ಶಿರಸಿ: ಕಾಳುಮೆಣಸು; ಹಿಡುಪು ಕೊರತೆ, ಇಳುವರಿ ಕುಸಿತ ಭೀತಿ

ಶಿರಸಿ: ಕಾಳುಮೆಣಸು; ಹಿಡುಪು ಕೊರತೆ, ಇಳುವರಿ ಕುಸಿತ ಭೀತಿ

ಶಿರಸಿ: ಕಾಳುಮೆಣಸು; ಹಿಡುಪು ಕೊರತೆ, ಇಳುವರಿ ಕುಸಿತ ಭೀತಿ

ಶಿರಸಿ: ಅಡಿಕೆ ತೋಟಗಳ ಪ್ರಮುಖ ಉಪಬೆಳೆಯಾಗಿರುವ ಕಾಳುಮೆಣಸು ಪ್ರಸಕ್ತ ಸಾಲಿನಲ್ಲಿ ಬೆಳೆಗಾರರಿಗೆ ತೀವ್ರ ಆತಂಕ ಮೂಡಿಸಿದೆ. ಬಳ್ಳಿಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹಿಡುಪು ಕಂಡುಬರದಿರುವುದು ಹಾಗೂ ಪ್ರಸ್ತುತ ಉಷ್ಣಾಂಶ ಹೆಚ್ಚಾಗಿ ಕಾಳುಗಳು ಉದುರುತ್ತಿರುವುದು ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿಯುವ ಭೀತಿ ಹುಟ್ಟುಹಾಕಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ತೋಟಗಳ ಮಧ್ಯೆ ಸುಮಾರು 5,737.48 ಹೆಕ್ಟೇರ್‌ಗಳಲ್ಲಿ ಕಾಳುಮೆಣಸನ್ನು ಬೆಳೆಯಲಾಗುತ್ತಿದ್ದು, ಇದು ರೈತರಿಗೆ ಹೆಚ್ಚುವರಿ ಆದಾಯದ ಪ್ರಮುಖ ಆಸರೆಯಾಗಿದೆ.

‘ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಾಗ ಕೃಷಿಕರ ಆರ್ಥಿಕ ಸ್ಥಿತಿಗೆ ಬಲ ನೀಡುತ್ತಿದ್ದ ಈ ಬೆಳೆ, ಈ ಬಾರಿ ಮಾತ್ರ ರೈತರ ನಿರೀಕ್ಷೆ ಹುಸಿಯಾಗಿಸುತ್ತಿದೆ. ಮೇಲ್ನೋಟಕ್ಕೆ ಬಳ್ಳಿಗಳ ಬೆಳವಣಿಗೆ ಉತ್ತಮವಾಗಿದ್ದರೂ, ಗೊಂಚಲುಗಳಲ್ಲಿ ಕಾಳುಗಳ ಸಂಖ್ಯೆ ತೀರ ವಿರಳವಾಗಿದೆ’ ಎಂಬುದು ರೈತರ ಮಾತು.

‘ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಕಾಳುಮೆಣಸಿನ ಹಿಡುಪಿನ ಮೇಲೆ ನೇರ ಪರಿಣಾಮ ಬೀರಿದೆ. ಹೂ ಬಿಟ್ಟು ಕಾಳು ಕಟ್ಟುವ ನಿರ್ಣಾಯಕ ಅವಧಿಯಲ್ಲಿ ಮಳೆಯ ಕೊರತೆಯಾಗಿದ್ದರಿಂದ ಆರಂಭದಲ್ಲೇ ಹಿಡುಪು ಕಡಿಮೆಯಾಗಿತ್ತು. ಇದೀಗ ಉಷ್ಣಾಂಶ ದಿಢೀರ್ ಏರಿಕೆಯಾಗಿರುವುದರಿಂದ ಬಳ್ಳಿಯಲ್ಲಿದ್ದ ಅಲ್ಪಸ್ವಲ್ಪ ಎಳೆ ಕಾಳುಗಳು ಸಹ ಉದುರಿ ಬೀಳುತ್ತಿದ್ದು, ಬೆಳೆಗಾರರು ಇಮ್ಮಡಿ ಹೊಡೆತ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಕಾಳುಮೆಣಸು ಬೆಳೆಗಾರರು.

‘ರಸಗೊಬ್ಬರ, ಔಷಧ ಸಿಂಪಡಣೆ, ಬಳ್ಳಿಗಳ ನಿರ್ವಹಣೆ ಹಾಗೂ ಕೊಯ್ಲಿನ ವೆಚ್ಚ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಳುವರಿ ಕುಸಿದರೆ ಹಾಕಿದ ಬಂಡವಾಳವೂ ಕೈಸೇರದೇ ಸಂಕಷ್ಟಕ್ಕೆ ಸಿಲುಕಲಿದ್ದೇವೆ’ ಎನ್ನುತ್ತಾರೆ ರೈತ ಸುದರ್ಶನ ಹೆಗಡೆ.

‘ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ರೋಗದಿಂದ ಜಿಲ್ಲೆಯ ಬೆಳೆಗಾರರು ಈಗಾಗಲೇ ಕಂಗೆಟ್ಟಿದ್ದು, ರೋಗದ ತೀವ್ರತೆಯಿಂದ ಕಳೆದ ಬಾರಿ ಅಡಿಕೆ ಇಳುವರಿಯಲ್ಲಿ ಭಾರಿ ಪ್ರಮಾಣದಲ್ಲಿ ಕುಂಠಿತವಾಗಿತ್ತು. ಇದರಿಂದ ರೈತರು ಅಡಿಕೆ ತೋಟಗಳಲ್ಲಿ ಕಾಫಿ, ಕಾಳುಮೆಣಸು ಸೇರಿದಂತೆ ಇನ್ನಿತರ ಉಪ ಬೆಳೆಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಕಾಳುಮೆಣಸಿನಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಹಿಡುಪು ಕಂಡುಬರದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ’ ಎನ್ನುತ್ತಾರೆ ಅವರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ