ಹುಣಸೂರು ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ನೀಡದೆ ಅನ್ಯಾಯ

ಹುಣಸೂರು ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ನೀಡದೆ ಅನ್ಯಾಯ

ಹುಣಸೂರು ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ನೀಡದೆ ಅನ್ಯಾಯ

ಹುಣಸೂರು: ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಸಂಬಂಧ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಮೀಸಲಾತಿ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ದಲಿತ ಮುಖಂಡ ದೇವರಾಜ ಒಡೆಯರ್‌ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಅವರನ್ನು ಭೇಟಿ ಮಾಡಿದ ದಲಿತ ಸಮುದಾಯದ ವಿವಿಧ ಮುಖಂಡರು ಜಿ.ಪಂ. ಮೀಸಲಾತಿ ಕರಡು ಪ್ರತಿಯಲ್ಲಿನ ಲೋಪ ಕುರಿತು ಚರ್ಚಿಸಿದರು.

ಮೈಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 9 ತಾಲ್ಲೂಕಿದ್ದು ಹುಣಸೂರು ಕ್ಷೇತ್ರದಲ್ಲಿ 6 ಸ್ಥಾನವಿದ್ದು, ಈ ಪೈಕಿ ಎಸ್‌ಸಿ ವರ್ಗಕ್ಕೆ ಒಂದೂ ಸ್ಥಾನವು ಮೀಸಲು ಕಲ್ಪಿಸದೆ ಕ್ಷೇತ್ರದ ದಲಿತ ಮತದಾರರನ್ನು ಕಡೆಗಾಣಿಸಲಾಗಿದೆ ಎಂದು ಮುಖಂಡರು ದೂರಿದರು.

ಈ ಸಂಬಂಧ ಸರ್ಕಾರ ಮತ್ತು ಚುನಾವಣಾ ಆಯುಕ್ತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಎಚ್.ಪಿ.ಮಂಜುನಾಥ್‌ ಮಾತನಾಡಿ, ‘ಸಾಮಾಜಿಕ ನ್ಯಾಯ ಹರಿಕಾರ ದೇವರಾಜ ಅರಸು ಅವರ ಸ್ವಕ್ಷೇತ್ರದಲ್ಲಿ ದಲಿತ ಸಮುದಾಯಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡದಿರುವುದು ಸಾಮಾಜಿಕ ಅನ್ಯಾಯ. ಈ ಸಂಬಂಧ ಈಗಾಗಲೇ ಪಂಚಾಯತ್‌ ರಾಜ್‌ ಸಚಿವಾಲಯದ ಗಮನಕ್ಕೆ ತಂದಿದ್ದು, ಶೀಘ್ರ ಸಚಿವರನ್ನು ಭೇಟಿ ಮಾಡಿ, ಅಧಿಸೂಚನೆ ಪರಿಷ್ಕರಿಸುವಂತೆ ಮನವಿ ಮಾಡಿದ್ದೇನೆ’ ಎಂದರು.

ಮುಖಂಡರಾದ ನಾಗರಾಜ್‌ ಮಲ್ಲಾಡಿ, ಪುಟ್ಟರಾಜ್‌, ಚಿಕ್ಕಸ್ವಾಮಿ, ಚಿನ್ನವೀರಯ್ಯ, ವರದರಾಜ್‌, ನಿಂಗರಾಜ್‌ ಮಲ್ಲಾಡಿ, ಬಸವಲಿಂಗಯ್ಯ, ಹೊನ್ನಪ್ಪ,ಡಿ.ಕುಮಾರ್‌, ಸತ್ಯಪ್ಪ ಭಾಗವಹಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ