ಮಹಾಡ್ ಶತಮಾನೋತ್ಸವಕ್ಕೆ ಲಕ್ಷ ಕಾರ್ಯಕರ್ತರ ಸಮಾವೇಶ

ಮಹಾಡ್ ಶತಮಾನೋತ್ಸವಕ್ಕೆ ಲಕ್ಷ ಕಾರ್ಯಕರ್ತರ ಸಮಾವೇಶ

ಮಹಾಡ್ ಶತಮಾನೋತ್ಸವಕ್ಕೆ ಲಕ್ಷ ಕಾರ್ಯಕರ್ತರ ಸಮಾವೇಶ

ಬಸವಕಲ್ಯಾಣ: ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾರಾಷ್ಟ್ರದ ಮಹಾಡ್‌ನಲ್ಲಿ ಸಮತಾ ಸೈನಿಕದಳ ಆರಂಭಿಸಿದ್ದು ಅಲ್ಲಿ ಮುಂದಿನ ವರ್ಷ ಸ್ಥಾಪನೆಯ ಶತಮಾನೋತ್ಸವದ ನೆನಪಿಗಾಗಿ ಲಕ್ಷ ಕಾರ್ಯಕರ್ತರ ಸಮಾವೇಶ ನಡೆಯಲಿದೆ’ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಮನೋಹರ ಮೋರೆ ತಿಳಿಸಿದ್ದಾರೆ.

ನಗರದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸಮತಾ ಸೈನಿಕದಳದ ತಾಲ್ಲೂಕು ಮಟ್ಟದ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ಮಹಾಡ್‌ನ ಚೌದಾರ ಕೆರೆ ನೀರು ಸ್ಪರ್ಶಿಸುವ ಸಂದರ್ಭದಲ್ಲಿ ಬಾಬಾಸಾಹೆಬ್ ಅವರು ಈ ಸಂಘಟನೆ ಕಟ್ಟಿದರು. ಇದು ಭಾರತದಾದ್ಯಂತ ಬಲಾಢ್ಯವಾಗಿ ಬೆಳೆಯಲಿ ಎಂದು ಆಶಿಸಿದ್ದರು. ಅದರಂತೆ ಊರೂರಿಗೆ ಇದರ ಶಾಖೆ ಆರಂಭಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ 56 ಗ್ರಾಮಗಳಲ್ಲಾದರೂ ಘಟಕಗಳು ಇರಬೇಕು ಎಂದು ಯೋಜಿಸಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ 4500ಕ್ಕೂ ಅಧಿಕ ಕಾರ್ಯಕರ್ತರಿದ್ದಾರೆ’ ಎಂದರು.

ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮನೋಹರ ಮೈಸೆ ಮಾತನಾಡಿ, ‘ಸಮತಾ ಸೈನಿಕ ದಳ ಮತ್ತು ಬೌದ್ಧ ಮಹಾಸಭೆಯ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಬಾಬಾಸಾಹೇಬ್ ಅವರ ಧ್ಯೇಯ ಪೂರ್ತಿಗೆ ಸತತ ಶ್ರಮಿಸಲಾಗುತ್ತಿದೆ’ ಎಂದರು.

ಈ ಸಂದರ್ಭದಲ್ಲಿ ಭಾರತೀಯ ಬೌದ್ಧ ಮಹಾಸಭಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವೈಶಾಲಿ ಮೋರೆ, ರಾಜ್ಯ ಉಪಾಧ್ಯಕ್ಷ ಜಗನ್ನಾಥ ಕಾಂಬಳೆ, ಜಿಲ್ಲಾಧ್ಯಕ್ಷ ರಾಜಪ್ಪ ಗುನಾಳೆ, ಶಿವಮ್ಮ ಕಾಂಬಳೆ, ವಿಶ್ವನಾಥ ಮೋರೆ ಭಾಲ್ಕಿ, ನರಸಪ್ಪ, ಮಂಜುಳಾ ಬಾವಿದೊಡ್ಡಿ, ಸಂತೋಷ ಫುಲೆ, ಚಂದ್ರಕಲಾ, ಬಾಬು ಅಣದೂರೆ, ಸುರೇಖಾ ಗೋಡಬೋಲೆ ಮತ್ತಿತರರು ಉಪಸ್ಥಿತರಿದ್ದರು.

ಸಮತಾ ಸೈನಿಕದಳದ ನೂರಾರು ಕಾರ್ಯಕರ್ತರು ನೀಲಿ ಟೊಪ್ಪಿಗೆ, ಬಿಳಿ ಶರ್ಟ್ ಮತ್ತು ಖಾಕಿ ಪ್ಯಾಂಟ್ ತೊಟ್ಟು ನಗರದ ಮುಖ್ಯ ರಸ್ತೆಯಲ್ಲಿ ಶಿಸ್ತಿನಿಂದ ಪಥ ಸಂಚಲನ ನಡೆಸಿದರು. ಡ್ರಮ್ ಮತ್ತು ಬ್ಯಾಂಡ್ ಸದ್ದಿಗೆ ಹೆಜ್ಜೆ ಹಾಕುತ್ತ ಮುನ್ನಡೆದರು. ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್ ವೃತ್ತದಿಂದ ಅಕ್ಕ ಮಹಾದೇವಿ ಕಾಲೇಜು ಮೈದಾನ ತಲುಪಿತು. ಇಲ್ಲಿ ಧ್ವಜಾರೋಹಣ ನಡೆಸಿ ವಂದನೆ ಸಲ್ಲಿಸಲಾಯಿತು. ಬಳಿಕ ಕವಾಯಿತು ನಡೆಯಿತು. ಭಾರತೀಯ ಬೌದ್ಧ ಮಹಾಸಭಾ ಮತ್ತು ಸಮತಾ ಸೈನಿಕದಳದ ಪದಾಧಿಕಾರಿಗಳು ನಿರೀಕ್ಷಣೆ ಮಾಡಿದರು.

ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಬುದ್ಧ ಭಾರತದ ಕನಸು ನನಸಾಗಲು ಎಲ್ಲರೂ ಸಮತಾ ಸೈನಿಕದಳ ಸೇರಿಕೊಂಡು ಒಗ್ಗಟ್ಟು ಪ್ರದರ್ಶಿಸಿ ಮನೋಹರ ಮೈಸೆ ತಾಲ್ಲೂಕು ಅಧ್ಯಕ್ಷ, ಭಾರತೀಯ ಬೌದ್ಧ ಮಹಾಸಭಾ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ