‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಪ್ರಬಂಧ ಸ್ಪರ್ಧೆ: ಮೈಮೂನಾ ಗೆಲುವು

‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಪ್ರಬಂಧ ಸ್ಪರ್ಧೆ: ಮೈಮೂನಾ ಗೆಲುವು

‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಪ್ರಬಂಧ ಸ್ಪರ್ಧೆ: ಮೈಮೂನಾ ಗೆಲುವು

ಮಡಿಕೇರಿ: ಉಮ್ಮತ್ ಒನ್ ಕೊಡಗು ಚಾರಿಟಬಲ್ ಟ್ರಸ್ಟ್‌ನಿಂದ ಈದ್ ಮಿಲಾದ್ ಪ್ರಯುಕ್ತ ನಡೆದಿದ್ದ ‘ಪ್ರವಾದಿ-ಮಾನವ ಕುಲಕ್ಕೆ ನೀಡಿದ ಕೊಡುಗೆಗಳು’ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕಡಂಗ ಮರೂರು ಗ್ರಾಮದ ಟಿ.ಎ.ಮೈಮೂನಾ ಮೊದಲ ಬಹುಮಾನ ₹ 15 ಸಾವಿರ ಪಡೆದರು.

ಮಡಿಕೇರಿಯ ಸಂಪಿಗೆಕಟ್ಟೆ ರಸ್ತೆಯ ಅಖೀಲಾ ಪರ್ವೀನ್ ದ್ವಿತೀಯ ಬಹುಮಾನ ₹10 ಸಾವಿರ, ಕುಶಾಲನಗರದ ಬಾಪೂಜಿ ಬಡಾವಣೆಯ ಬಿ.ಟಿ.ಚಂದ್ರ ಶೆಟ್ಟಿ ಹಾಗೂ ಸೋಮವಾರಪೇಟೆಯ ಕರ್ಕಳ್ಳಿಯ ಎಸ್.ಎಸ್. ಆಯಿಷಾ ತೃತೀಯ ಬಹುಮಾನ ₹ 5 ಸಾವಿರ ಪಡೆದುಕೊಂಡರು.

ಹಾಕತ್ತೂರಿನ ಕೆ.ಎಚ್.ಸಿಯಾಬುದ್ದೀನ್, ಕಗ್ಗೋಡ್ಲುವಿನ ಕೆ.ಶಶಿಕಲಾ, ನೆಲ್ಲಿಹುದಿಕೇರಿಯ ಫಾತಿಮತ್ ರಂಸೀನಾ ಸಮಾಧಾನಕರ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.

ಇಲ್ಲಿನ ಮಹದೇವಪೇಟೆಯಲ್ಲಿನ ಟ್ರಸ್ಟ್‌ ಕಚೇರಿಯಲ್ಲಿ ಶನಿವಾರ ಬಹುಮಾನ ವಿತರಿಸಿ ಮಾತನಾಡಿದ ಶಿಕ್ಷಣ ತಜ್ಞ ರಫೀಕ್ ಮಾಸ್ಟರ್, ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಪ್ರವಾದಿ ಮಹಮ್ಮದ್ ಅವರ ಸರಳ ಜೀವನ ಸಮಾಜಕ್ಕೆ ಆದರ್ಶವಾಗಬೇಕು. ತನ್ನ ಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳಿಗೆ ಗೌರವ ಸೂಚಿಸಬೇಕು ಎಂದು ಹೇಳಿದರು.

ತನ್ನ ಧರ್ಮವನ್ನು ಪ್ರೀತಿಸುತ್ತಾ ಇತರ ಧರ್ಮಗಳಿಗೆ ಗೌರವ ಸೂಚಿಸುವುದೇ ಮಾನವತಾವಾದ. ವ್ಯವಸ್ಥೆ ಸರಿಯಿಲ್ಲ ಎಂದು ದೂಷಿಸುವ ಬದಲು ವ್ಯವಸ್ಥೆ ಒಳಹೊಕ್ಕಿ ಅದನ್ನು ಸರಿಪಡಿಸುವ ಕೆಲಸ ಇಂದಿನ ಕಾಲಘಟ್ಟದಲ್ಲಿ ಅವಶ್ಯವಾಗಿ ನಡೆಯಬೇಕು. ತಪ್ಪು ಕಲ್ಪನೆಗಳನ್ನು ಬದಿಗೊತ್ತಿ ವಿಶಾಲ ಹೃದಯದಿಂದ ಅಧ್ಯಯನ ನಡೆಸಿದರೆ ಎಲ್ಲವೂ ಶುಭ್ರವಾಗಿ ಕಾಣುತ್ತದೆ. ಪ್ರವಾದಿಗಳು ಅತ್ಯಂತ ಸರಳ ಜೀವನ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.

ಕೊಡಗು ಉಮ್ಮತ್ ಒನ್ ಸಂಸ್ಥೆ ಶಿಕ್ಷಣ, ಸಾಹಿತ್ಯ, ಕೌಶಲಾಭಿವೃದ್ಧಿ ಸಹಿತ ಸಮಾಜದಲ್ಲಿ ಶಾಂತಿಯ ಸೇತುವೆ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದೆ. ಇಂತಹ ಕಾರ್ಯಗಳು ಮತ್ತಷ್ಟು ನಡೆಯಬೇಕು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸುವ ಮೂಲಕ ಸಮಾಜಕ್ಕೂ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, 6 ವರ್ಷಗಳ ಹಿಂದೆ ಜನ್ಮ ತಾಳಿದ ಉಮ್ಮತ್ ಒನ್ ಕೊಡಗು ಚಾರಿಟಬಲ್ ಟ್ರಸ್ಟ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಖಾಲೀದ್ ಹಾಜಿ ಈದ್ ಮಿಲಾದ್ ಪ್ರಯುಕ್ತ ಸರ್ವ ಧರ್ಮೀಯರಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. 300ಕ್ಕೂ ಅಧಿಕ ಪ್ರಬಂಧಗಳು ಕೈ ಬರಹದ ಮೂಲಕ ಬಂದಿದ್ದು, ಅತ್ಯಂತ ಪಾರದರ್ಶಕತೆ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದರು.

ಉಮ್ಮತ್ ಒನ್ ಕೊಡಗು ಚಾರಿಟಬಲ್ ಟ್ರಸ್ಟ್‌ನ ಮುಖ್ಯ ಸಲಹೆಗಾರ ನಿಜಾಮುದ್ದೀನ್ ಸಿದ್ದಿಕ್, ಸಂಸ್ಥೆಯ ಅಧ್ಯಕ್ಷ ಬಶೀರ್, ಉದ್ಯಮಿ ಹಾಗೂ ದಾನಿಗಳಾದ ಸಿದ್ದಿಕ್ ಹಂಸ, ಹಸೈನಾರ್ ಹಾಜಿ, ಮಜೀದ್ ಹಾಜಿ, ಕೆ.ಯು.ಯುಸೂಫ್ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ