Indian Food: ಫಿಟ್ ಆಗಬೇಕಾ? ಭಾರತೀಯ ಫುಡ್ ಬಿಡಿ, ಕೆನಡಾ ವ್ಯಕ್ತಿ ಫಿಟ್ನೆಸ್ ಜರ್ನಿ ವೀಡಿಯೋ ವೈರಲ್

Indian Food: ಫಿಟ್ ಆಗಬೇಕಾ? ಭಾರತೀಯ ಫುಡ್ ಬಿಡಿ, ಕೆನಡಾ ವ್ಯಕ್ತಿ ಫಿಟ್ನೆಸ್ ಜರ್ನಿ ವೀಡಿಯೋ ವೈರಲ್

Indian Food: ಫಿಟ್ ಆಗಬೇಕಾ? ಭಾರತೀಯ ಫುಡ್ ಬಿಡಿ, ಕೆನಡಾ ವ್ಯಕ್ತಿ ಫಿಟ್ನೆಸ್ ಜರ್ನಿ ವೀಡಿಯೋ ವೈರಲ್

Indian Food: ಭಾರತೀಯ ಆಹಾರವೆಂದರೆ ಸಂಪ್ರದಾಯದ ಮೇಲೆ ಅವಲಂಬಿತವಾಗಿದೆ. ನಾವು ತಿನ್ನೋ ಆಹಾರವೇ ಡಯಟ್ ಅಂತ ನಂಬಿರೋರು ನಾವು. ಹವಾಮಾನ, ಭೌಗೋಳಿಕವಾಗಿ ಬೆಳೆಯುವ ಆಹಾರದ ಮೇಲೆ ನಮ್ಮ ಆಹಾರ ಪದ್ಧತಿ ಅವಲಂಬಿತವಾಗಿದೆ. ಅದರಲ್ಲಿ ಕಾರ್ಬೋಹೈಡ್ರೈಟ್ ಹೆಚ್ಚಿದ್ಯೋ, ಪ್ರೊಟೀನ್ ಕಡಿಮೆ ಇದೆಯೋ ಅಂತ ಯೋಚಿಸೋದು ಕಡಿಮೆ. ಆದರೆ, ಇದೀಗ ಕೆನಡಾದಲ್ಲಿರುವ ಭಾರತೀಯ ಫಿಟ್ನೆಸ್ ಪ್ರೀಕ್ ಒಬ್ಬರು ಭಾರತೀಯ ಊಟದ ಬಗ್ಗೆಯೊಂದು ವೀಡಿಯೋ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾರತದ ಆಹಾರ ಬಿಟ್ಟು ನಾನು ಫಿಟ್ ಆಗಿದ್ದೇನೆ. ನನ್ನ ಜೀವನದ ಅತ್ಯುತ್ತಮ ನಿರ್ಧಾರವಿದು ಎಂದೇ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದೆ. ಏನು ಬೇಕಾದರೆ ಡಯಟ್ ಮಾಡಿ, ಆದರೆ ನಮ್ಮ ಆಹಾರ ಪದ್ಧತಿಯನ್ನು ಮಾತ್ರ ದೂಷಿಸಬೇಡಿ ಎಂದೂ ಭಾರತೀಯ ಆಹಾರ ಪ್ರೇಮಿಗಳು ಕಮೆಂಟ್ ಮಾಡಿದ್ದಾರೆ.

ಬನ್ಶ್‌ದೀಪ್ ಸಿಂಗ್ ಎನ್ನೋರು ಪೋಸ್ಟ್ ಮಾಡಿರುವ ವೀಡಿಯೋದಲ್ಲಿ ಹೇಳಿದಂತೆ, ಅವರು ಸುಮಾರು ಒಂದೂವರೆ ವರ್ಷದಿಂದ ಮನೆಯಲ್ಲಿ ಭಾರತೀಯ ಆಹಾರವನ್ನೇ ತಯಾರಿಸುತ್ತಿಲ್ಲವಂತೆ. ಮಾತ್ರವಲ್ಲ ನಿಯಮಿತವಾಗಿ ಭಾರತೀಯ ದಿನಸಿಯನ್ನೇ ಕೊಳ್ಳೋದು ಬಿಟ್ಟಿದ್ದಾರಂತೆ. ಈ ಬ್ಯುಸಿ ಲೈಫಲ್ಲಿ ಯಾರಷ್ಟು ಟೈಮ್ ಸ್ಪೆಂಡ್ ಮಾಡ್ತಾರೆ. ಸಾಂಪ್ರದಾಯಿಕ ಭಾರತೀಯ ಆಹಾರವನ್ನು ತಯಾರಿಸಲು ಸಾಕಷ್ಟು ಸಮಯ ಮತ್ತು ಶ್ರಮ ಬೇಕು. ಆದ್ದರಿಂದ, ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳನ್ನು ಸುಲಭವಾಗಿ ಲೆಕ್ಕ ಹಾಕಲು ಸಹಾಯವಾಗುವಂಥ ಆಹಾರ ತಿನ್ನುತ್ತಾರಂತೆ. ಭಾರತೀಯ ಆಹಾರಕ್ಕೆ ಗುಡ್ ಬೈ ಹೇಳಿದ ನಂತರ ಅವರ ದೈನಂದಿನ ಡಯೆಟ್‌ ಹಾಗೂ ವರ್ಕ್‌ ಔಟ್‌ ರೂಟಿನ್‌ ಫಾಲೋ ಮಾಡೋದು ಈಸಿ ಆಯಿತಂತೆ.

ಪ್ರೋಟೀನ್ ಟಾರ್ಗೆಟ್‌ ರೀಚ್‌

ದಿನ ಪೂರ್ತಿ ಎಷ್ಟೇ ಬ್ಯುಸಿ ಇದ್ದರೂ ಅವರೀಗ ಪ್ರೋಟೀನ್ ಟಾರ್ಗೆಟ್‌ ರೀಚ್‌ ಆಗಲು ಮತ್ತು ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ತರಕಾರಿ, ದಿನಸಿ ತಗೊಂಡು ಬಾ. ಕಟ್ ಮಾಡು. ಬೇಯಿಸು, ಮಸಾಲೆ ಮಿಕ್ಸ್ ಮಾಡಿ ಅಡುಗೆ ಕಂಪ್ಲೀಟ್ ಮಾಡು. ಅದಕ್ಕೆ ಸಾಮಾನು ತರೋದೂ ಸುಲಭವಲ್ಲ. ನಮ್ಮ ಅಡುಗೆ ಮಾಡಲು ಸಿಕ್ಕಾಪಟ್ಟೆ ಟೈಮ್ ಬೇಕು. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ಡಿನ್ನರ್ ಅಂತ ಯಾರು ಬೇರೆ ಬೇರೆ ಅಡುಗೆ ಮಾಡ್ತಾರೆ ಎಂದು ಪ್ರಶ್ನಿಸಿರುವ ಅವರಿಗೆ ಕೆಲವರು ಭಾರತೀಯ ಅಡುಗೆಯಲ್ಲಿಯೇ ಹೇಗೆ ಡಯಟ್ ಅಳವಡಿಸೋದು ಅಂತ ಕಿವಿ ಮಾತು ಹೇಳಿದ್ದಾರೆ. ಏನು ಬೇಕಾದರೂ ಮಾಡಿ, ಆದರೆ, ಭಾರತೀಯ ಶ್ರೀಮಂತ ಆಹಾರ ಪದ್ಧತಿಯನ್ನು ಮಾತ್ರ ದೂಷಿಸಬೇಡಿ ಎಂಬುವುದು ಹಲವರ ಆಗ್ರಹ.

Indian Food: ಹೀಗಿದೆಯಂತೆ ದಿನಚರಿ

ಬೆಳಗ್ಗೆ 6.30ಕ್ಕೆ ಏಳುವ ಬನ್ಶ್‌ದೀಪ್ ಸಿಂಗ್ ಸಂಜೆ 7ಕ್ಕೆಲ್ಲ ಮನೆಗೆ ಮರಳುತ್ತಾರಂತೆ. ಮೂರಲ್ಲ ದಿನಕ್ಕೆ ನಾಲ್ಕು ಸಲ ತಪ್ಪದೇ ತಿನ್ನುತ್ತಾರಂತೆ. ಕ್ಯಾಲೋರಿ ಬಗ್ಗೆಯಂತೂ ತಪ್ಪದೇ ಗಮನ ಹರಿಸುತ್ತಾರಂತೆ. 150 ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ತಿಂದೇ ತಿನ್ನುತ್ತಾರಂತೆ. ಆರಂಭದಲ್ಲಿ, ಕೆಲಸದ ಒತ್ತಡ ಹಾಗೂ ಆಯಾಸದಿಂದಾಗಿ ಜಿಮ್‌ಗೆ ಹೋಗಲೂ ಮನಸ್ಸೇ ಬರ್ತಿರಲಿಲ್ಲವಂತೆ.

Indian Food: ಹೊಸ ಪ್ರೇರಣೆ ನೀಡಿದ ಫಿಟ್ನೆಸ್

ಆದರೆ ಆಯಾಸದ ಹೊರತಾಗಿಯೂ, ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆ ಅವರಿಗೆ ಹೊಸ ಪ್ರೇರಣೆ ನೀಡಿದೆ. ಹೀಗಾಗಿ ನಿತ್ಯ ಜಿಮ್‌ಗೆ ಹೋಗಲು ಆರಂಭಿಸಿದ್ದಾರೆ. ಇವರ ಪ್ರಕಾರ, ಹೊಸ ಆಹಾರ ಪದ್ದತಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಖುಷಿ ಖುಷಿಯಾಗಿರುವಂತೆ ಮಾಡುತ್ತಿದೆ. ಈ ಎಲ್ಲ ಬದಲಾವಣೆಗಳಿಗೆ ಇದೀಗ ಒಗ್ಗಿಕೊಂಡಿದ್ದು, ತಮ್ಮ ದೇಹ ಪಡೆದುಕೊಂಡ ಶೇಪ ನೋಡಿ ಆತ್ಮವಿಶ್ವಾಸವೇ ಹೆಚ್ಚಿದೆಯಂತೆ.

ವೀಡಿಯೊ ವೈರಲ್‌ ಆಗುತ್ತಿದ್ದ ಹಾಗೆಯೇ ಕೆಲವರು ಬನ್ಶ್‌ ಅನುಭವವನ್ನು ಒಪ್ಪಿಕೊಂಡಿದ್ದಾರೆ. ಕೆಲವು ಬಳಕೆದಾರರು ಚಪಾತಿ ಪಲ್ಯ ಅಥವಾ ಸಾಂಪ್ರದಾಯಿಕ ಭಾರತೀಯ ಆಹಾರದ ಸೇವನೆಯನ್ನು ಕಡಿಮೆ ಮಾಡುವ ಮೂಲಕ ತಮ್ಮ ಆಹಾರಕ್ರಮವನ್ನು ಸಿಂಪಲ್‌ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಇದರಿಂದ ಫಿಟ್ನೆಸ್ ಪ್ರಯೋಜನಗಳನ್ನು ಪಡೆದಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಫಿಟ್‌ನೆಸ್‌ ಕಾಯ್ದುಕೊಳ್ಳುವುದಕ್ಕೆ ಭಾರತೀಯ ಆಹಾರವನ್ನು ಬಿಡುವ ಅಗತ್ಯವಿಲ್ಲ ಎನ್ನುವುದನ್ನೂ ಹೇಳಿದ್ದಾರೆ. ಸರಿಯಾದ ಪ್ರಮಾಣದ ಪ್ರೋಟೀನ್, ಫೈಬರ್ ಮತ್ತು ಕ್ಯಾಲೊರಿಗಳನ್ನು ಕಾಪಾಡಿಕೊಳ್ಳುವ ಮೂಲಕ, ಭಾರತೀಯ ಆಹಾರವನ್ನು ಫಿಟ್ನೆಸ್ ಭಾಗವಾಗಿ ಸೇರಿಸಿಕೊಳ್ಳಬಹುದು ಎನ್ನುವುದು ಅವರ ಅಭಿಪ್ರಾಯ.

ಹೆಚ್ಚುತ್ತಿರುವ ಚರ್ಚೆಯ ಮಧ್ಯೆ, ಬನ್ಶ್‌, ತಾನು ಯಾವುದೇ ಕಾರಣಕ್ಕೂ ಭಾರತೀಯ ಆಹಾರವನ್ನು ಟೀಕಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಮರೆತಿಲ್ಲ. ತಮ್ಮ ಅನುಭವ ಮತ್ತು ಅವರಿಗೆ ಅದು ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ಮಾತ್ರ ಶೇರ್‌ ಮಾಡಿಕೊಳ್ಳುತ್ತಿವೆ. ದೇಹದ ಫಿಟ್ನೆಸ್‌ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವವರೊಂದಿಗೆ ತನ್ನ ಅನುಭವವನ್ನು ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.

viral video food healthy food

viral video food healthy food

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ