ರೈತರು ಸಹಕಾರಿ ಸಂಘ ನಂಬಿ ಠೇವಣಿ ಇಡಿ: ಖಾಜಿಕಲ್ಲಹಳ್ಳಿ ಮುನಿರಾಜು

ರೈತರು ಸಹಕಾರಿ ಸಂಘ ನಂಬಿ ಠೇವಣಿ ಇಡಿ: ಖಾಜಿಕಲ್ಲಹಳ್ಳಿ ಮುನಿರಾಜು

ರೈತರು ಸಹಕಾರಿ ಸಂಘ ನಂಬಿ ಠೇವಣಿ ಇಡಿ: ಖಾಜಿಕಲ್ಲಹಳ್ಳಿ ಮುನಿರಾಜು

ನರಸಾಪುರ (ಕೋಲಾರ): ಸಹಕಾರಿ ಸಂಘಗಳು ರೈತರಿಗೆ ಆರ್ಥಿಕ ನೆರವು ನೀಡುವ ಪ್ರಮುಖ ಕೇಂದ್ರಗಳಾಗಿದ್ದು, ರೈತರು ಹಾಗೂ ಷೇರುದಾರರು ಸೊಸೈಟಿಯಲ್ಲಿ ಠೇವಣಿ ಇಟ್ಟು, ಷೇರು ಪಡೆದು ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು ತಿಳಿಸಿದರು

ಶುಕ್ರವಾರ ಇಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು.

ಹಿಂದೆ ಸೊಸೈಟಿಯಲ್ಲಿ ಸುಮಾರು ₹80 ಲಕ್ಷ ಹಣ ದುರುಪಯೋಗವಾಗಿರುವ ಕುರಿತು ಹಿಂದಿನ ಕಾರ್ಯದರ್ಶಿ ವಿರುದ್ಧ ದೂರು ಇದೆ. ಆ ಹಣವನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದ್ದು, ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸೊಸೈಟಿಯ ಅಭಿವೃದ್ಧಿಗೆ ಆಡಳಿತ ಮಂಡಳಿ ಒತ್ತು ನೀಡುತ್ತಿದೆ ಎಂದರು.

ಸೊಸೈಟಿಯಿಂದ ರೈತರಿಗೆ ಈಗಾಗಲೇ ಸುಮಾರು ₹10 ಕೋಟಿ ಸಾಲ ನೀಡಲಾಗಿದೆ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಹಣ ತಂದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸೊಸೈಟಿಗಳಿಗೆ ಸರ್ಕಾರದಿಂದ ನೇರವಾಗಿ ಅನುದಾನ ಬರುವುದಿಲ್ಲ. ರೈತರಿಗೆ ಸಾಲ ನೀಡಿದ ಬಳಿಕ ಬಡ್ಡಿ ಬರಲು ಸಮಯ ಬೇಕಾಗುತ್ತದೆ. ಹೀಗಾಗಿ, ಸದಸ್ಯರ ಸಹಕಾರ ಅಗತ್ಯ ಎಂದು ಹೇಳಿದರು.

ಸೊಸೈಟಿ ವ್ಯಾಪ್ತಿಯ ರೇಷನ್ ಉಪಕೇಂದ್ರಗಳಿಗೆ ಪಡಿತರ ತಲುಪಲು ಕಾನೂನು ಅಡ್ಡಿ ಇದ್ದು, ಈ ಕುರಿತು ತಾಲ್ಲೂಕಿನ 12 ಸೊಸೈಟಿ ಅಧ್ಯಕ್ಷರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. 500 ಕಾರ್ಡ್‌ಗಳಿದ್ದರೆ ಸ್ಥಳೀಯವಾಗಿಯೇ ಪಡಿತರ ವಿತರಿಸಲು ಸಿದ್ಧವಿದ್ದು, 500ರ ಬದಲಿಗೆ 300 ಕಾರ್ಡ್‌ಗಳ ಮಿತಿ ನಿಗದಿಪಡಿಸಿ ಅನುಕೂಲ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು.

ಸಭೆಯಲ್ಲಿ ಸೊಸೈಟಿ ಉಪಾಧ್ಯಕ್ಷ ವಿ. ಗಣೇಶ್, ನಿರ್ದೇಶಕರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಜಮುನ, ಚನ್ನರಾಯಗೌಡ, ಮಂಜುನಾಥ್, ಎಂ. ನಾರಾಯಣಸ್ವಾಮಿ, ಅಂಜಿನಮ್ಮ, ಆದಿಮೂರ್ತಿ, ಮೋಟಪ್ಪ, ವೆಂಕಟಪ್ಪ, ಚಂದ್ರಶೇಖರ್, ಸಿಇಒ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಹಾಗೂ ಷೇರುದಾರರು ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ