ಕುಶಾಲನಗರ: ಅ.4ರಂದು 26ನೇ ವರ್ಷದ ಓಣಂ ಹಬ್ಬ ಆಚರಣೆ

ಕುಶಾಲನಗರ: ಅ.4ರಂದು 26ನೇ ವರ್ಷದ ಓಣಂ ಹಬ್ಬ ಆಚರಣೆ

ಕುಶಾಲನಗರ: ಅ.4ರಂದು 26ನೇ ವರ್ಷದ ಓಣಂ ಹಬ್ಬ ಆಚರಣೆ

ಕುಶಾಲನಗರ: ಪಟ್ಟಣದ ಕೇರಳ‌ ಸಮಾಜದ ವತಿಯಿಂದ ಅ.4ರಂದು ಎಪಿಸಿಎಂಎಸ್‌ಸಿ ಸುವರ್ಣ ಮಹೋ ತ್ಸವ ಸಭಾಂಗಣದಲ್ಲಿ 26ನೇ ವರ್ಷದ ಓಣಂ ಹಬ್ಬದ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಪಿ.ರವೀಂದ್ರನ್ ಹೇಳಿದರು.

‘ಅಂದು ಬೆಳಿಗ್ಗೆ ಕೇರಳ ಸಮಾಜದಿಂದ ಸಭಾಂಗಣದ ತನಕ ಮಾವೇಲಿ ಸಹಿತ ಚಂಡೆ ವಾದ್ಯಗಳೊಂದಿಗೆ ಸಮಾಜದವರಿಂದ ಮೆರವಣಿಗೆ ನಡೆಯಲಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಶಾಸಕ ಡಾ.ಮಂತರ್ ಗೌಡ, ಮಾಜಿ ಶಾಸಕ ಅಪ್ಪಚ್ಚುರಂಜನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ತಾಲ್ಲೂಕು ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೇರಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯನ್, ಕುಶಾಲನಗರ ಎಸ್.ಎನ್.ಡಿ.ಪಿ.ಶಾಖೆ ಅಧ್ಯಕ್ಷ ಕೆ.ಟಿ.ಗಣೇಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಾಜದ ನಿರ್ದೇಶಕ ಕೆ.ವರದ ಮಾತನಾಡಿ, ಹಿಂದೂ, ಕ್ರೈಸ್ತರು, ಮುಸಲ್ಮಾನ ಸಮುದಾಯದಮಲೆಯಾಳಿ‌ ಭಾಷಿಕರು ಒಗ್ಗೂಡಿ ಕುಶಾಲನಗರದಲ್ಲಿ ಓಣಂ ಆಚರಿಸುವುದು‌ ಇಲ್ಲಿನ ವಿಶೇಷವಾಗಿದೆ. ಅಂದು ಓಣಂ ಅಂಗವಾಗಿ ಪೂಕಳಂ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ತಿರುವಾದಿರ ಕಳಿ, ಭರತನಾಟ್ಯ, ನಾಡೋಡಿ ನೃತ್ಯ, ನಾಡನ್ ಪಾಟ್, ಓಣಂ ಪಾಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು‌ ಎಂದು‌ ಮಾಹಿತಿ‌ ನೀಡಿದರು.

ಸಮಾಜದ ಜಂಟಿ ಕಾರ್ಯದರ್ಶಿ ಅಜಿತ ಧನರಾಜ್, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕ ಎಂ.ಜಿ.ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ