ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿದ್ದ ವಾಹನಗಳ ತೆರವು

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿದ್ದ ವಾಹನಗಳ ತೆರವು

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿದ್ದ ವಾಹನಗಳ ತೆರವು

ಕಾರವಾರ: ರಾಷ್ಟ್ರೀಯ ಹೆದ್ದಾರಿ–66ಕ್ಕೆ ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಭಾಗದಲ್ಲಿ ದಾಸ್ತಾನು ಮಾಡಿದ್ದ ಸಾಮಗ್ರಿ, ನಿಲುಗಡೆ ಮಾಡಲಾಗಿದ್ದ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು.

ಮೇಲ್ಸೇತುವೆಯ ಕೆಳಭಾಗದಲ್ಲಿ ಅಲ್ಲಲ್ಲಿ ಸರಕು ಸಾಗಣೆ ವಾಹನ, ಕಾರುಗಳು, ಇತರ ವಾಹನಗಳ ನಿಲುಗಡೆ ಮಾಡಲಾಗಿತ್ತು. ಅಲ್ಲದೇ ನರ್ಸರಿ, ಫಾಸ್ಟ್‌ಫುಡ್ ವಾಹನಗಳೂ ಇದ್ದವು. ಅವುಗಳೆಲ್ಲವನ್ನೂ ತೆರವುಗೊಳಿಸಲಾಯಿತು.

ಕೆಲ ದಿನಗಳ ಹಿಂದೆ ಇದೇ ಮಾದರಿಯಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳುವ ವೇಳೆ ವ್ಯಾಪಾರಿಗಳು ತಗಾದೆ ತೆಗೆದಿದ್ದ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯ ನಡೆಯಿತು. ಹತ್ತಾರು ಪೊಲೀಸರು ಸ್ಥಳದಲ್ಲಿದ್ದು ತೆರವು ಕಾರ್ಯಾಚರಣೆಗೆ ಭದ್ರತೆ ನೀಡಿದರು.

‘ಮೇಲ್ಸೇತುವೆಯ ಕೆಳಭಾಗದಲ್ಲಿದ್ದ ವ್ಯಾಪಾರಿಗಳು, ವಾಹನ ನಿಲುಗಡೆ ಮಾಡಿದ್ದವರಿಗೆ ಎಚ್ಚರಿಕೆ ನೀಡಿ ತೆರವುಗೊಳಿಸಲಾಗಿದೆ. ತೆರವಿಗೆ ಸೂಚಿಸಿದ ವೇಳೆ ಕೆಲವರು ತಾವು ನಗರಸಭೆಗೆ ತೆರಿಗೆ ಪಾವತಿಸಿದ ಚೀಟಿ ಪ್ರದರ್ಶಿಸಿದರು. ಆದರೆ, ಮೇಲ್ಸೇತುವೆಯ ಕೆಳಭಾಗದಲ್ಲಿ ಸುರಕ್ಷತೆ ದೃಷ್ಟಿಯಿಂದ ಖುಲ್ಲಾಪಡಿಸಬೇಕಿರುವುದರಿಂದ ಹಾಗೂ ಉಪಲೋಕಾಯುಕ್ತರು ಸೂಚನೆ ನೀಡಿದ್ದರಿಂದ ತೆರವುಗೊಳಿಸಲಾಯಿತು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಮೇಲ್ಸೇತುವೆಯ ಕೆಳಭಾಗದಲ್ಲಿ ಆರ್‌ಟಿಒ ಕಚೇರಿಯಿಂದ ಐಎನ್ಎಸ್ ಚಪಲ್ ಯುದ್ಧನೌಕೆ ಮ್ಯೂಸಿಯಂ ಎದುರಿನವರೆಗೆ ಮೀನುಗಾರಿಕೆ ಪರಿಕರಗಳ ದಾಸ್ತಾನು ಇಡಲಾಗಿದ್ದು, ಅವುಗಳನ್ನೂ ಹಂತ ಹಂತವಾಗಿ ತೆರವುಗೊಳಿಸುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ