ಮುಳಬಾಗಿಲು|ಹೆದ್ದಾರಿ ಪಕ್ಕ ಭಾರಿ ವಾಹನಗಳ ನಿಲುಗಡೆ; ಪಾದಚಾರಿಗಳಿಗೆ ನಿತ್ಯ ಸಂಕಷ್ಟ

ಮುಳಬಾಗಿಲು|ಹೆದ್ದಾರಿ ಪಕ್ಕ ಭಾರಿ ವಾಹನಗಳ ನಿಲುಗಡೆ; ಪಾದಚಾರಿಗಳಿಗೆ ನಿತ್ಯ ಸಂಕಷ್ಟ

ಮುಳಬಾಗಿಲು|ಹೆದ್ದಾರಿ ಪಕ್ಕ ಭಾರಿ ವಾಹನಗಳ ನಿಲುಗಡೆ; ಪಾದಚಾರಿಗಳಿಗೆ ನಿತ್ಯ ಸಂಕಷ್ಟ

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪಕ್ಕದ ಪಾದಚಾರಿ ಮಾರ್ಗಗಳಲ್ಲಿ ಯಾವುದೇ ವಾಹನ ನಿಲ್ಲಿಸಬಾರದು ಮತ್ತು ಸಂಚಾರ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಹಾಗೂ ಮೋಟಾರ್ ಕಾಯ್ದೆ ಸ್ಪಷ್ಟಪಡಿಸುತ್ತವೆ.

ಈ ಪ್ರಕಾರ ಪಾದಚಾರಿ ಮಾರ್ಗಗಳು ಜನಸಾಮಾನ್ಯರ ಸಂಚಾರಕ್ಕೆ ಮೀಸಲಿಡಬೇಕು. ಆದರೆ, ರಾಷ್ಟ್ರೀಯ ಹೆದ್ದಾರಿ 75ರ ಮಾರ್ಗ ಮಾತ್ರ ಲಾರಿ, ಟಿಪ್ಪರ್ ಸೇರಿದಂತೆ ಇನ್ನಿತರ ವಾಹನಗಳಿಗೆ ಪಾರ್ಕಿಂಗ್ ತಾಣ ಎಂಬಂತೆ ಭಾಸವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 75 ಹಾದು ಹೋಗುವ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾರಿ ವಾಹನಗಳು ಹಾಗೂ ಕೆಲವು ಕಡೆ ಮಾರುಕಟ್ಟೆಗೆ ಹೋಗಿ ಬರುವ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಬೆಂಗಳೂರಿನ ಕೆ.ಆರ್.ಪುರಂನಿಂದ ತಾಲ್ಲೂಕಿನ ಮೂಲಕ ನೆರೆಯ ಆಂಧ್ರಪ್ರದೇಶಕ್ಕೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕೆಲವರು ಭಾರಿ ವಾಹನಗಳನ್ನು ಅಂಗಡಿ ಮುಂಗಟ್ಟುಗಳ ಬಳಿ, ಸಣ್ಣಪುಟ್ಟ ಹೋಟೆಲ್‌ಗಳ ಬಳಿ ಗಂಟೆಗಟ್ಟಲೇ ಕಾಲ ನಿಲ್ಲಿಸಲಾಗುತ್ತಿದೆ. ಇದರಿಂದ ಪಾದಚಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.

ತಾಲ್ಲೂಕಿನ ಹೆದ್ದಾರಿಯಲ್ಲಿ ಇರುವ ಕೆಲವು ಫಾಸ್ಟ್‌ಫುಡ್ ಕೇಂದ್ರಗಳ ಬಳಿ ಚಹಾ ಮತ್ತು ಕಾಫಿ, ಹಲವು ಪೆಟ್ರೋಲ್ ಬಂಕ್‌, ಬೇಕರಿ, ಡಾಬಾ ಹಾಗೂ ಕೆಲವು ಬಾರ್ ಮತ್ತು ರೆಸ್ಟೊರೆಂಟ್‌ಗಳಿವೆ. ಅವುಗಳ ಮುಂಭಾಗದಲ್ಲಿ ಸದಾ ಕಾಲ ಬೃಹತ್ ಕಂಟೇನರ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಇದರಿಂದ ಸ್ಥಳೀಯ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿನಿತ್ಯವೂ ಪರದಾಡುವಂತಾಗಿದೆ.

ಕೆಲವು ಕಡೆ ಹೆದ್ದಾರಿಯಿಂದ ಕವಲಾಗಿ ಗ್ರಾಮಾಂತರ ಭಾಗಗಳಿಗೆ ಸಂಪರ್ಕಿಸುವ ವೃತ್ತಗಳಲ್ಲಿ ವಿಶಾಲವಾದ ಪಾದಚಾರಿ ಮಾರ್ಗಗಳೂ ಬೃಹತ್ ವಾಹನಗಳ ನಿಲುಗಡೆ ತಾಣವಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಬರುವ ಬಸ್, ಶಾಲಾ ಕಾಲೇಜುಗಳ ವಾಹನಗಳು, ಆಟೊಗಳು ಸೇರಿದಂತೆ ಇನ್ನಿತರ ವಾಹನಗಳನ್ನು ವೃತ್ತಾಕಾರದ ಮಾರ್ಗದಲ್ಲಿ ಸುಲಭವಾಗಿ ತಿರುಗಿಸಲಾಗುತ್ತಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡರು.

ಹೆದ್ದಾರಿಯಲ್ಲಿ ತಾಲ್ಲೂಕಿನ ಸೊಣ್ಣವಾಡಿ, ತಾಯಲೂರು, ಕೆಜಿಎಫ್ ರಸ್ತೆ, ವಿರುಪಾಕ್ಷಿ, ನಂಗಲಿ ಸಮೀಪದ ಮುದಿಗೆರೆ ವೃತ್ತ, ಎನ್.ಗಡ್ಡೂರು, ನಂಗಲಿ ಗಡಿ, ಎನ್.ಚಮಕಲಹಳ್ಳಿ ವೃತ್ತ, ಎನ್.ಕುರುಬರಹಳ್ಳಿ ಮತ್ತಿತರರ ವೃತ್ತಗಳಲ್ಲಿ ಯೂ ಟರ್ನ್ ಮಾಡಿಕೊಂಡು ಸ್ವಲ್ಪ ದೂರ ಅಡ್ಡಲಾಗಿಯೇ ಸ್ಥಳೀಯರು ಸಂಚರಿಸುವಂತಾಗಿದೆ.

ಇಂಥ ಸಂದರ್ಭದಲ್ಲಿ ಅಪಘಾತವಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 75ರ ವಿವಿಧೆಡೆ ಪಾದಚಾರಿ ಮಾರ್ಗದಲ್ಲಿ ನಿಲ್ಲುವ ವಾಹನಗಳನ್ನು ತೆರವುಗೊಳಿಸಬೇಕು. ಈ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ನರಸಿಂಹಪ್ಪ ಒತ್ತಾಯಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ