
ಹೊನ್ನಾಳಿ ಕೊಲೆ ಆರೋಪಿಗಳ ಬಂಧನ: ವಿವಾಹೇತರ ಸಂಬಂಧ ಕಾರಣ
ಹೊನ್ನಾಳಿ: ಪಟ್ಟಣದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಈಚೆಗೆ ಅಮಿತ್ ಮೂಲೇರ್ (30) ಎಂಬ ಯುವಕನ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹೊನ್ನಾಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಗಣೇಶ್ (23), ಖಾರದಪುಡಿ ಚಂದ್ರು (30), ಆಕಾಶ್ (26), ಸಂದೀಪ್, (25), ಪುನೀತ್ (27) ಹಾಗೂ ಶಿವಮೊಗ್ಗದ ಮಣಿಕಂಠ (30), ವಿನಯಕುಮಾರ್ (31) ಬಂಧಿತರು.
ಕೊಲೆಯಾದ ಅಮಿತ್ ಹಾಗೂ ಆರೋಪಿ ಗಣೇಶನ ಹೆಂಡತಿಗೆ ವಿವಾಹೇತರ ಸಂಬಂಧ ಇತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ದ್ವೇಷ ಬೆಳೆದಿತ್ತು. ಆದ್ದರಿಂದ ಗಣೇಶ್, ಅಮಿತ್‍ನನ್ನು ಕೊಲೆ ಮಾಡುವಂತೆ ಮಣಿಕಂಠನಿಗೆ ಮೂರು ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಾವಣಗೆರೆ ಎಸ್‌ಪಿ ಎಚ್.ಟಿ. ಶೇಖರ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಪ್ರಕರಣ ದಾಖಲಿಸಿಕೊಂಡು ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ರುದ್ರಪ್ಪ ಎಸ್. ಉಜ್ಜನಕೊಪ್ಪ, ಇನ್‌ಸ್ಪೆಕ್ಟರ್ ಸುನೀಲ್‍ಕುಮಾರ್, ಪಿಎಸ್‌ಐ ಗುರುಶಾಂತಯ್ಯ, ಹೊಳೆಬಸಪ್ಪ, ನಿರ್ಮಲಾ, ಎಎಸ್‌ಐ ಹರೀಶ್, ತೀರ್ಥಲಿಂಗಪ್ಪ, ಅಶೋಕ್ ರೆಡ್ಡಿ, ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿಯನ್ನು ಎಸ್‍ಪಿ ಎಚ್.ಟಿ. ಶೇಖರ್ ಪ್ರಶಂಸಿಸಿದ್ದಾರೆ.