ಲಕ್ಷ್ಮೇಶ್ವರ| ಮಳೆ ಕೊರತೆ; ಬಿತ್ತನೆಗೆ ರೈತರ ಹಿಂದೇಟು

ಲಕ್ಷ್ಮೇಶ್ವರ| ಮಳೆ ಕೊರತೆ; ಬಿತ್ತನೆಗೆ ರೈತರ ಹಿಂದೇಟು

ಲಕ್ಷ್ಮೇಶ್ವರ| ಮಳೆ ಕೊರತೆ; ಬಿತ್ತನೆಗೆ ರೈತರ ಹಿಂದೇಟು

ಲಕ್ಷ್ಮೇಶ್ವರ: ಪ್ರಸಕ್ತ ವರ್ಷ ಸಮರ್ಪಕವಾಗಿ ಮುಂಗಾರು ಮಳೆ ಸುರಿಯದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹಿಂಗಾರು ಮಳೆಯಾದರೂ ಉತ್ತಮವಾಗಿ ಸುರಿಯಬಹದು ಎಂಬ ಅವರ ನಿರೀಕ್ಷೆ ಇನ್ನೂ ಸಾಕಾರವಾಗಿಲ್ಲ.

ಹಿಂಗಾರು ಹಂಗಾಮು ಈಗಾಗಲೇ ಆರಂಭವಾದರೂ, ತಾಲ್ಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದಾಗಿ ಹಿಂಗಾರು ಹಂಗಾಮಿನ ಗೋಧಿ, ಬಿಳಿಜೋಳ, ಕುಸುಬಿ, ಕಡಲೆ ಬಿತ್ತನೆಗೆ ಹಿನ್ನಡೆ ಉಂಟಾಗಿದೆ.

ಮುಂಗಾರಿನಲ್ಲಿ ಉತ್ತಮ ಮಳೆ ಸುರಿದಿದ್ದರೆ ಭೂಮಿಯಲ್ಲಿ ತೇವಾಂಶ ಉಳಿಯುತ್ತಿತ್ತು. ಹಿಂಗಾರಿನಲ್ಲಿ ಒಂದೆರಡು ಉತ್ತಮ ಮಳೆಯಾದರೂ ಬೆಳೆಗಳು ಚೆನ್ನಾಗಿ ಮೂಡುತ್ತಿದ್ದವು. ಮುಂಗಾರು ಮಳೆ ರೈತರಿಗೆ ತೀವ್ರ ನಷ್ಟ ಉಂಟುಮಾಡಿದೆ. ಇದೀಗ, ಮುಂಗಾರು ಹಾದಿಯಲ್ಲೇ ಹಿಂಗಾರು ಸಾಗಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ.

ಭೂಮಿಯಲ್ಲಿ ತೇವಾಂಶ ಇಲ್ಲದ ಕಾರಣ ಹಿಂಗಾರು ಬೆಳೆಗಳ ಬಿತ್ತನೆಗೆ ರೈತರು ಹಿಂಜರಿಯುತ್ತಿದ್ದಾರೆ. ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಆದರೆ, ರೈತರು ಮಾತ್ರ ಕೇಂದ್ರದತ್ತ ಸುಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

‘ರೈತ ಸಂಪರ್ಕ ಕೇಂದ್ರದಲ್ಲಿ ಬಿಳಿಜೋಳ, ಕಡಲೆ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ನಿರೀಕ್ಷೆಯಂತೆ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಹಿಂಗಾರು ಬಿತ್ತನೆ ನಡೆಯಬೇಕಾಗಿತ್ತು. ಮಳೆ ಇಲ್ಲದ ಕಾರಣ ಬಿತ್ತನೆ ಮಾಡಲು ಹಿಂಜರಿಯುವಂತಾಗಿದೆ. ಮುಂದಿನ ದಿನಗಳ‌ಲ್ಲಾದರೂ ಮಳೆಯಾಗದಿದ್ದರೆ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗುತ್ತದೆ’ ಎಂದು ತಾಲ್ಲೂಕಿನ ಗೊಜನೂರು ಗ್ರಾಮದ ರೈತ ಚನ್ನಪ್ಪ ಷಣ್ಮುಖಿ ಆತಂಕ ವ್ಯಕ್ತಪಡಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ