Coffee day 2026: ಅಂತರರಾಷ್ಟ್ರೀಯ ಕಾಫಿ ದಿನ, ಜನರ ನಿತ್ಯ ಸಂಗಾತಿ ಕುರಿತ 10 ಅಂಶ

Coffee day 2026: ಅಂತರರಾಷ್ಟ್ರೀಯ ಕಾಫಿ ದಿನ, ಜನರ ನಿತ್ಯ ಸಂಗಾತಿ ಕುರಿತ 10 ಅಂಶ

Coffee day 2026: ಅಂತರರಾಷ್ಟ್ರೀಯ ಕಾಫಿ ದಿನ, ಜನರ ನಿತ್ಯ ಸಂಗಾತಿ ಕುರಿತ 10 ಅಂಶ

ಕಾಫಿ ಇಲ್ಲದ ದಿನ ಊಹಿಸಿಕೊಳ್ಳಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಕಾಫಿ ಜನರ ನಿತ್ಯ ಸಂಗಾತಿಯಾಗಿ ರೂಪುಗೊಂಡಿದೆ. ಇದು ಸೇವಿಸುವವರ ಜತೆಗೆ ಕೃಷಿಕರು, ಮಾರಾಟಗಾರರ ಬದುಕಿಗೂ ಆಸರೆಯಾಗಿದೆ. ವಿಶ್ವದಲ್ಲಿ ಕಾಫಿಯನ್ನು ಬಳಸುವವರ ಸಂಖ್ಯೆ ಪೆಟ್ರೋಲಿಯಂ ಉತ್ಪನ್ನ ಬಳಸುವವರಷ್ಟೇ ಇದೆ ಎನ್ನುವುದು ಆಶ್ಚರ್ಯಕರ ಸಂಗತಿ. ಕಾಫಿ ವಲಯದಲ್ಲಿ ಭಾರತ ಹಾಗೂ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕದ ಮೂರು ಜಿಲ್ಲೆಗಳು ಕಾಫಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಕಾಫಿ ಕುರಿತ ಪ್ರಮುಖ ಅಂಶ ಇಲ್ಲಿದೆ.

1.ವಿಶ್ವದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ನಂತರ ಅತಿ ಹೆಚ್ಚು ಮಾರಾಟವಾಗುವ ವಸ್ತು ಕಾಫಿ. ಅಷ್ಟರ ಮಟ್ಟಿಗೆ ಕಾಫಿ ಜನರ ಜೀವನ ಸಂಗಾತಿ

2.ಪ್ರತಿ ಸೆಕೆಂಡ್‌ಗೆ ಒಂದರಂತೆ ವಾಹನಕ್ಕೆ ಪೆಟ್ರೋಲ್‌/ ಡೀಸೆಲ್‌ ಅನ್ನು ತುಂಬಿಸಲಾಗುತ್ತದೆ, ಅದೇ ರೀತಿ ಪ್ರತಿ ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಕಾಫಿಯನ್ನು ಸೇವಿಸುತ್ತಾರೆ.

3.ಕಾಫಿ ಬರೀ ಒಂದು ಪೇಯವಾಗಿ ಉಳಿದಿಲ್ಲ. ಬದಲಿಗೆ ಇದು ಕೋಟ್ಯಂತರ ಜನರ ಹಾಗೂ ಕುಟುಂಬಗಳ ಜೀವನಾಡಿಯೂ ಹೌದು, ಶಕ್ತಿ ಮೂಲವೂ ಹೌದು.

4. ಜಗತ್ತಿನಲ್ಲಿ ಭಾರತ ಸಹಿತ 80 ದೇಶಗಳ ಆದಾಯ ನಿಂತಿರುವುದು ಕಾಫಿಯ ಮೇಲೆಯೇ. ಅದರಲ್ಲೂ 50 ದೇಶಗಳ ಪೂರ್ಣ ಆದಾಯ ಮೂಲವೇ ಕಾಫಿ.

5.ಭಾರತ ಕಾಫಿ ಉತ್ಪಾದನೆಯಲ್ಲಿ ವಿಶ್ವದಲ್ಲೇ 7ನೇ ಸ್ಥಾನದಲ್ಲಿರುವ ದೇಶ. ಬ್ರೆಜಿಲ್‌, ವಿಯೆಟ್ನಾಂ, ಕೊಲಂಬಿಯಾ, ಇಂಡೇನೇಷಿಯಾ, ಇಥಿಯೋಪಿಯಾ, ಉಗಾಂಡ ಕಾಫಿ ಉತ್ಪಾದನೆಯಲ್ಲಿ ಮುಂಚೂಣಿ ದೇಶಗಳು.

6. ಕಾಫಿ ರಫ್ತು ವಿಷಯ ಬಂದಾಗ ಭಾರತಕ್ಕೆ ವಿಶ್ವದಲ್ಲೇ 5ನೇ ಸ್ಥಾನ. ಇತ್ತೀಚಿನ ಐದು ವರ್ಷಗಳಲ್ಲಿ ದಾಖಲೆ ಪ್ರಮಾಣದ ರಫ್ತನ್ನು ಭಾರತ ಮಾಡಿದೆ. ಶೇ 7.5ರಷ್ಟು ವೃದ್ದಿ ಸಾಧಿಸಿದೆ.

7.ಭಾರತವು ಕಾಫಿ ಕೃಷಿ, ಸಂಶೋಧನೆಗೆ ವಿಶೇಷ ಒತ್ತು ನೀಡಿದೆ. ಕಾಫಿಗೆಂದೇ ಪ್ರತ್ಯೇಕ ಸಂಶೋಧನಾ ಕೇಂದ್ರಗಳನ್ನು ರೂಪಿಸಿರುವ ಪ್ರಮುಖ ಮೂರು ದೇಶಗಳಲ್ಲಿ ಭಾರತವೂ ಒಂದು.

8.ಕರ್ನಾಟಕದಲ್ಲಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನಕ್ಕೆ ಪ್ರಮುಖ ಸ್ಥಾನ. ಮೂರು ಜಿಲ್ಲೆಗಳಿಂದ 2.80 ಲಕ್ಷ ಟನ್‌ ಕಾಫಿ ರಫ್ತಿನ ಗುರಿ ಇದೆ.

9.ಕರ್ನಾಟಕದಲ್ಲಿ ಅರೇಬಿಕಾ ಹಾಗೂ ರೋಬುಸ್ಟಾ ಕಾಫಿ ಉತ್ಪಾದನೆ ಹೆಚ್ಚಿದೆ. ಇದರಲ್ಲಿ ಮೂರು ಜಿಲ್ಲೆಗಳಿಂದ ಈ ವರ್ಷ 1.95 ಲಕ್ಷ ಟನ್‌ ರೋಬುಸ್ಟಾ, 84 ಸಾವಿರ ಟನ್‌ ಅರೇಬಿಕಾ ಕಾಫಿ ರಫ್ತು ಗುರಿ ಹೊಂದಲಾಗಿದೆ.

10.ಕಾಫಿ ಉತ್ತೇಜನಕ್ಕೆಂದು 1942ರಲ್ಲಿಯೇ ಕಾಫಿ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿಯೇ ಇದೆ. ಪ್ರತಿ ವರ್ಷದ ಆರಂಭದಲ್ಲಿ ಭಾರತ ಅಂತರರಾಷ್ಟ್ರೀಯ ಕಾಫಿ ಉತ್ಸವವನ್ನು ಆಯೋಜಿಸುತ್ತಿದೆ. 2027ರ ಫೆಬ್ರವರಿ 26ರಿಂದ ಮೂರು ದಿನ ಉತ್ಸವ ಬೆಂಗಳೂರು ಅರಮನೆ ಆವರಣದಲ್ಲಿ ಆಯೋಜನೆಗೊಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ