ಮಡಿಕೇರಿ: ಮರೀಚಿಕೆಯಾದ ಫ್ಲೆಕ್ಸ್ ಮುಕ್ತ ದಸರಾ; ರಾರಾಜಿಸುತ್ತಿವೆ ಬ್ಯಾನರ್

ಮಡಿಕೇರಿ: ಮರೀಚಿಕೆಯಾದ ಫ್ಲೆಕ್ಸ್ ಮುಕ್ತ ದಸರಾ; ರಾರಾಜಿಸುತ್ತಿವೆ ಬ್ಯಾನರ್

ಮಡಿಕೇರಿ: ಮರೀಚಿಕೆಯಾದ ಫ್ಲೆಕ್ಸ್ ಮುಕ್ತ ದಸರಾ; ರಾರಾಜಿಸುತ್ತಿವೆ ಬ್ಯಾನರ್

ಮಡಿಕೇರಿ: ವರ್ಷದಿಂದ ವರ್ಷಕ್ಕೆ ಮಡಿಕೇರಿ ನಗರದ ದಸರೆಯಲ್ಲಿ ಫ್ಲೆಕ್ಸ್‌ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೆ ಇವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ‘ಬೆಳಕಿನ ದಸರೆ’ಯು ‘ಫ್ಲೆಕ್ಸ್‌ ದಸರೆ’ಯಾಗಿ ಮಾರ್ಪಾಡಾಗಬಹುದು ಎಂಬ ಆತಂಕವನ್ನು ಹಿರಿಯರು ವ್ಯಕ್ತಪಡಿಸುತ್ತಾರೆ. ಇವರ ಆತಂಕಕ್ಕೆ ಪೂರಕವಾಗಿ ಈಗ ನಗರದೆಲ್ಲೆಡೆ ಫ್ಲೆಕ್ಸ್‌ಗಳೇ ರಾರಾಜಿಸುತ್ತಿವೆ.

ಈ ವರ್ಷ ಮೈಸೂರು ದಸರೆಯನ್ನು ಫ್ಲೆಕ್ಸ್ ಮುಕ್ತ ದಸರೆಯನ್ನಾಗಿ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಅಲ್ಲಿನ ಮಹಾನಗರ ಪಾಲಿಕೆಯೂ ಯಾವುದೇ ಮಾದರಿಯ ಫ್ಲೆಕ್ಸ್‌ಗಳನ್ನು ನಗರದಲ್ಲಿ ಅಳವಡಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಜತೆಗೆ, ಈಗಾಗಲೇ ಹಾಕಲಾಗಿದ್ದ ಅನಧಿಕೃತ ಫ್ಲೆಕ್ಸ್‌ಗಳ ತೆರವನ್ನೂ ನಡೆಸುತ್ತಿದೆ.

ಈ ಬಗೆಯ ಪ್ರಯತ್ನ ಇರಲಿ, ಆಲೋಚನೆಯೂ ಇಲ್ಲಿನ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇದುವರೆಗೂ ಬಂದಿಲ್ಲ. ಎಲ್ಲರೂ ಪಕ್ಷಾತೀತವಾಗಿ ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ನಗರದ ಬಾಗಿಲಿನಿಂದ ಹಿಡಿದು ಎಲ್ಲೆಡೆ ನಾನಾ ನಮೂನೆಯ ಫ್ಲೆಕ್ಸ್‌ಗಳು ಗಮನ ಸೆಳೆಯುತ್ತಿವೆ.

ಇಂತಹ ಫ್ಲೆಕ್ಸ್‌ಗಳಿಗೆ ಅನುಮತಿ ಇದೆಯೇ ಎಂದು ಮಡಿಕೇರಿ ನಗರಸಭೆಯ ಪೌರಾಯುಕ್ತರನ್ನು ಕೇಳಿದರೆ ಅವರು, ಕೇವಲ ದೇವಸ್ಥಾನಕ್ಕೆ ಸಂಬಂಧಿಸಿದ ಫ್ಲೆಕ್ಸ್ ಅಳವಡಿಕೆಗಷ್ಟೇ ಅನುಮತಿ ನೀಡಲಾಗಿದೆ. ಆದರೆ, ದೇವಸ್ಥಾನಕ್ಕಿಂತ ರಾಜಕೀಯ ಮುಖಂಡರ ಚಿತ್ರಗಳೇ ಹೆಚ್ಚು ದೊಡ್ಡದಾಗಿ ರಾರಾಜಿಸುತ್ತಿವೆ.

ಇಂತಹ ಬಹಳಷ್ಟು ಫ್ಲೆಕ್ಸ್‌ಗಳಲ್ಲಿ ಯಾವುದೇ ವಿಧವಾದ ಮಾಹಿತಿಯೂ ಇಲ್ಲ. ಕೇವಲ ಸ್ವಾಗತ ಕೋರುವುದು ಹಾಗೂ ಸ್ವಾಗತ ಕೋರುವವರ ಭಾವಚಿತ್ರ ಅಳವಡಿಸುವುದು ಮಾತ್ರವೇ ಇದೆ. ಇಲ್ಲಿನ ದಸರೆಯ ಇತಿಹಾಸ, ನಾಲ್ಕೂ ಶಕ್ತಿದೇವತೆಗಳ ಮಹತ್ವ, ದಸರೆಯ ಆರಂಭ, ನಿತ್ಯ ನಡೆಯುವ ಕಾರ್ಯಕ್ರಮಗಳ ಮಾಹಿತಿಗಳೂ ಈ ಬಗೆಯ ಫ್ಲೆಕ್ಸ್‌ಗಳಲ್ಲಿ ಇಲ್ಲ.

ಇಷ್ಟು ಮಾತ್ರವಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ವಿಜಯದಶಮಿಯಂದು ನಡೆಯುವ ಎಲ್ಲ ಹತ್ತೂ ಮಂಟಪಗಳ ಶೋಭಾಯಾತ್ರೆಯ ವಿವರಗಳು, ಹತ್ತೂ ಮಂಟಪದಲ್ಲಿ ಪ್ರದರ್ಶನವಾಗುವ ಕಥಾವಸ್ತುಗಳು ಹೀಗೆ ಯಾವ ವಿವರಗಳೂ ಈ ಫ್ಲೆಕ್ಸ್‌ಗಳಲ್ಲಿ ಇಲ್ಲ. ಇವೆಲ್ಲವೂ ಪ್ರವಾಸಿಗರ ಕಣ್ಣಿಗೆ ಶತ್ರುಗಳಂತಾಗಿವೆ. ಹಳೆಯ ಬಸ್‌ನಿಲ್ದಾಣದ ತಡೆಗೋಡೆ, ಟೋಲ್‌ಗೇಟ್‌ ಸೇರಿದಂತೆ ಎಲ್ಲೆಡೆ ಫ್ಲೆಕ್ಸ್ ಮಯವಾಗಿದೆ. ಇಲ್ಲಿನ ನಗರಸಭೆ ಇದನ್ನೆಲ್ಲ ನೋಡಿಯೂ ನೋಡದಂತಿದೆ.

ಮುಂದಿನ ವರ್ಷವಾದರೂ ಮಡಿಕೇರಿ ದಸರೆಯನ್ನು ಫ್ಲೆಕ್ಸ್ ಮುಕ್ತ ದಸರೆಯನ್ನಾಗಿ ಮಾಡಲು, ಈ ಫ್ಲೆಕ್ಸ್‌ಗಳ ಬದಲಿಗೆ ದೀಪಾಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಲಿ ಎಂದು ಇಲ್ಲಿನ ಹಿರಿಯರಾದ ಕೇಶವ ಒತ್ತಾಯಿಸುತ್ತಾರೆ.

ಕೋಟೆಗೆ ಹಾಕಿದ್ದ ಫ್ಲೆಕ್ಸ್ ತೆರವಿಗೆ ಸೂಚನೆ

ಭಾರತೀಯ ಪುರಾತತ್ವ ಸರ್ವೇಕ್ಷಣಾಲಯವು ಮಡಿಕೇರಿ ಕೋಟೆಗೆ ಹಾಕಲಾಗಿದ್ದ ಫ್ಲೆಕ್ಸ್ ತೆರವಿಗೆ ಸೂಚನೆ ನೀಡಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ಅಧಿಕಾರಿಯೊಬ್ಬರು ‘ಫ್ಲೆಕ್ಸ್ ಹಾಕಿದ್ದವರ ಗಮನಕ್ಕೆ ತರಲಾಗಿದ್ದು, ಭಾನುವಾರ ಇದರ ತೆರವು ಕಾರ್ಯ ನಡೆಯಲಿದೆ’ ಎಂದು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ