ಅರ್ಚಕರ ನಡುವೆ ವಿವಾದ | ಇಡಗುಂಜಿ ದೇವಸ್ಥಾನದಲ್ಲಿ ಪೂಜೆ ಸ್ಥಗಿತ: ಭಕ್ತರ ಅಸಮಾಧಾನ

ಅರ್ಚಕರ ನಡುವೆ ವಿವಾದ | ಇಡಗುಂಜಿ ದೇವಸ್ಥಾನದಲ್ಲಿ  ಪೂಜೆ ಸ್ಥಗಿತ: ಭಕ್ತರ ಅಸಮಾಧಾನ

ಅರ್ಚಕರ ನಡುವೆ ವಿವಾದ | ಇಡಗುಂಜಿ ದೇವಸ್ಥಾನದಲ್ಲಿ ಪೂಜೆ ಸ್ಥಗಿತ: ಭಕ್ತರ ಅಸಮಾಧಾನ

ಹೊನ್ನಾವರ: ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ತಾಲ್ಲೂಕಿನ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂಜೆಗೆ ಸಂಬಂಧಿಸಿದಂತೆ ಮತ್ತೆ ವಿವಾದ ಭುಗಿಲೆದ್ದಿದ್ದು ಈ ಬಾರಿ ದೇವರ ನಿತ್ಯದ ಅಭಿಷೇಕಕ್ಕೆ ಸಂಚಕಾರ ಉಂಟಾಗಿದೆ.

ಭಾನುವಾರ ಬೆಳಿಗ್ಗೆ ಗರ್ಭಗುಡಿಯಲ್ಲಿ ದೇವರಿಗೆ ಅಭಿಷೇಕ ಮತ್ತಿತರ ಪೂಜಾ ಕಾರ್ಯ ನಡೆಯದೆ ನಿರಾಶೆಯಿಂದ ಮರಳಬೇಕಾಯಿತು ಎಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನದಲ್ಲಿ ದೇವರಿಗೆ ತ್ರಿಕಾಲ ಅಭಿಷೇಕ ನಡೆಯಬೇಕು. ಭಾನುವಾರ ಬೆಳಿಗ್ಗೆ ನಡೆದಿಲ್ಲ ಎಂದು ಅರ್ಚಕರು ಖಚಿತಪಡಿಸಿದ್ದಾರೆ.

'ಆಡಳಿತ ಮಂಡಳಿ ಪೂಜಾ ವಸ್ತುಗಳಿಗಾಗಿ ನೀಡುವ ಹಣಕ್ಕೆ ಸಂಬಂಧಿಸಿದಂತೆ ಅರ್ಚಕರ ನಡುವೆ ವಿವಾದ ಉಂಟಾಗಿದೆ. ಇದೇ ಕಾರಣಕ್ಕೆ ಅರ್ಚಕರು ಪೂಜೆ ಸ್ಥಗಿತಗೊಳಿಸಿದ್ದಾರೆ' ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ