
ಹೊಸದುರ್ಗ | ಮೂರು ಕೇಬಲ್ ಕಳ್ಳತನ ಪ್ರಕರಣ: ಇಬ್ಬರ ಬಂಧನ
ಹೊಸದುರ್ಗ: ಮೂರು ಕೇಬಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಚೆಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ಮಾಡದಕೆರೆ ಗ್ರಾಮದ ಈರಪ್ಪ (55) ಹಾಗೂ ಪ್ರಸನ್ನ(26) ಬಂಧಿತರು. ಬಂಧಿತರಿಂದ ₹ 1.40 ಲಕ್ಷ ಮೌಲ್ಯದ 1000 ಅಡಿ ಉದ್ದದ ಎಲೆಕ್ಟ್ರಿಕಲ್ ಕೇಬಲ್, ₹ 18,000 ನಗದು, ಕೃತ್ಯಕ್ಕೆ ಉಪಯೋಗಿಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ.
ತಾಲ್ಲೂಕಿನ ಮಾವಿನಕಟ್ಟೆ ಗ್ರಾಮದ ತಿಪ್ಪೇಸ್ವಾಮಿ, ರಂಗಸ್ವಾಮಿ, ಶಾರದಮ್ಮ ಅವರು ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಕೇಬಲ್‌ಗಳು ಕಳ್ಳತನ ಆಗಿರುವ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್‌ಸ್ಪೆಕ್ಟರ್ ರಮೇಶ್ ಕೆ.ಟಿ, ಪಿಎಸ್‌ಐ ಶ್ರೀಶೈಲ, ಮಹೇಶ್ ಕುಮಾರ್ ಎನ್, ಸಂಗನಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಸಿ, ಪ್ರಕರಣ ಪತ್ತೆ ಹಚ್ಚಿದ್ದರು. ತನಿಖಾ ತಂಡದಲ್ಲಿ ಸಿಬ್ಬಂದಿ ಕುಮಾರ್, ಉಮೇಶ್, ಗಂಗಾಧರ, ಚಂದ್ರಪ್ಪ, ತಿಪ್ಪೇಸ್ವಾಮಿ, ಪ್ರಕಾಶ್, ಸತೀಶ್ ಇದ್ದರು.