ಕೋವಿಡ್ ಸಂಕಷ್ಡಕ್ಕೆ ಪ್ರಾಣಿ ಪಕ್ಷಿಗಳು ಸಹ ಈಡಾಗಿದ್ದು ಕಂಡು ಬಂದಿದೆ ನಗರದ ಹೊರ ವಲಯದ ಆಡುಮಲ್ಲೇಶ್ವರ ಮೃಗಾಲಯದ ಬಳಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಕಳೆದ ಹಲವು ದಿನಗಳಿಂದಲೂ ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದನ್ನ ಅರಿತಂತ ಜಿಲ್ಲಾ ಆರ್ಯ ವೈಶ್ಯ ಸಂಘದಿಂದ ಇಂದು ಆಡುಮಲ್ಲೇಶ್ವರ ಮೃಗಾಲಯದ ಬಳಿಯ ಕಾಡಿನಲ್ಲಿ ವಾಸಿಸುವಂತಹ ಮಂಗ, ನವಿಲು, ಹಲವು ಬಗೆಯ ಪ್ರಾಣಿ ಪಕ್ಷಿಗಳಿಗೆ ಬಾಳೆಹಣ್ಣು, ದವಸ ದಾನ್ಯ, ಬ್ರೆಡ್ ಗಳನ್ನ ಹಾಕಲಾಯಿತು. ಬೆಳಗ್ಗೆಯೇ ತೆರಳಿದ ಆರ್ಯ ವೈಶ್ಯ ಸಂಘದ ಸದಸ್ಯರು ಗಳು ಮಲ್ಲೇಶ್ವರದಲ್ಲಿನ ಪ್ರಾಣಿ ಪಕ್ಷಿಗಳಿಗೆ ಹಾಗೂ ಕೋತಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಲ್ ಆರ್ ವೆಂಕಟೇಶ ಕುಮಾರ್ ಹಾಗೂ ಸಂಘದ ಸದಸ್ತರುಗಳು ಬಾಗವಹಿಸಿದ್ದರು.