ಮನ್‌ಮುಲ್‌ ಹಾಲಿನ ಪುಡಿ ಕಲಬೆರಕೆ; ರೈತ ದ್ರೋಹಿಗಳಿಗೆ ಶಿಕ್ಷೆ ವಿಧಿಸಿ–ಪ್ರತಿಭಟನೆ

ಮನ್‌ಮುಲ್‌ ಹಾಲಿನ ಪುಡಿ ಕಲಬೆರಕೆ; ರೈತ ದ್ರೋಹಿಗಳಿಗೆ ಶಿಕ್ಷೆ ವಿಧಿಸಿ–ಪ್ರತಿಭಟನೆ

ಮನ್‌ಮುಲ್‌ ಹಾಲಿನ ಪುಡಿ ಕಲಬೆರಕೆ; ರೈತ ದ್ರೋಹಿಗಳಿಗೆ ಶಿಕ್ಷೆ ವಿಧಿಸಿ–ಪ್ರತಿಭಟನೆ

ಮಂಡ್ಯ: ‘ಮನ್‌ಮುಲ್‌’ ಒಕ್ಕೂಟದಲ್ಲಿ ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣ ಹಾಗೂ ಇತರೆ ಹಗರಣಗಳ ಬಗ್ಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಸರ್‌ ಎಂ. ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಮನ್‌ಮುಲ್‌ ಸಂಸ್ಥೆಯನ್ನು ದಿವಾಳಿ ಮಾಡಲು ಹೊರಟಿರುವ ಲೂಟಿಕೋರರು ಮತ್ತು ರೈತ ದ್ರೋಹಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು. ಹಾಲಿನ ಪೌಡರ್‌ ಕಲಬೆರಕೆ ಮತ್ತು ಕಳ್ಳತನದ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್‌.ಎಲ್‌. ಭರತ್‌ರಾಜ್‌ ಮಾತನಾಡಿ, ಅಕ್ರಮ ನೇಮಕಾತಿ, ಭ್ರಷ್ಟಾಚಾರ, ಟೆಂಡರ್‌ ಹಗರಣ, ಹಾಲು– ನೀರು ಹಗರಣ, ಭೂಮಿ ಖರೀದಿ ಹಗರಣ, ಮೆಗಾಡೇರಿ ಹಗರಣಗಳ ಬಗ್ಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು. ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಅನಾರೋಗ್ಯಕ್ಕೆ ತುತ್ತಾದವರಿಗೆ ವೈದ್ಯಕೀಯ ವೆಚ್ಚ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಲು ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಟಿ.ಎಲ್‌. ಕೃಷ್ಣೇಗೌಡ, ದೇವಿ, ಡಿ.ಕೆ. ಲತಾ, ಶೋಭಾ, ಎಂ.ಇ. ಮಹದೇವು, ಬಿ.ಎಂ. ಶಿವಮಲ್ಲಯ್ಯ, ಬಿ. ಹನುಮೇಶ್‌, ನಾಗಮಣಿ, ರಾಮಚಂದ್ರ, ಎಂ.ಕೆ. ಜವರೇಗೌಡ, ಬೋರಮ್ಮ, ಚಂದ್ರು ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ