ಹಿರಿಯೂರು: ಗ್ರಾಮ ಪಂಚಾಯತಿ ಕಚೇರಿಗೆ ಮಹಿಳೆಯರ ಮುತ್ತಿಗೆ

ಹಿರಿಯೂರು: ಗ್ರಾಮ ಪಂಚಾಯತಿ ಕಚೇರಿಗೆ ಮಹಿಳೆಯರ ಮುತ್ತಿಗೆ

ಹಿರಿಯೂರು: ಗ್ರಾಮ ಪಂಚಾಯತಿ ಕಚೇರಿಗೆ ಮಹಿಳೆಯರ ಮುತ್ತಿಗೆ

ಹಿರಿಯೂರು: ಕುಡಿಯುವ ನೀರು ಪೂರೈಸಲು ಆಗ್ರಹಿಸಿ ತಾಲ್ಲೂಕಿನ ಕಸ್ತೂರಿರಂಗಪ್ಪನಹಳ್ಳಿಯಲ್ಲಿ ಶುಕ್ರವಾರ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಒಂದು ತಿಂಗಳಿಂದ ಕುಡಿಯುವ ನೀರು ಪೂರೈಸುವಂತೆ ಊರಿಗೆ ಬಂದ ಅಧಿಕಾರಿಗಳ ಮುಂದೆ ಅಂಗಲಾಚುತ್ತಿದ್ದೇವೆ. ನಮ್ಮ ಪಂಚಾಯಿತಿಗೆ ಕಾಯಂ ಪಿಡಿಒ ಇಲ್ಲ. ಹೆಚ್ಚುವರಿಯಾಗಿ ಒಬ್ಬರನ್ನು ನೇಮಿಸಿದ್ದು, ಅವರಿಗೆ ಸಮಸ್ಯೆಯ ಅರಿವೇ ಆಗುತ್ತಿಲ್ಲ. ನಾಲ್ಕೈದು ದಿನಗಳಿಗೆ ಒಮ್ಮೆ ನೀರು ಬಿಡುತ್ತಿದ್ದಾರೆ. ಹೀಗಾದರೆ ದನ– ಕರುಗಳನ್ನು ನೋಡಿಕೊಳ್ಳುವುದು ಹೇಗೆ ಎಂದು ಧರಣಿ ನಿರತ ಮಹಿಳೆಯರು ಆಕ್ರೋಶ ಹೊರ ಹಾಕಿದರು.

‘ಗ್ರಾಮದಲ್ಲಿ ಕೊಳವೆ ಬಾವಿಗಳಲ್ಲಿ ನೀರು ಸಿಗದ ಕಾರಣಕ್ಕೆ 3 ಕಿ.ಮೀ. ದೂರ ಇರುವ ರೈತರೊಬ್ಬರ ಕೊಳವೆ ಬಾವಿಯನ್ನು ಗುತ್ತಿಗೆ ಪಡೆದು ನೀರು ಬಿಡುತ್ತಿದ್ದಾರೆ. ಅವರು ತಮ್ಮ ಬೆಳೆಗೆ ನೀರು ಹಾಯಿಸಿಕೊಂಡ ನಂತರ ಜನರಿಗೆ ನೀರು ಕೊಡುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಸಿಗುತ್ತಿಲ್ಲ’ ಎಂದು ಗ್ರಾಮದ ಮುಖಂಡ ಕೆ.ಎಚ್. ರಂಗನಾಥ್ ಆರೋಪಿಸಿದರು.

ಕಸ್ತೂರಿ ರಂಗಪ್ಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆ.ಆರ್.ಹಳ್ಳಿ ಗೊಲ್ಲರಹಟ್ಟಿ, ಡಿ. ಮಂಜುನಾಥ ನಗರ, ವಡ್ಡನಹಳ್ಳಿ, ಬೋರನಕುಂಟೆ, ಗೊರ್ಲಡುಕು, ಪಿಟ್ಲಾಲಿ ಗ್ರಾಮಗಳು ಬರಲಿದ್ದು, ಪಿಟ್ಲಾಲಿ ಗ್ರಾಮ ಹೊರತುಪಡಿಸಿ ಉಳಿದೆಲ್ಲ ಕಡೆ ಕುಡಿಯುವ ನೀರಿಗೆ ಸಮಸ್ಯೆ ಉಲ್ಬಣಿಸಿದೆ. ದಿನವೆಲ್ಲ ನೀರಿಗಾಗಿ ಕಾಯುವುದೇ ಕೆಲಸವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರೈತ ಸಂಘ ಬೆಂಬಲ: ಮಹಿಳೆಯರು ಧರಣಿ ನಡೆಸುತ್ತಿರುವ ಸುದ್ದಿ ತಿಳಿದು ರೈತ ಸಂಘ ಮತ್ತು ಹಸಿರುಸೇನೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಗ್ರಾಮಕ್ಕೆ ಬಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

‘ಕುಡಿಯುವ ನೀರು, ಶಿಕ್ಷಣ, ಆರೋಗ್ಯದ ವ್ಯವಸ್ಥೆ ಮಾಡುವ ಹೊಣೆ ಸರ್ಕಾರದ್ದು. ಇವರಿಗೆ ಕನಿಷ್ಠ ಕುಡಿಯುವ ನೀರು ಕೊಡಲು ಆಗುತ್ತಿಲ್ಲ ಎಂದರೆ ರಾಜ್ಯದಲ್ಲಿ ಜನಪರ ಸರ್ಕಾರ ಇದೆಯೇ ಎಂದು ಕೇಳ ಬೇಕಾಗಿದೆ. ಒಂದೆರಡು ದಿನದಲ್ಲಿ ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆ ಮಾಡದಿದ್ದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಳಗಟ್ಟ ವೆಂಕಟೇಶ್, ಆಲೂರು ಸಿದ್ದರಾಮಣ್ಣ, ತಿಮ್ಮಣ್ಣ, ರಾಜಣ್ಣ, ಜೆ.ಜಿ. ಹಳ್ಳಿ ಈರಣ್ಣ ಹಾಜರಿದ್ದರು.

ನೀರು ಸರಬರಾಜು ಹೊಣೆ ಹೊತ್ತಿರುವ ಗುತ್ತಿಗೆದಾರರಿಗೆ ಹಣ ಪಾವತಿ ಮಾಡದ ಕಾರಣಕ್ಕೆ ನೀರಿನ ಸಮಸ್ಯೆ ಆಗಿದೆ. ಒಂದೆರಡು ದಿನದಲ್ಲಿ ಹಣ ಸಂದಾಯ ಮಾಡಿಸಿ ಪರಿಹರಿಸಲಾಗುವುದು ಎಂ.ಸಿದ್ದೇಶ್, ತಹಶೀಲ್ದಾರ್, ಹಿರಿಯೂರು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ