ಕನ್ನಡಕ್ಕೆ ವ್ಯಾಕರಣ ಗ್ರಂಥಗಳ ಕೊಡುಗೆ ಅಪಾರ: ಸುಧಾ ಎಸ್. ಕೌಜಗೇರಿ

ಕನ್ನಡಕ್ಕೆ ವ್ಯಾಕರಣ ಗ್ರಂಥಗಳ ಕೊಡುಗೆ ಅಪಾರ: ಸುಧಾ ಎಸ್. ಕೌಜಗೇರಿ

ಕನ್ನಡಕ್ಕೆ ವ್ಯಾಕರಣ ಗ್ರಂಥಗಳ ಕೊಡುಗೆ ಅಪಾರ: ಸುಧಾ ಎಸ್. ಕೌಜಗೇರಿ

ಗದಗ: ‘ಕನ್ನಡ ಭಾಷೆಯ ಸಮೃದ್ಧಿಗೆ ವ್ಯಾಕರಣ ಗ್ರಂಥಗಳು ನೀಡಿರುವ ಕೊಡುಗೆ ಅಪಾರ. ಕೇಶಿರಾಜನ ಶಬ್ದಮಣಿದರ್ಪಣ ಗ್ರಂಥವು ಕನ್ನಡ ವ್ಯಾಕರಣ ಪರಂಪರೆಯ ಮೈಲಿಗಲ್ಲಾಗಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕಿ ಸುಧಾ ಎಸ್. ಕೌಜಗೇರಿ ಹೇಳಿದರು.

ತಾಲ್ಲೂಕಿನ ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ವ್ಯಾಕರಣದ ಸೂಕ್ಷ್ಮತೆಗಳನ್ನು ಗ್ರಹಿಸಿ, ಭಾಷೆಯ ಶುದ್ಧತೆ ಹಾಗೂ ಪ್ರೌಢಿಮೆ ಬೆಳೆಸಿಕೊಳ್ಳಬೇಕು’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಅಪ್ಪಣ್ಣ ಎನ್. ಹಂಜೆ ಮಾತನಾಡಿ, ‘ಕನ್ನಡ ಭಾಷೆಯ ಇತಿಹಾಸ, ವ್ಯಾಕರಣ ಮತ್ತು ಸಾಹಿತ್ಯ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವಲ್ಲಿ ಉಪನ್ಯಾಸ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಹೇಳಿದರು.

ಐ.ಕ್ಯೂ.ಎ.ಸಿ ಸಂಚಾಲಕ ಜಿತೇಂದ್ರ , ಕನ್ನಡ ವಿಭಾಗದ ಮುಖ್ಯಸ್ ರಮೇಶ ಹುಲಕುಂದ ಮಾತನಾಡಿದರು. ಸಂಯೋಜಕ ಭೀಮೇಶ, ಸುಜಾತ ಬರದೂರ, ಕಿರಣಕುಮಾರ ರಾಯರ, ಬಸಪ್ಪ ಗಟ್ಟೆಣ್ಣವರ, ಲಕ್ಷ್ಮಣ ಮುಳಗುಂದ, ಶಂಕರಪ್ಪ ಬಡಿಗೇರ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ