ರೈತರ ನೆಮ್ಮದಿಗೆ ಚೆಕ್‌ ಡ್ಯಾಂಗಳ ನಿರ್ಮಾಣ: ಶಾಸಕ ವೀರೇಂದ್ರ

ರೈತರ ನೆಮ್ಮದಿಗೆ ಚೆಕ್‌ ಡ್ಯಾಂಗಳ ನಿರ್ಮಾಣ: ಶಾಸಕ ವೀರೇಂದ್ರ

ರೈತರ ನೆಮ್ಮದಿಗೆ ಚೆಕ್‌ ಡ್ಯಾಂಗಳ ನಿರ್ಮಾಣ: ಶಾಸಕ ವೀರೇಂದ್ರ

ಸಿರಿಗೆರೆ: ‘ಅಂತರ್ಜಲ ಹೆಚ್ಚಿಸಲು ಚೆಕ್‌ ಡ್ಯಾಂಗಳ ನಿರ್ಮಾಣ ಅಗತ್ಯವಾಗಿದ್ದು, ಅವು ತುಂಬಿದಾಗ ರೈತರಿಗೆ ನೆಮ್ಮದಿ ದೊರೆಯುವುದು’ ಎಂದು ಶಾಸಕ ಕೆ.ಸಿ. ವೀರೇಂದ್ರ ಹೇಳಿದರು.

ಸಮೀಪದ ಜೋಡಿ ಚಿಕ್ಕೇನಹಳ್ಳಿ ಮತ್ತು ದೇವಪುರದಹಟ್ಟಿ ಗ್ರಾಮಗಳಲ್ಲಿನ ಹಳ್ಳಗಳಿಗೆ ಗುರುವಾರ ಸುಮಾರು ₹ 4.52 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆ ಅರೆಬಯಲು ಪ್ರದೇಶವಾಗಿದ್ದು, ಮಳೆಯ ಪ್ರಮಾಣ ಮತ್ತು ನೀರಿನ ಲಭ್ಯತೆ ಕೃಷಿ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಹಳ್ಳ- ಕೊಳ್ಳಗಳ ಮೂಲಕ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗಿ ವ್ಯರ್ಥವಾಗುತ್ತದೆ. ಇಂತಹ ನೀರನ್ನು ಚೆಕ್ ಡ್ಯಾಂಗಳ ಮೂಲಕ ತಡೆದು ಸಂಗ್ರಹಿಸುವುದರಿಂದ ಭೂಮಿಯೊಳಗೆ ನೀರು ಇಂಗಲು ಅವಕಾಶ ದೊರೆಯುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಅಂತರ್ಜಲ ಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ’ ಎಂದರು.

‘ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಕ್ಕ ಡ್ಯಾಂಗಳ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು, ಕಳಪೆಯಾಗಿದ್ದು ಕಂಡು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭೀಮರಾಜ್ ಮಾತನಾಡಿ, ‘ಜಲಸಂರಕ್ಷಣಾ ಕಾಮಗಾರಿಗಳು ಕೇವಲ ಒಂದು ಗ್ರಾಮದ ಅಭಿವೃದ್ಧಿಗೆ ಸೀಮಿತವಾಗದೆ ಸುತ್ತಮುತ್ತಲಿನ ಪ್ರದೇಶಗಳಿಗೂ ಪ್ರಯೋಜನ ನೀಡುತ್ತವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಫಾತಿಮಾ, ತಾ.ಪಂ. ಇಒ ಜಯಸಿಂಹ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಸುಹಿಲ್ ರಹೀಮ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಸಂತೋಷ್, ಮುಖಂಡರಾದ ಹನೀಸ್, ಖುದುಸ್, ವಿಜಯ್ ಕುಮಾರ್, ನಾಗರಾಜ್, ಮಂಜುನಾಥ್, ತಿಪ್ಪೇಶ್, ರಂಗಸ್ವಾಮಿ ಹಾಗೂ ಇತರರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ