ಬಾಚಿ, ಸುಳಗಾಕ್ಕೆ ಮೈದಾನ, ಕೆರೆ ನಿರ್ಮಾಣಕ್ಕೆ ಸರ್ಕಾರಿ ಜಮೀನು ಮಂಜೂರು

ಬಾಚಿ, ಸುಳಗಾಕ್ಕೆ ಮೈದಾನ, ಕೆರೆ ನಿರ್ಮಾಣಕ್ಕೆ ಸರ್ಕಾರಿ ಜಮೀನು ಮಂಜೂರು

ಬಾಚಿ, ಸುಳಗಾಕ್ಕೆ ಮೈದಾನ, ಕೆರೆ ನಿರ್ಮಾಣಕ್ಕೆ ಸರ್ಕಾರಿ ಜಮೀನು ಮಂಜೂರು

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಚಿ ಹಾಗೂ ಸುಳಗಾ ಗ್ರಾಮಗಳಲ್ಲಿ ಆಟದ ಮೈದಾನ ಮತ್ತು ಸಾರ್ವಜನಿಕ ಕೆರೆ ನಿರ್ಮಾಣಕ್ಕೆ ಅಗತ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡಿಸುವಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಗ್ರಾಮಗಳಲ್ಲಿನ ಸಾರ್ವಜನಿಕ ಅಗತ್ಯಗಳು ಹಾಗೂ ಗ್ರಾಮಸ್ಥರ ಮನವಿಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದರು. ಚರ್ಚೆಯ ಬಳಿಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸರ್ಕಾರಿ ಜಮೀನು ಹಸ್ತಾಂತರಿಸುವ ಕುರಿತು ಅಧಿಕೃತ ಆದೇಶಗಳನ್ನು ಪಡೆದುಕೊಂಡರು.

ಬಾಚಿ ಶಾಲೆಗೆ 3 ಎಕರೆ ಜಮೀನು: ಬಾಚಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟದ ಮೈದಾನದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೆ ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿರುವುದನ್ನು ಗ್ರಾಮಸ್ಥರು ಹೆಬ್ಬಾಳಕರ್ ಅವರ ಗಮನಕ್ಕೆ ತಂದಿದ್ದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ಅವರ ದೈಹಿಕ ಹಾಗೂ ಕ್ರೀಡಾ ಪ್ರತಿಭೆ ಬೆಳೆಸಲು ಆಟದ ಮೈದಾನ ಅತ್ಯಗತ್ಯ ಆಗಿರುವುದನ್ನು ಮನಗಂಡ ಶಾಸಕರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಈ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ್ದರು.

ಇದೀಗ ಬಾಚಿ ಗ್ರಾಮದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನ ನಿರ್ಮಾಣಕ್ಕಾಗಿ 3 ಎಕರೆ ಕಂದಾಯ ಇಲಾಖೆಯ ಜಮೀನನ್ನು ಶಿಕ್ಷಣ ಇಲಾಖೆಗೆ ಮಂಜೂರು ಮಾಡಿಸುವಲ್ಲಿ ಅವರು ಯಶಸ್ವಿಯಾದರು. ಈ ಸಂಬಂಧ ಜಮೀನು ಮಂಜೂರಾತಿ ಆದೇಶವನ್ನು ಪಡೆದುಕೊಳ್ಳಲಾಗಿದೆ.

ಸುಳಗಾದಲ್ಲಿ ಆಟದ ಮೈದಾನ, ಸಾರ್ವಜನಿಕ ಕೆರೆಗೆ ಜಾಗ: ಇದೇ ವೇಳೆ ಸುಳಗಾ ಗ್ರಾಮದ ಮತ್ತೊಂದು ಬಹುಕಾಲದ ಬೇಡಿಕೆಯೂ ಈಡೇರಿದೆ. ಗ್ರಾಮದಲ್ಲಿ ಸಾರ್ವಜನಿಕರಿಗೆ ಹಾಗೂ ಯುವಕರಿಗೆ ಅನುಕೂಲವಾಗುವಂತೆ ಆಟದ ಮೈದಾನ ನಿರ್ಮಿಸುವುದು ಮತ್ತು ಸಾರ್ವಜನಿಕ ಕೆರೆಯೊಂದನ್ನು ನಿರ್ಮಿಸುವುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿತ್ತು.

ಈ ಹಿನ್ನೆಲೆಯಲ್ಲಿ 4 ಎಕರೆ ಜಮೀನನ್ನು ಸಾರ್ವಜನಿಕ ಆಟದ ಮೈದಾನ ನಿರ್ಮಾಣಕ್ಕಾಗಿ ಹಾಗೂ 2 ಎಕರೆ ಜಮೀನನ್ನು ಸಾರ್ವಜನಿಕ ಕೆರೆ ನಿರ್ಮಾಣಕ್ಕಾಗಿ ಬೆಳಗಾವಿ ತಾಲ್ಲೂಕು ಪಂಚಾಯಿತಿಗೆ ಮಂಜೂರು ಮಾಡುವ ಅಧಿಕೃತ ಆದೇಶವನ್ನು ಲಕ್ಷ್ಮೀ ಹೆಬ್ಬಾಳಕರ್ ಪಡೆದುಕೊಂಡರು.

‘ಗ್ರಾಮೀಣ ಮಕ್ಕಳ ಅಭಿವೃದ್ಧಿಗೆ ಆದ್ಯತೆ’

‘ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳಿಗೆ ಆಟದ ಮೈದಾನಗಳ ಕೊರತೆ ಇನ್ನೂ ಹಲವೆಡೆ ಕಂಡುಬರುತ್ತಿದೆ. ತರಗತಿ ಕೊಠಡಿಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಕ್ರೀಡೆ, ದೈಹಿಕ ಚಟುವಟಿಕೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ಅಗತ್ಯವಾದ ಮೂಲಸೌಕರ್ಯ ದೊರೆಯುವುದು ಅವರ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಮುಖ್ಯವಾಗಿದೆ’ ಎಂದು ಲಕ್ಷ್ಮಿ ಹೆಬ್ಬಾಳಕರ್‌ ತಿಳಿಸಿದರು.

‘ಸಾರ್ವಜನಿಕರ ಅಗತ್ಯಗಳನ್ನು ಗುರುತಿಸಿ, ಲಭ್ಯವಿರುವ ಸರ್ಕಾರಿ ಜಮೀನನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಜಮೀನು ಮಂಜೂರಾತಿಗಳು ಮಹತ್ವದ ಬೆಳವಣಿಗೆಯಾಗಿವೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ