ನಾನಾ ಪಾಟೇಕರ್‌ಗೆ ಬಸವ ನಾಡಿನ ನಂಟು; ಬೀದರ್‌ನಲ್ಲಿ ಬಸವ ಪುರಸ್ಕಾರ

ನಾನಾ ಪಾಟೇಕರ್‌ಗೆ ಬಸವ ನಾಡಿನ ನಂಟು; ಬೀದರ್‌ನಲ್ಲಿ ಬಸವ ಪುರಸ್ಕಾರ

ನಾನಾ ಪಾಟೇಕರ್‌ಗೆ ಬಸವ ನಾಡಿನ ನಂಟು; ಬೀದರ್‌ನಲ್ಲಿ ಬಸವ ಪುರಸ್ಕಾರ

ಬೀದರ್‌: ಹೃದಯ ಸ್ತಂಭನದಿಂದ ಗುರುವಾರ ಬೆಳಗಿನ ಜಾವ ಮೃತಪಟ್ಟಿರುವ ಬಾಲಿವುಡ್‌ ನಟ ನಾನಾ ಪಾಟೇಕರ್‌ಗೆ ಬಸವ ನಾಡಿನ ನಂಟಿದೆ.

ಮಹಾರಾಷ್ಟ್ರದ ವಿದರ್ಭದ ವಿವಿಧೆಡೆ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು ಬೀದರ್‌, ಹೈದರಾಬಾದ್‌ಗೂ ಭೇಟಿ ಕೊಟ್ಟಿದ್ದರು. ಹೈದರಾಬಾದ್‌ಗೆ ಹೋಗುವ ಮಾರ್ಗ ಮಧ್ಯದಲ್ಲಿ ಬೀದರ್‌ಗೆ ಅನೇಕ ಸಲ ಭೇಟಿ ನೀಡಿದ್ದರು ಎಂದು ಗೊತ್ತಾಗಿದೆ.

ಸರಳ, ಸಹಜ, ನೈಜ ಅಭಿಯನದ ಮೂಲಕ ಮನಗೆದ್ದಿದ್ದ ನಾನಾ ಪಾಟೇಕರ್‌ಗೆ 2017ರ ಫೆಬ್ರುವರಿ 11ರಂದು ಬೀದರ್‌ನಲ್ಲಿ ಬಸವ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಆ ವರ್ಷ ಬಸವ ಸೇವಾ ಪ್ರತಿಷ್ಠಾನದಿಂದ ಬೀದರ್‌ನ ಪಾಪನಾಶಿನಿ ಪರಿಸರದಲ್ಲಿರುವ ಬಸವಗಿರಿಯಲ್ಲಿ ಏರ್ಪಡಿಸಿದ್ದ ‘ವಚನ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಪಾಟೇಕರ್‌ಗೆ ಬಸವ ಪುರಸ್ಕಾರ ಕೊಟ್ಟು ಗೌರವಿಸಲಾಗಿತ್ತು. ₹50 ಸಾವಿರ ನಗದು, ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆ ದಿನ ಅಪಾರ ಜನ ಸಾಕ್ಷಿಯಾಗಿದ್ದರು. ಅವರನ್ನು ಕಣ್ತುಂಬಿಕೊಳ್ಳಲು, ಅವರ ಮಾತು ಕೇಳಲು ಹೆಚ್ಚಿನ ಸಂಖ್ಯೆಯ ಜನ ಅದರಲ್ಲಿ ಪಾಲ್ಗೊಂಡಿದ್ದರು.

‘ನಾನಾ ಪಾಟೇಕರ್ ಅವರೊಂದಿಗೆ ನನಗಿರುವ ವೈಯಕ್ತಿಕ ನೆನಪುಗಳು ಸದಾ ಹಸಿರು. ಅಂದು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅವರನ್ನು ಕರೆತರುವ ಜವಾಬ್ದಾರಿ ನನಗೆ ವಹಿಸಲಾಗಿತ್ತು. ಅವರೊಂದಿಗೆ ಕಳೆದ ಸಂದರ್ಭಗಳು ನೆನೆದಾಗ ಈ ದಿನ ಹೃದಯ ಬಹಳ ಭಾರವಾಗಿದೆ’ ಎಂದು ನೆನಪಿಸಿಕೊಂಡರು ಯುವ ಮುಖಂಡ ಬಸವರಾಜ ಧನ್ನೂರ.

‘ಬಸವ ಪುರಸ್ಕಾರದೊಂದಿಗೆ ಪಾಟೇಕರ್‌ ಅವರಿಗೆ ನೀಡಿದ್ದ ₹50 ಸಾವಿರ ಗೌರವ ಮೊತ್ತವನ್ನು ನಮ್ಮ ತಂದೆ ಲಿಂಗೈಕ್ಯ ಕಾಶಪ್ಪ ಧನ್ನೂರ ನೀಡಿದ್ದರು. ಪಾಟೇಕರ್‌ ಅವರಿಗೆ ಅಂದು ಬೀದರ್‌ಗೆ ಕರೆತರಲು ಪ್ರಮುಖವಾಗಿ ನೆರವಾದವರು ಹಾಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ಹಾಗೂ ಮುಂಬೈನಲ್ಲಿ ವಾಸವಾಗಿರುವ ಅವರ ಸಹೋದರ ಮಲ್ಲಿಕಾರ್ಜುನ. ಅವರ ಮೂಲಕ ನಾನಾ ಪಾಟೇಕರ್‌ ಅವರನ್ನು ಸಂಪರ್ಕಿಸಿ, ಅವರನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು, ಪುರಸ್ಕಾರ ಕೊಟ್ಟು ಗೌರವಿಸಿದೆವು’ ಎಂದು ವಿವರಿಸಿದರು.

‘ಹೈದರಾಬಾದ್ ವಿಮಾನ ನಿಲ್ದಾಣದಿಂದ ನಾನಾ ಪಾಟೇಕರ್ ಅವರನ್ನು ನಾನೇ ಸ್ವಾಗತಿಸಿ ಬೀದರ್‌ಗೆ ಕರೆತಂದಿದ್ದೆ. ವಚನ ವಿಜಯೋತ್ಸವದಲ್ಲಿ ಅವರಿಗೆ ಬಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮ ಮುಗಿದ ನಂತರ ಮತ್ತೆ ಅವರನ್ನು ಪುನಃ ಹೈದರಾಬಾದ್ ವಿಮಾನ ನಿಲ್ದಾಣದವರೆಗೆ ಬೀಳ್ಕೊಟ್ಟಿದ್ದೆ. ಇಡೀ ದಿನ ಅವರೊಟ್ಟಿಗೆ ಕಳೆದ ನೆನಪು ಈಗಲೂ ಹಸಿರಾಗಿದೆ. ಈಗ ಅವರು ನಮ್ಮ ನಡುವೆ ಇಲ್ಲ ಎಂದು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ’ ಎಂದು ನೆನೆದರು.

ಭಾರತೀಯ ಚಿತ್ರರಂಗದ ಒಬ್ಬ ಅದ್ಭುತ ಕಲಾವಿದ, ಅಪ್ರತಿಮ ನಟ ಹಾಗೂ ಸರಳ ಸಜ್ಜನ ವ್ಯಕ್ತಿತ್ವವೊಂದು ನಮ್ಮನ್ನು ಅಗಲಿರುವುದು ತುಂಬಲಾರದ ನಷ್ಟ ಎಂದು ಹೇಳಿದರು.

ಪಾಟೇಕರ್‌ ಚಿತ್ರರಂಗಕ್ಕಷ್ಟೇ ಸೀಮಿತರಾಗದೆ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಇತ್ತು. ‘ನಾಮ್ ಫೌಂಡೇಶನ್’ ಮೂಲಕ ವಿದರ್ಭದ ರೈತರ ನೆರವಿಗೆ ನಿಂತಿದ್ದರು. ಅವರ ಎಲ್ಲಾ ಹೋರಾಟಗಳಿಗೆ ಬೆಂಬಲವಾಗಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ