
ಗದಗ: ಜಿ.ಪಂ, ತಾ.ಪಂ ಸ್ಥಾನವಾರು ಮೀಸಲಾತಿ
ಗದಗ: ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಅನ್ವಯ ಇಲ್ಲಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯಪತ್ರದಲ್ಲಿ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಈ ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 10 ದಿನಗಳು, ಅಂದರೆ ಅಕ್ಟೋಬರ್ 19ರಂದು ಸಂಜೆ 5 ಗಂಟೆಯೊಳಗೆ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಮೂಲಕ ಆಕ್ಷೇಪಣೆಗಳು ಸ್ವೀಕೃತವಾಗುವಲ್ಲಿ ವಿಳಂಬವಾದರೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ: ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560001
ಅಕ್ಟೋಬರ್ 7ರಂದು ಜಿಲ್ಲಾ ಪಂಚಾಯಿತಿಯ 25 ಸ್ಥಾನಗಳಿಗೆ ನಿಗದಿಪಡಿಸಿದ್ದ ಮೀಸಲಾತಿ ಸಂಖ್ಯೆಯನ್ನು ಪ್ರಕಟಿಸಲಾಗಿತ್ತು. ಈ ಪೈಕಿ ಅರ್ಧದಷ್ಟು ಅಂದರೆ 13 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅಂತೆಯೇ ಜಿಲ್ಲೆಯ ವಿವಿಧ ತಾಲ್ಲೂಕುಗಳ ಒಟ್ಟು 77 ತಾ.ಪಂಗಳ ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 41 ಸ್ಥಾನಗಳನ್ನು ಮಹಿಳೆಯರಿಗೆ ಮೀಸರಿಸಲಾಗಿದೆ.
ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಮೀಸಲಾತಿ ಮಾಹಿತಿ
ಗದಗ ತಾಲ್ಲೂಕು ಪಂಚಾಯಿತಿ:
ಹೊಂಬಳ;ಸಾಮಾನ್ಯ(ಮಹಿಳೆ), ಬಳಗಾನೂರ;ಹಿಂದುಳಿದ ‘ಬ’ ವರ್ಗ(ಮಹಿಳೆ), ಚಿಕ್ಕಹಂದಿಗೋಳ;ಅನುಸೂಚಿತ ಪಂಗಡ(ಮಹಿಳೆ), ಹುಲಕೋಟಿ;ಹಿಂದುಳಿದ ‘ಅ’ ವರ್ಗ, ಬಿಂಕದಕಟ್ಟಿ;ಸಾಮಾನ್ಯ(ಮಹಿಳೆ), ಕಳಸಾಪೂರ;ಅನುಸೂಚಿತ ಜಾತಿ, ಕುರ್ತಕೋಟಿ;ಸಾಮಾನ್ಯ(ಮಹಿಳೆ), ಅಂತೂರ ಬೆಂತೂರ;ಸಾಮಾನ್ಯ
ಚಿಂಚಲಿ;ಸಾಮಾನ್ಯ, ಹರ್ತಿ;ಸಾಮಾನ್ಯ, ಸೊರಟೂರ;ಸಾಮಾನ್ಯ, ಯಲಿಶಿರೂರ;ಸಾಮಾನ್ಯ, ನಾಗಾವಿ;ಅನುಸೂಚಿತ ಜಾತಿ(ಮಹಿಳೆ), ಲಕ್ಕುಂಡಿ;ಹಿಂದುಳಿದ ‘ಅ’ ವರ್ಗ (ಮಹಿಳೆ), ಅಡವಿಸೋಮಾಪೂರ;ಅನುಸೂಚಿತ ಜಾತಿ(ಮಹಿಳೆ), ಕೋಟುಮುಚಗಿ;ಹಿಂದುಳಿದ ‘ಅ’ ವರ್ಗ, ಹುಯಿಲಗೋಳ;ಹಿಂದುಳಿದ ‘ಅ’ ವರ್ಗ (ಮಹಿಳೆ), ಹರ್ಲಾಪೂರ;ಸಾಮಾನ್ಯ
ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯಿತಿ
ಯಳವತ್ತಿ;ಸಾಮಾನ್ಯ(ಮಹಿಳೆ), ಗೊಜನೂರ;ಅನುಸೂಚಿತ ಜಾತಿ, ಪುಟಗಾಂವ ಬಡ್ಡಿ;ಸಾಮಾನ್ಯ(ಮಹಿಳೆ), ಶಿಗ್ಲಿ;ಹಿಂದುಳಿದ ವರ್ಗ ‘ಅ’ (ಮಹಿಳೆ), ರಾಮಗೇರಿ;ಅನುಸೂಚಿತ ಪಂಗಡ(ಮಹಿಳೆ), ದೊಡ್ಡೂರ;ಸಾಮಾನ್ಯ
ಸೂರಣಗಿ; ಸಾಮಾನ್ಯ, ಆದರಹಳ್ಳಿ;ಅನುಸೂಚಿತ ಜಾತಿ(ಮಹಿಳೆ), ಬಾಲೇಹೊಸೂರ;ಸಾಮಾನ್ಯ
ಶಿರಹಟ್ಟಿ ತಾಲ್ಲೂಕು ಪಂಚಾಯಿತಿ
ಮಾಗಡಿ;ಸಾಮಾನ್ಯ, ಕಡಕೋಳ;ಅನುಸೂಚಿತ ಜಾತಿ, ರಣತೂರ;ಅನುಸೂಚಿತ ಜಾತಿ(ಮಹಿಳೆ), ಬೆಳ್ಳಟ್ಟಿ;ಸಾಮಾನ್ಯ(ಮಹಿಳೆ), ಕೊಂಚಿಗೇರಿ;ಸಾಮಾನ್ಯ, ಬನ್ನಿಕೊಪ್ಪ;ಅನುಸೂಚಿತ ಪಂಗಡ(ಮಹಿಳೆ), ಹೆಬ್ಬಾಳ;ಹಿಂದುಳಿದ ‘ಅ’ ವರ್ಗ (ಮಹಿಳೆ), ಸೇವಾನಗರ;ಸಾಮಾನ್ಯ, ಕೊಗನೂರ;ಸಾಮಾನ್ಯ (ಮಹಿಳೆ),
ರೋಣ ತಾಲ್ಲೂಕು ಪಂಚಾಯಿತಿ
ಹೊಳೆಆಲೂರ;ಹಿಂದುಳಿದ ‘ಅ’ ವರ್ಗ, ಹುನಗುಂಡಿ;ಸಾಮಾನ್ಯ, ಮೆಣಸಗಿ;ಹಿಂದುಳಿದ ‘ಅ’ ವರ್ಗ (ಮಹಿಳೆ), ಬೆಳವಣಕಿ;ಹಿಂದುಳಿದ ‘ಬ’ ವರ್ಗ, ಯಾವಗಲ್ಲ;ಸಾಮಾನ್ಯ, ಹುಲ್ಲೂರ;ಸಾಮಾನ್ಯ (ಮಹಿಳೆ), ಸವಡಿ;ಅನುಸೂಚಿತ ಜಾತಿ(ಮಹಿಳೆ), ಕೊತಬಾಳ;ಅನುಸೂಚಿತ ಪಂಗಡ(ಮಹಿಳೆ), ಹಿರೇಹಾಳ;ಹಿಂದುಳಿದ ‘ಅ’ ವರ್ಗ (ಮಹಿಳೆ), ಅಬ್ಬಿಗೇರಿ;ಸಾಮಾನ್ಯ, ಡ.ಸ.ಹಡಗಲಿ;ಸಾಮಾನ್ಯ, ಜಕ್ಕಲಿ;ಸಾಮಾನ್ಯ(ಮಹಿಳೆ)
ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ
ಸೂಡಿ;ಸಾಮಾನ್ಯ(ಮಹಿಳೆ), ಇಟಿಗಿ;ಸಾಮಾನ್ಯ, ಶಾಂತಗೇರಿ;ಅನುಸೂಚಿತ ಪಂಗಡ(ಮಹಿಳೆ), ಮುಶಿಗೇರಿ;ಸಾಮಾನ್ಯ, ರಾಜೂರ;ಅನುಸೂಚಿತ ಜಾತಿ, ಲಕ್ಕಲಕಟ್ಟಿ;ಸಾಮಾನ್ಯ, ಗೋಗೇರಿ;ಅನುಸೂಚಿತ ಜಾತಿ(ಮಹಿಳೆ), ನಿಡಗುಂದಿ;ಹಿಂದುಳಿದ ವರ್ಗ ‘ಅ’ (ಮಹಿಳೆ), ಹಾಳಕೇರಿ;ಸಾಮಾನ್ಯ(ಮಹಿಳೆ)
ನರಗುಂದ ತಾಲ್ಲೂಕು ಪಂಚಾಯಿತಿ
ಚಿಕ್ಕನರಗುಂದ;ಸಾಮಾನ್ಯ, ಹಿರೇಕೊಪ್ಪ;ಸಾಮಾನ್ಯ, ಕಣಕೀಕೊಪ್ಪ;ಅನುಸೂಚಿತ ಪಂಗಡ(ಮಹಿಳೆ), ಹುಣಶೀಕಟ್ಟಿ;ಹಿಂದುಳಿದ ‘ಅ‘ ವರ್ಗ, ಸುರಕೋಡ;ಸಾಮಾನ್ಯ(ಮಹಿಳೆ), ಕೊಣ್ಣೂರ;ಹಿಂದುಳಿದ ‘ಅ’ ವರ್ಗ(ಮಹಿಳೆ), ಹದಲಿ;ಸಾಮಾನ್ಯ(ಮಹಿಳೆ), ಶಿರೋಳ;ಅನುಸೂಚಿತ ಜಾತಿ(ಮಹಿಳೆ), ವಾಸನ;ಸಾಮಾನ್ಯ
ಮುಂಡರಗಿ ತಾಲ್ಲೂಕು ಪಂಚಾಯಿತಿ
ಡಂಬಳ;ಸಾಮಾನ್ಯ(ಮಹಿಳೆ), ಡೋಣಿ;ಅನುಸೂಚಿತ ಜಾತಿ(ಮಹಿಳೆ), ಕದಾಂಪೂರ;ಅನುಸೂಚಿತ ಜಾತಿ, ಹಿರೇವಡ್ಡಟ್ಟಿ;ಸಾಮಾನ್ಯ, ಮೇವುಂಡಿ;ಸಾಮಾನ್ಯ, ಆಲೂರ;ಹಿಂದುಳಿದ ವರ್ಗ ‘ಅ’ (ಮಹಿಳೆ), ಕಲಕೇರಿ;ಅನುಸೂಚಿತ ಜಾತಿ(ಮಹಿಳೆ), ಹಾರೋಗೇರಿ;ಅನುಸೂಚಿತ ಪಂಗಡ(ಮಹಿಳೆ), ಕೊರ್ಲಹಳ್ಳಿ;ಸಾಮಾನ್ಯ, ಹಮ್ಮಿಗಿ;ಸಾಮಾನ್ಯ(ಮಹಿಳೆ), ಬಾಗೇವಾಡಿ;ಸಾಮಾನ್ಯ