ನಾಡಧ್ವಜಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡಲಿ: ಶಾಂತಲಿಂಗ ಸ್ವಾಮೀಜಿ ಆಗ್ರಹ

ನಾಡಧ್ವಜಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡಲಿ:  ಶಾಂತಲಿಂಗ ಸ್ವಾಮೀಜಿ ಆಗ್ರಹ

ನಾಡಧ್ವಜಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡಲಿ: ಶಾಂತಲಿಂಗ ಸ್ವಾಮೀಜಿ ಆಗ್ರಹ

ನರೇಗಲ್: ಕನ್ನಡಿಗರ ಪಾಲಿಗೆ ನಾಡಧ್ವಜ ಕೇವಲ ಬಾವುಟವಲ್ಲ. ಅದು ನಾಡಿನ ಅಸ್ಮಿತೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ತಕ್ಷಣವೇ ಅಧಿಕೃತ ಮಾನ್ಯತೆ ನೀಡಬೇಕು’ ಎಂದು ಭೈರನಹಟ್ಟಿ–ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡಕ್ಕೊಂದು ನಾಡಗೀತೆ ಇರುವಂತೆ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ಕನ್ನಡಿಗರ ಬಹುದಿನಗಳ ಬೇಡಿಕೆ. ಕೇಂದ್ರ ಸರ್ಕಾರ ಈ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

’1960ರ ದಶಕದಲ್ಲಿ ಬಳಕೆಗೆ ಬಂದ ಈ ಧ್ವಜವು ಕನ್ನಡಪರ ಹೋರಾಟಗಳೊಂದಿಗೆ ಬೆಸೆದುಕೊಂಡಿದೆ. ಗೋಕಾಕ್ ಚಳವಳಿ ಸೇರಿದಂತೆ ಕನ್ನಡ ನಾಡು–ನುಡಿಯ ಹೋರಾಟಗಳು, ಉತ್ಸವಗಳು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಧ್ವಜವನ್ನು ಬಳಸುತ್ತಾ ಬರಲಾಗಿದೆ. ಕಾಲ ಬದಲಾದರೂ ಕನ್ನಡಿಗರ ಭಾವನಾತ್ಮಕ ನಂಟು ಈ ಧ್ವಜದೊಂದಿಗೆ ಮುಂದುವರಿದಿದೆ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ಅಧಿಕೃತ ಮಾನ್ಯತೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ರಾಷ್ಟ್ರಧ್ವಜಕ್ಕೆ ಅತ್ಯುನ್ನತ ಗೌರವ ನೀಡುವುದರೊಂದಿಗೆ ಅದರ ಕೆಳಗೆ ನವೆಂಬರ್‌ 1 ರಂದು ನಾಡಧ್ವಜವನ್ನು ಹಾರಿಸಲು ಅಧಿಕೃತ ಅವಕಾಶ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ