Karnataka Rains: ಬೆಂಗಳೂರು, ಕೋಲಾರ ಸಹಿತ ಹಲವು ಕಡೆ ಉತ್ತಮ ಮಳೆ, ಎಲ್ಲಿ ಎಷ್ಟು?

Karnataka Rains: ಬೆಂಗಳೂರು, ಕೋಲಾರ ಸಹಿತ ಹಲವು ಕಡೆ ಉತ್ತಮ ಮಳೆ, ಎಲ್ಲಿ ಎಷ್ಟು?

Karnataka Rains: ಬೆಂಗಳೂರು, ಕೋಲಾರ ಸಹಿತ ಹಲವು ಕಡೆ ಉತ್ತಮ ಮಳೆ, ಎಲ್ಲಿ ಎಷ್ಟು?

ಬೆಂಗಳೂರು: ಬೆಂಗಳೂರು ನಗರದ ಹೆಚ್ಚಿನ ಸ್ಥಳಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೆಚ್ಚು ಮಳೆಯಾಗಿದೆ. ಕೋಲಾರ, ಮೈಸೂರು ಭಾಗದಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರು ನಗರದ ದೊಡ್ಡಗುಬ್ಬಿಯಲ್ಲಿ ಅತ್ಯಧಿಕ 138.5 ಮಿ.ಮೀ ಮಳೆಯಾಗಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಚಿನ್ನಕೋಟೆಯಲ್ಲಿ 110.5 ಮಿ.ಮೀ, ದೊಡ್ಡವೊಲಗಮಡಿಯಲ್ಲಿ 102 ಮಿ.ಮೀ, ಬೆಂಗಳೂರಿನ ಮಹದೇವಪುರ ಹೊರಮಾವಿನಲ್ಲಿ 99 ಮಿ.ಮೀ, ಚಿಕ್ಕಮಗಳೂರು ತಾಲ್ಲೂಕಿನ ಮಳಲೂರಿನಲ್ಲಿ 89 ಮಿ.ಮೀ ಮಳೆಯಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಮಾಗೊಂಡಿಯಲ್ಲಿ 85 ಮಿ.ಮೀ, ಯಲಹಂಕದ ಜಕ್ಕೂರು 82.5 ಮಿ.ಮೀ, ಯಲಹಂಕದಲ್ಲಿ 77.75 ಮಿ.ಮೀ, ಬಂಗಾರಪೇಟೆ ತಾಲ್ಲೂಕಿನ ಯಲೆಸಂದ್ರದಲ್ಲಿ 69.5 ಮಿ.ಮೀ, ಯಲಹಂಕ ಸಮೀಪದ ಚೌಡೇಶ್ವರಿಯಲ್ಲಿ 67 ಮಿ.ಮೀ, ಕೃಷ್ಣರಾಜಪುರದಲ್ಲಿ 66.5 ಮಿ.ಮೀ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಬೈಲೂರಿನಲ್ಲಿ 64.25 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ದೊಡ್ಡರಲಗೆರೆಯಲ್ಲಿ 62.5 ಮಿ.ಮೀ, ಬೆಂಗಳೂರು ನಗರದ ಅವಲಹಳ್ಳಿಯಲ್ಲಿ 62 ಮಿ.ಮೀ, ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಬೀಡನಹಳ್ಳಿಯಲ್ಲಿ 61 ಮಿ.ಮೀ, ದೊಡ್ಡಬನಹಳ್ಳಿ ಹಾಗೂ ತಿ.ನರಸೀಪುರ ತಾಲ್ಲೂಕಿನ ಕುಪ್ಯದಲ್ಲಿ ತಲಾ 58.5 ಮಿ.ಮೀ, ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರದಲ್ಲಿ 58 ಮಿ.ಮೀ ಮಳೆಯಾಗಿದೆ.

ಬೆಂಗಳೂರು ನಗರದ ಹುಣಸೇಮಾರನಹಳ್ಳಿಯಲ್ಲಿ 57.5 ಮಿ.ಮೀ, ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹಾಗೂ ಘಟ್ಟಕಾಮಡೇನಹಳ್ಳಿಯಲ್ಲಿ 55.5 ಮಿ.ಮೀ, ಬೆಂಗಳೂರು ನಗರದ ಗಂಟಿಗಾನಹಳ್ಳಿ ಹಾಗೂ ಹಾಸನ ತಾಲ್ಲೂಕಿನ ಅಂಕಪುರದಲ್ಲಿ ತಲಾ 54 ಮಿ.ಮೀ ಮಳೆಯಾಗಿದೆ.

ಆನೇಕಲ್‌ ತಾಲ್ಲೂಕಿನ ಸರ್ಜಾಪುರದಲ್ಲಿ 53.5 ಮಿ.ಮೀ, ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹಾಗೂ ಚಿಕ್ಕಮಗಳೂರಿನ ಮೂಗ್ತಿಹಳ್ಳಿಯಲ್ಲಿ ತಲಾ 53 ಮಿ.ಮೀ, ಬೆಂಗಳೂರು ನಗರದ ಮಂಡೂರು, ಬಂಗಾರಪೇಟೆ ತಾಲ್ಲೂಕು ಪರಂಡಹಳ್ಳಿ, ಧಾರವಾಡದ ಪುಡಕಲಕಟ್ಟಿಯಲ್ಲಿ ತಲಾ 52.5 ಮಿ.ಮೀ, ಹೊಸಕೋಟೆ ತಾಲ್ಲೂಕಿನ ಕುಂಬಾಲಹಳ್ಳಿಯಲ್ಲಿ 52 ಮಿ.ಮೀ ಮಳೆಯಾಗಿದೆ.

ಬಂಗಾರಪೇಟೆ ತಾಲ್ಲೂಕಿನ ಮಾರಿಕುಪ್ಪ ಹಾಗೂ ಕುಂದಗೋಳ ತಾಲ್ಲೂಕಿನ ಶಿರೂರಿನಲ್ಲಿ ತಲಾ 51.5 ಮಿ.ಮೀ, ಹೊಸಕೋಟೆ ತಾಲ್ಲೂಕಿನ ದೊಡ್ಡಹುಲ್ಲೂರು ಹಾಗೂ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಇಟ್ನಾದಲ್ಲಿ ತಲಾ 51 ಮಿ.ಮೀ ಮಳೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ