
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್: ಅರುಣಕುಮಾರ್ ಪಾಟೀಲ
ಅಫಜಲಪುರ: ‘ದೇಶದ ಏಳಿಗೆ, ಒಗ್ಗಟ್ಟು, ಏಕತೆಗೆ ಶ್ರಮಿಸಿದ ಪಕ್ಷ ಕಾಂಗ್ರೆಸ್. ದೇಶವನ್ನು ಒಗ್ಗೂಡಿಸಿದ್ದು, ಸ್ವಾತಂತ್ರ್ಯ ತಂದು ಕೊಟ್ಟ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ’ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ನಿಮಗದ ಅಧ್ಯಕ್ಷ ಅರುಣಕುಮಾರ್ ಎಂ.ಪಾಟೀಲ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಗೌರ (ಬಿ) ಗ್ರಾಮದ ಸುರೇಶ ನಾಯ್ಕೋಡಿ, ಫಕೀರಪ್ಪ ನಾಯ್ಕೋಡಿ ಸೇರಿದಂತೆ ಸುಮಾರು 15 ಜನ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಿಗಿ ಮಾತನಾಡಿದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಗಾಡಿಸೌಕಾರ, ಶರಣು ಕುಂಬಾರ, ಮುಖಂಡರಾದ ಮಹಾಲಿಂಗ ಅಂಗಡಿ, ವಿಶ್ವನಾಥ ಮಲಗಣ, ಶ್ರೀಶೈಲ್ ಗೌಡ ಪಾಟೀಲ, ಅಂಬರೀಶ್ ಬುರಲಿ, ಮಲ್ಲು ವಾಳಿ, ಅನುಸೂಯ ಸುಲೇಕರ ಇದ್ದರು.