ವಾಷಿಂಗ್ಟನ್: ಬ್ರೆಜಿಲ್ ನಲ್ಲಿ ಕೊರೋನಾ ಲಸಿಕೆ ಖರೀದಿ ಭಾರೀ ಸದ್ದು ಮಾಡುತ್ತಿದೆ. ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಆರೋಪ ಕೂಡ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಭಾರತದ ಬಯೋಟೆಕ್ ಸಂಸ್ಥೆಯಿಂದ ಖರೀದಿಸಲು ಉದ್ದೇಶಿಸಿದ್ದ 324 ಮಿಲಿಯನ್ ಡಾಲರ್ ಮೌಲ್ಯದ 2 ಕೋಟಿ ಲಸಿಕೆ ಒಪ್ಪಂದ ರದ್ದುಪಡಿಸಲು ಬ್ರೆಜಿಲ್ ತೀರ್ಮಾನಿಸಿದೆ.
ಬ್ರೆಜಿಲ್ ಆರೋಗ್ಯ ಸಚಿವರು ಇದನ್ನು ಬಹಿರಂಗಪಡಿಸಿದ್ದಾರೆ.
ಬ್ರೆಜಿಲ್ ಆರೋಗ್ಯ ಇಲಾಖೆಯಲ್ಲಿ ಲಸಿಕೆ ಖರೀದಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.
Tags
Nation
