ಶಿರಸಿ: ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

ಶಿರಸಿ: ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

ಶಿರಸಿ: ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

ಶಿರಸಿ: ‘ತಾಲ್ಲೂಕಿನ ಸಂಪಖಂಡ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಈ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರ ಹಾಗೂ ಮಾರ್ಗೋಪಾಯ ಸೂಚಿಸುವಂತೆ’ ಆಗ್ರಹಿಸಿ ಈ ಭಾಗದ ರೈತರು ಜಾನ್ಮನೆ ವಲಯಾರಣ್ಯಾಧಿಕಾರಿ ರೊಮಾನಾ ಶೇಖ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

‘ವಿಶೇಷವಾಗಿ ನೆಗ್ಗು, ಜಾನ್ಮನೆ ಹಾಗೂ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಹಂದಿ, ಬಿಳಿ ಮೂತಿ ಮಂಗ, ಗಮಯ, ಕೆಂಚಳಿಲು ಹಾಗೂ ನವಿಲುಗಳ ಕಾಟ ಜಾಸ್ತಿಯಾಗಿದೆ. ಹಂದಿಗಳ ಹಾವಳಿಯಿಂದಾಗಿ ರೈತರು ರಾತ್ರಿಯಿಡಿ ನಿದ್ದೆಗೆಟ್ಟು ತೋಟ ಕಾಯುವ ಸ್ಥಿತಿ ನಿರ್ಮಾಣವಾಗಿದ್ದರೆ, ಹಗಲಿನಲ್ಲಿ ಮಂಗಗಳು ಎಳೆ ಅಡಿಕೆಗಳನ್ನು, ಕೆಂಚಳಿಲು ತೆಂಗಿನ ಎಳೆ ಮಿಳ್ಳೆಗಳನ್ನು ಹಾಗೂ ನವಿಲುಗಳು ಅಡಿಕೆ ಗಿಡಗಳ ಗರಿಗಳನ್ನು ಹಾಳು ಮಾಡುತ್ತಿವೆ’ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

‘ಕಾಡುಪ್ರಾಣಿಗಳು ದಿನನಿತ್ಯ ಬೆಳೆ ಹಾನಿ ಮಾಡುತ್ತಿರುವುದರಿಂದ ಪ್ರತಿಬಾರಿಯೂ ಇಲಾಖೆ ಸಮೀಕ್ಷೆ ನಡೆಸಿ ಪರಿಹಾರ ನೀಡುವುದು ಸುಲಭವಲ್ಲ. ಆದ್ದರಿಂದ ಪ್ರಾಣಿಗಳು ತೋಟಗಳಿಗೆ ಬರದಂತೆ ತಡೆಯಲು ಇಲಾಖೆಯೇ ಸೂಕ್ತ ಮಾರ್ಗದರ್ಶನ ನೀಡಬೇಕು. ಕೇವಲ ಅಕೇಶಿಯಾ ಗಿಡಗಳನ್ನು ಬೆಳೆಸುವ ಬದಲು, ಕಾಡುಪ್ರಾಣಿಗಳಿಗೆ ಅರಣ್ಯದಲ್ಲೇ ಆಹಾರ ಸಿಗುವಂತೆ ಹಣ್ಣಿನ ಗಿಡಗಳನ್ನು ನೆಡಬೇಕು ಹಾಗೂ ರೈತರಿಗೂ ಅಂತಹ ಗಿಡಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯ ಸಂಕೇತವಾಗಿ ಮಂಗಗಳು ತಿಂದು ಖಾಲಿ ಮಾಡಿದ್ದ ಬಾಳೆಗೊನೆಗಳನ್ನು ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಹಾರೂಗಾರ ಸೇವಾ ಸಹಕಾರ ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಕೆಡಿಪಿ ಸಲಹಾ ಸಮಿತಿ ಸದಸ್ಯ ದಿವಾಕರ ಹೆಗಡೆ ತೊಣ್ಣೆಮನೆ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ