
ಕಾಸರಗೋಡು: ತ್ಯಾಜ್ಯ ಗುಂಡಿಗೆ ಬಿದ್ದ ಕಾರ್ಮಿಕ ಸಾವು
ಕಾಸರಗೋಡು: ಕುಂಬಳೆ ಬಳಿಯ ಅನಂತಪುರದ ಕಾರ್ಖಾನೆಯೊಂದರ ತ್ಯಾಜ್ಯ ಗುಂಡಿಗೆ ಬಿದ್ದ ಕಾರ್ಮಿಕ, ಮೂಲತಃ ಒಡಿಶಾ ನಿವಾಸಿ ಮಹೇಶ್ ವಾರ್ ಕಣಾಹರ್ (16) ಎಂಬಾತ ಆಮ್ಲಜನಕ ಲಭಿಸದೆ ಮೃತಪಟ್ಟಿದ್ದಾರೆ.
ಆತನನ್ನು ಮೇಲಕ್ಕೆತ್ತಲು ಯತ್ನಿಸಿದ ಕಾರ್ಮಿಕರಾದ ತನುಜ್ ಪ್ರಧಾನ್, ಸಿದ್ಧಾರ್ಥ್ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತನುಜ್ ಪ್ರಧಾನ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಲಸದಲ್ಲಿ ನಿರತರಾಗಿದ್ದ ಮಹೇಶ್ ಅವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದಾಗ, ಸಹಾಯಕ್ಕೆ ಇಬ್ಬರು ಗುಂಡಿಗೆ ಇಳಿದು ಮೇಲಕ್ಕೆ ಬರಲಾರದೆ ಕೂಗಿಕೊಂಡಿದ್ದಾರೆ. ಈ ವೇಳೆ ಧಾವಿಸಿದ ಇತರರು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಹೇಶ್ ಅಷ್ಟರಲ್ಲಿ ಮೃತಪಟ್ಟರು.