ನವದೆಹಲಿ: ದೇಶದಲ್ಲಿ ಅಮುಲ್ ಹಾಲಿನ ಬೆಲೆ 2ರೂ. ಏರಿಕೆ ಮಾಡಲಾಗಿದ್ದು, ಜು.1ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.
ಸದ್ಯ ಒಂದು ಲೀಟರ್ ಹಾಲಿನ ಬೆಲೆ 55 ರೂ. ಇದ್ದು, ಇನ್ಮುಂದೆ ಪ್ರತಿ ಲೀಟರ್ ಹಾಲಿನ ಬೆಲೆ 57ರೂ ಆಗಲಿದೆ. ಹೊಸ ಬೆಲೆ ದೆಹಲಿ, ಕರ್ನಾಟಕ, ಪಂಜಾಬ್, ಗುಜರಾತ್ ಸೇರಿದಂತೆ ಎಲ್ಲೆಡೆ ಜಾರಿಗೊಳ್ಳಲಿದೆ.
ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಕಾರಣ ಸುಮಾರು ಒಂದು ವರ್ಷ 7 ತಿಂಗಳ ನಂತರ ಹಾಲಿನ ಬೆಲೆಯಲ್ಲಿ ಏರಿಕೆ ಮಾಡುತ್ತಿದ್ದೇವೆ ಎಂದು ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ತಿಳಿಸಿದ್ದಾರೆ.
