ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ ಹೆಸರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ ಹೆಸರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ವಿವಾಹೇತರ ಸಂಬಂಧ ಆರೋಪ: ‘ಶುದ್ಧೀಕರಣ’ ಹೆಸರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಅಹಮದಾಬಾದ್‌: ವಿವಾಹೇತರ ಸಂಬಂಧ ಹೊಂದಿದ್ದ ಕಾರಣ ಮಹಿಳೆಯನ್ನು ‘ಶುದ್ಧೀಕರಣ’ ಮಾಡಬೇಕು ಎಂದು ಏಳು ಪುರುಷರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಇಲ್ಲಿನ ಸುರೇಂದ್ರನಗರದಲ್ಲಿ ನಡೆದಿದೆ. ಆರೋಪಿಗಳಲ್ಲಿ ಆಕೆಯ ಪತಿ ಮತ್ತು ಕುಟುಂಬದ ಸದಸ್ಯರೂ ಇದ್ದಾರೆ.

ಅತ್ಯಾಚಾರ ನಡೆಸಿದ ಮತ್ತು ದೌರ್ಜನ್ಯ ಎಸಗಿದ ದೃಶ್ಯಗಳನ್ನು ಆರೋಪಿಗಳು ವಿಡಿಯೊ ಮಾಡಿಕೊಂಡಿದ್ದಾರೆ. ‘ಸಮಾಜಕ್ಕೆ ಇದೊಂದು ಪಾಠವಾಗಬೇಕು’ ಎಂದು ಆರೋಪಿಗಳು ಈ ವಿಡಿಯೊವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕುಟುಂಬದ ಒಟ್ಟು ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡಿದ ಇಬ್ಬರು ಮಹಿಳೆಯರೂ ಸೇರಿದ್ದಾರೆ.

‘ಸಂತ್ರಸ್ತೆಯ ಪತಿಗೆ ಅದಾಗಲೇ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹವಾಗಿತ್ತು. ಸಂತ್ರಸ್ತೆಯನ್ನು ಆಕೆಯ ಪತಿಯು ಯಾವಾಗಲೂ ಮನೆಯಲ್ಲಿಯೇ ಕೂಡಿಹಾಕುತ್ತಿದ್ದ ಮತ್ತು ಆಕೆಯ ಕೈಕಾಲುಗಳನ್ನು ಕಟ್ಟಿ ಹಾಕಿಯೇ ಇಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ಆರೋಪಿಗಳ ಪತ್ತೆ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊವನ್ನು ಗಮನಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ಮುಂದಾದರು. ಮಹಿಳೆಯ ಊರಿನ ವ್ಯಕ್ತಿಯೊಬ್ಬರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಬಳಿಕ, ಸಂತ್ರಸ್ತೆಯ ಗುರುತು ಪತ್ತೆ ಮಾಡಿದ ಪೊಲೀಸರು ಆಕೆಗೆ ಮನೆಗೆ ತೆರಳಿದರು. ಆನಂತರ ಸಂತ್ರಸ್ತೆಯು  ಅವರಿಗೆ ದೂರು ನೀಡಿದರು.

ಸಂತ್ರಸ್ತೆಯು ತಳಸಮುದಾಯಕ್ಕೆ ಸೇರಿದವರಾಗಿದ್ದಾರೆ. ವಿವಾಹೇತರ ಸಂಬಂಧ ಹೊಂದಿರುವ, ವ್ಯಕ್ತಿಯೊಂದಿಗೆ ಓಡಿ ಹೋಗಿರುವ ಮತ್ತು ಇತರೆ ‘ನೀತಿಗೆಟ್ಟ’ ನಡತೆಯ ಆರೋಪ ಬಂದರೆ, ಪುರುಷರು ಮಹಿಳೆಯರನ್ನು ‘ಶುದ್ಧೀಕರಣ’ಗೊಳಿಸುತ್ತಾರೆ. ಈ ಆಚರಣೆಯ ಭಾಗವಾಗಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.

‘ಕಳೆದ ಕೆಲವು ತಿಂಗಳಿನಿಂದ ಸಂತ್ರಸ್ತೆಯು ವ್ಯಕ್ತಿಯೊಬ್ಬರೊಂದಿಗೆ ಸಹಜೀವನ ನಡೆಸುತ್ತಿದ್ದರು. ಇದನ್ನು ತಿಳಿದ ಪತಿಯು ಆಕೆಯನ್ನು ಹುಡುಕಿ ಮನೆಗೆ ಕರೆದುಕೊಂಡು ಬಂದಿದ್ದನು. ಬಳಿಕ, ಆಕೆಯನ್ನು ಮನೆಯಲ್ಲಿ ಕೂಡಿಹಾಕಲಾಗಿತ್ತು. ಇದರಿಂದ ತಪ್ಪಿಸಿ
ಕೊಂಡಿದ್ದ ಸಂತ್ರಸ್ತೆಯು, ಮರಳಿ ವ್ಯಕ್ತಿಯ ಬಳಿಗೆ ಹೋಗಿದ್ದರು’ ಎಂದು ‍ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಈ ಬಳಿಕ, ಪತಿಯು ಕುಟುಂಬ ಸದಸ್ಯರಿಗೆ ಎಲ್ಲ ವಿಚಾರಗಳನ್ನು ತಿಳಿಸಿದರು. ನಾನು ಅಪರಾಧ ನಡೆಸಿದ್ದೇನೆ ಎಂದು ನನ್ನನ್ನು ಶುದ್ಧೀಕರಣ ಮಾಡಬೇಕು ಎಂದು ಅವರೆಲ್ಲರೂ ಮತ್ತೊಮ್ಮೆ ಪತಿಯ ಬಳಿಗೆ ಕರೆತಂದು ಮರಕ್ಕೆ ಕಟ್ಟಿಹಾಕಿದರು. ನನ್ನ ಮೇಲೆ ಅತ್ಯಾಚಾರ ನಡೆಸಿದರು’ ಎಂದು ಸಂತ್ರಸ್ತೆ ಹೇಳಿದ್ದಾರೆ’ ಎಂದು ಸಹಾಯಕ ಎಸ್‌ಪಿ ವೇದಿಕ್‌ ಬಿಹಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ