.
ಈ ಯಂತ್ರಕ್ಕೆ ಏಷ್ಯಾ, ಯುಕೆ, ಆಸ್ಟ್ರೇಲಿಯಾ ಮತ್ತು ವಿಶ್ವದ ಇತರ ಭಾಗಗಳಲ್ಲಿ ಗ್ರಾಹಕರು ಇದ್ದಾರಂತೆ. ಹೀಗಾಗಿ ಅಡುಗೆ ಮಾಡುವ ರೊಬೋಟ್ ಜನಪ್ರಿಯಗೊಳ್ಳುತ್ತಿದೆ.

