
ಮಹಾಲಯ ಅಮವಾಸ್ಯೆ ಬಳಿಕ ಕುಬೇರ ಯೋಗ : ಈ ರಾಶಿಯವರ ಜೇಬಿನ ತುಂಬಾ ಹಣ ಸೇರುತ್ತೆ
Mahalaya Amavasye : ಜ್ಯೋತಿಷ್ಯಶಾಸ್ತ್ರದಲ್ಲಿ ಮಹಾಲಯ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಮಹಾಲಯ ಅಮವಾಸ್ಯೆಗೆ ಪಿತೃಪಕ್ಷ ಕೊನೆಯಾಗುತ್ತದೆ. ಈ ವರ್ಷದ ಮಹಾಲಯ ಅಮಾವಾಸ್ಯೆ ಬಹಳ ವಿಶಿಷ್ಟವಾಗಿದೆ. ಈ ಬಾರಿ ಮಹಾಲಯ ಅಮಾವಾಸ್ಯೆ ದಿನ ಗ್ರಹಗಳ ವಿಶೇಷ ಸಂಯೋಜನೆ ಇರುತ್ತದೆ. ಈ ದಿನ ರೂಪುಗೊಂಡ ಶುಭ ಸಂಯೋಜನೆಯು ಕೆಲವು ರಾಶಿಯವರಿಗೆ ಸಕಾರಾತ್ಮಕ ಫಲ ನೀಡುವುದು. ಆರ್ಥಿಕ ಪರಿಸ್ಥಿತಿ, ಉದ್ಯೋಗ, ವ್ಯವಹಾರ ಮತ್ತು ಕುಟುಂಬ ಜೀವನದಂತಹ ಕ್ಷೇತ್ರಗಳಲ್ಲಿ ಬದಲಾವಣೆ ಆಗುವುದು.
ಈ ಶುಭ ಯೋಗ ಆರ್ಥಿಕ ಪ್ರಗತಿಗೂ ಹೆಚ್ಚು ಅನುಕೂಲಕರವಾಗಿರುವುದು. ಪೂರ್ವಜರ ಆಶೀರ್ವಾದದೊಂದಿಗೆ ಕೆಲವು ಗ್ರಹಗಳ ಪ್ರಭಾವ ಆರು ರಾಶಿಯವರ ಜೀವನದಲ್ಲಿ ಕುಬೇರ ಯೋಗ ತರುವುದು. ಇದರ ಫಲವಾಗಿ ಇಲ್ಲಿಯವರೆಗೆ ಎದುರಾಗಿದ್ದ ಹಣದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದು. ಮುಂದಿನ ದಿನಗಳಲ್ಲಿ ಸಂತೋಷ ಮತ್ತು ಸಂಪತ್ತು ಹೆಚ್ಚಾಗುವುದು. 2026ರ ಮಹಾಲಯ ಅಮಾವಾಸ್ಯೆ ಆರು ರಾಶಿಯವರಿಗೆ ಹೊಸ ಅವಕಾಶ ನೀಡುವುದು.
ರಾಶಿಗಳ ಮೇಲೆ ಶುಭಯೋಗದ ಪರಿಣಾಮ :
ಮೇಷ ರಾಶಿ (Aries): ಈ ಶುಭ ಯೋಗ ಮೇಷ ರಾಶಿಯವರಿಗೆ (zodiac signs) ಹೊಸ ಭರವಸೆ ಮತ್ತು ಅವಕಾಶ ನೀಡುವುದು. ಬಹಳ ಕಾಲದಿಂದ ಮನಸ್ಸಿನಲ್ಲಿ ಮನೆ ಮಾಡಿದ್ದ ಆಸೆ ಈಡೇರುವುದು. ಕನಸುಗಳು ನನಸಾಗುವ ಕಾಲ ಇದು. ಹಣದ ಸಮಸ್ಯೆ ಕಡಿಮೆಯಾಗುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಕುಟುಂಬದಲ್ಲಿ ಸಂತೋಷ, ಸಮೃದ್ಧಿ ಹೆಚ್ಚಾಗುವುದು. ಶಾಂತಿಯೂ ಹೆಚ್ಚಾಗುವುದು.
Mahalaya Amavasye: ವೃಷಭ ರಾಶಿ (Taurus):
ವೃಷಭ ರಾಶಿಯವರಿಗೆ ಈ ಸಮಯ ಅನುಕೂಲಕರವಾಗಿರುವುದು. ಸಂಪತ್ತು ಮತ್ತು ಹಣ (money) ಹೆಚ್ಚಾಗುವುದು. ಎಲ್ಲಾ ಕೆಲಸದಲ್ಲಿಯೂ ಪ್ರಗತಿಯಾಗುವುದು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಮನೆ, ಭೂಮಿ ಖರೀದಿ ಭಾಗ್ಯ ಇರುವುದು. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವ ಯೋಚನೆ ಇದ್ದರೆ ಲಾಭವಾಗುವುದು. ಉದ್ಯಮಿಗಳ ವ್ಯವಹಾರ ವಿಸ್ತರಿಸಬಹುದು ಅಥವಾ ಹೊಸ ವ್ಯವಹಾರ ಆರಂಭಿಸಬಹುದು. ಆರ್ಥಿಕ ಪರಿಸ್ಥಿತಿ ಬಲವಾಗುವುದು. ಜೀವನ ಶೈಲಿ ಬದಲಾಗುವುದು.
ಸಿಂಹ ರಾಶಿಯವರಿಗೆ ಈ ಶುಭ ಯೋಗದಿಂದ ಉತ್ತಮ ಫಲ ಸಿಗುವುದು. ಉದ್ಯೋಗದಲ್ಲಿ ಪ್ರಗತಿಯಾಗುವುದು. ಹೊಸ ಜವಾಬ್ದಾರಿ ಸಿಗುವುದು. ಹೊಸ ಹೊಸ ಅವಕಾಶ ಒದಗಿ ಬರುವುದು. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಮನೆಯಾಗಲಿ, ಕಚೇರಿಯಾಗಲಿ ನಿಮ್ಮ ಮಾತಿನ ಪ್ರಕಾರವೇ ನಡೆಯುವುದು. ಐಶಾರಾಮಿ ವಸ್ತು ಅಥವಾ ವಾಹನ ಖರೀದಿಸುವ ಯೋಗವಿದೆ.
ಕನ್ಯಾ ರಾಶಿಯವರ ಮೇಲೆ ಪೂರ್ವಜರ ಆಶೀರ್ವಾದ ಇರುವುದು. ವೃತ್ತಿಪರ ಜೀವನದಲ್ಲಿ ಹೊಸ ಅವಕಾಶ ಸಿಗುವುದು. ಇಲ್ಲಿಯವರೆಗಿನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಆದಾಯದಲ್ಲಿ ಹೆಚ್ಚಳವಾಗುವುದು. ಕೆಲವು ಭರವಸೆಗಳು ಈಡೇರುವುದು. ಸುಲಭವಾಗಿ ಗುರಿ ಮುಟ್ಟುವಿರಿ.
ವೃಶ್ಚಿಕ ರಾಶಿ (Scorpio):
ಈ ಮಹಾಲಯ ಅಮಾವಾಸ್ಯೆಯು ವೃಶ್ಚಿಕ ರಾಶಿಯವರಿಗೆ ಶುಭವಾಗಿರುವುದು. ಬಹಳ ಸಮಯದಿಂದ ಬಾಧಿಸುತ್ತಿದ್ದ ಸಾಲದ ಹೊರೆಯಿಂದ ಮುಕ್ತಿ ಸಿಗುವುದು. ಹೊಸ ಅವಕಾಶಗಳು ಒಲಿದು ಬರುವುದು. ಉದ್ಯೋಗ ಅಥವಾ ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಹೆಸರು ಕೀರ್ತಿ ಗೌರವ ಹೆಚ್ಚಾಗುವುದು. ಕುಟುಂಬದಲ್ಲಿನ ಸಂತೋಷ ಹೆಚ್ಚಾಗುವುದು.
ಮಕರ ರಾಶಿ (Capricorn):
ಈ ಶುಭ ಸಂಯೋಗ ಮಕರ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ನೀಡುವುದು. ಉತ್ತಮ ಆರ್ಥಿಕ ಅವಕಾಶಗಳ ಜೊತೆಗೆ, ವೈಯಕ್ತಿಕ ಜೀವನದಲ್ಲಿಯೂ ಸಕಾರಾತ್ಮಕ ಬದಲಾವಣೆಗಳಾಗುವುದು.