ಗಜೇಂದ್ರಗಡ ಸಮೀಪ ಪವನ ವಿದ್ಯುತ್‌ ಫ್ಯಾನ್‌ಗಾಗಿ ಮರಗಳ ಹನನ

ಗಜೇಂದ್ರಗಡ ಸಮೀಪ ಪವನ ವಿದ್ಯುತ್‌ ಫ್ಯಾನ್‌ಗಾಗಿ ಮರಗಳ ಹನನ

ಗಜೇಂದ್ರಗಡ ಸಮೀಪ ಪವನ ವಿದ್ಯುತ್‌ ಫ್ಯಾನ್‌ಗಾಗಿ ಮರಗಳ ಹನನ

ಗಜೇಂದ್ರಗಡ: ಪವನ ವಿದ್ಯುತ್‌ ಉತ್ಪಾದನೆಯ ಫ್ಯಾನ್‌ ಅಳವಡಿಸಲು ಬೃಹತ್‌ ವಾಹನಗಳ ಸಂಚಾರಕ್ಕಾಗಿ ರಸ್ತೆ ಬದಿಯಲ್ಲಿದ್ದ ಹಲವು ಮರಗಳನ್ನು ರಾತ್ರೋ ರಾತ್ರಿ ಕಡಿದು ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸಮೀಪದ ಸೂಡಿ ಗ್ರಾಮದ ಹತ್ತಿರ ಕಳಕಾಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ತಿರುವಿನಲ್ಲಿದ್ದ 12 ಮರಗಳನ್ನು ಕತ್ತರಿಸಿ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಸೋಮವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದವರು ಮರಗಳನ್ನು ಕಡಿದು ರಸ್ತೆ ನಿರ್ಮಿಸಿರುವುದನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ರಸ್ತೆಯ ಎರಡೂ ಬದಿಯಲ್ಲಿ ಮರಗಳು ಸೊಗಸಾಗಿ ಬೆಳೆದು ನಿಂತಿದ್ದವು. ಅವುಗಳನ್ನು ನೆಟ್ಟು, ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಹಳಷ್ಟು ಪರಿಶ್ರಮ ವಹಿಸಿದ್ದರು.

ಬೆಳೆದು ನಿಂತಿದ್ದ ಮರಗಳನ್ನು ರಾತ್ರೋ ರಾತ್ರಿ ಕತ್ತರಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಸೂಡಿ ಕ್ರಾಸ್‌ನ ಕಳಕಾಪುರ ರಸ್ತೆಯಲ್ಲಿರುವ ಮರಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಿಸಲು ಪವನ ವಿದ್ಯುತ್‌ ಕಂಪನಿಯವರು ಮನವಿ ಸಲ್ಲಿಸಿದ್ದರು. ಆದರೆ ಮರಗಳ ತೆರವಿಗೆ ನಿರಾಕರಿಸಲಾಗಿತ್ತು. ಆದರೆ ಭಾನುವಾರ ರಾತ್ರಿ ಏಕಾಏಕಿ 12 ಮರಗಳನ್ನು ಕಡಿದಿರುವುದು ತಿಳಿದು ಬಂದಿದೆ. ಈ ಕುರಿತು ಶ್ರೀ ಕೀರ್ತಿ ಪವರ್ ಪ್ರಾಜೇಕ್ಟ್‌ ಕಂಪನಿ ವಿರುದ್ದು ಎಫ್‌.ಐ.ಆರ್ ದಾಖಲಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿಬಸಣ್ಣವರ ಮಾಹಿತಿ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ