ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ: ‘ಬಂಡಾಯದ ಭರಾಟೆಯಲ್ಲೂ ಜೀವಸೆಲೆ’

ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ: ‘ಬಂಡಾಯದ ಭರಾಟೆಯಲ್ಲೂ ಜೀವಸೆಲೆ’

ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವ: ‘ಬಂಡಾಯದ ಭರಾಟೆಯಲ್ಲೂ ಜೀವಸೆಲೆ’

ಕೊಪ್ಪಳ: ‘ಬಂಡಾಯ ಸಾಹಿತ್ಯ ಉತ್ತುಂಗವಾಗಿದ್ದ ದಿನಗಳಲ್ಲಿ ಎಲ್ಲೆಡೆ ಕ್ರಾಂತಿಯ ಗೀತೆಗಳು ಮೊಳಗುತ್ತಿದ್ದವು. ಅಂಥ ಬಿಸಿ ಕಾಲದಲ್ಲಿಯೂ ಗವಿಸಿದ್ದ ಎನ್.ಬಳ್ಳಾರಿ ಅವರು ತಣ್ಣನೆಯ ಸಾಹಿತ್ಯ ಬರೆದು ಜೀವಸೆಲೆ ಉಳಿಸಿಕೊಂಡಿದ್ದರು. ಮಾನವೀಯತೆ ಜೀವಿಸಿದ ಶ್ರೇಷ್ಠ ಕವಿ ಅವರು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ ಹೇಳಿದರು.

ಕವಿ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳದ ತಳಮಳ ಪ್ರಕಾಶನ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ನಡೆದ ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬಂಡಾಯ ಸಾಹಿತ್ಯದ ಕಾಲದಲ್ಲಿಯೂ ಅವರು ಕ್ರಾಂತಿಗೀತೆ ಹಾಗೂ ಪ್ರೇಮಗೀತೆ ಎರಡೂ ಬರೆಯುತ್ತಿದ್ದರು’ ಎಂದು ಸ್ಮರಿಸಿದರು.

‘ಉತ್ತುಂಗದಲ್ಲಿದ್ದ ರೈತ ಚಳವಳಿ, ದಲಿತ ಹಾಗೂ ಕನ್ನಡ ಚಳವಳಿಗಳಿಂದ ಬಂಡಾಯದ ಸಾಹಿತ್ಯ ಉನ್ನತಕ್ಕೆ ಏರಿತ್ತು. ಆಗ ನಾವು ಮಾಡುತ್ತಿದ್ದ ಪ್ರತಿ ಹೋರಾಟ, ಸಾಹಿತ್ಯ ಕೃಷಿಯಲ್ಲಿ ಬಂಡಾಯವೇ ಪ್ರಧಾನವಾಗಿ ಇರುತ್ತಿತ್ತು. ರಾಜ್ಯದ ಆಂಧ್ರ ಗಡಿಭಾಗದಲ್ಲಿ ವ್ಯಾಪಕವಾಗಿದ್ದ ತೆಲುಗಿನ ಕ್ರಾಂತಿಕಾರಿ ಸಾಹಿತ್ಯ ‌ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿತು. ಇಂಥ ಸಮಯದಲ್ಲಿಯೂ ಗವಿಸಿದ್ದ ಎನ್.ಬಳ್ಳಾರಿ ಅವರು ತಣ್ಣನೆಯ ಸಾಹಿತ್ಯ ಬರೆದರು’ ಎಂದು ಹೇಳಿದರು.

ಕೇಂದ್ರ ಗೃಹ ‌ಇಲಾಖೆಯ ಅಧಿಕಾರಿ ಹಾಗೂ ಅನುವಾದಕ ಸಂಜಯ್ ಬೊರುಡೆ,  ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಳ್ಳಾರಿ ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ಕವಿ ಮಾಲಾ ಬಡಿಗೇರ, ಸಾಹಿತ್ಯೋತ್ಸವ ಸಮಿತಿ ಸಂಚಾಲಕ ಮಹೇಶ ಬಳ್ಳಾರಿ, ಪ್ರಕಾಶ ಬಳ್ಳಾರಿ, ರಾಜೇಶ ಬಳ್ಳಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

‘ಜನರ ನಂಬಿಕೆ ಕಳೆದುಕೊಳ್ಳಬೇಕಾಯಿತು’

‘ಬಂಡಾಯ ಸಾಹಿತ್ಯದ ‌ಭರಾಟೆಯಲ್ಲಿ ನಾವು ಭಕ್ತಿ ಪಂಥ ಸೂಫಿಸಂತರು ವಚನಕಾರರು ದಾಸರು ಹೀಗೆ ಅನೇಕ ದಾರ್ಶನಿಕರನ್ನು ಮರೆತುಬಿಟ್ಟೆವು. ಇದರಿಂದ ನಾವು ಬಹಳಷ್ಟು ‌ಜನರ ನಂಬಿಕೆ ಕಳೆದುಕೊಳ್ಳಬೇಕಾಯಿತು’ ಎಂದು ಸಿ.ಎಸ್.ದ್ವಾರಕನಾಥ ಬೇಸರ ವ್ಯಕ್ತಪಡಿಸಿದರು.

ಗವಿಸಿದ್ದ ಎನ್.ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು ‘ಪ್ರಸ್ತುತ ದಿನಮಾನಗಳಲ್ಲಿ ಧಾರ್ಮಿಕ ಪರಂಪರೆ ಸಾಹಿತ್ಯ ಹಾಗೂ ಸಂವಿಧಾನ ಒಂದೇ ಸಾಲಿನಲ್ಲಿ ಇಟ್ಟು ನೋಡಬೇಕಾಗಿದೆ. ಎಲ್ಲ ದಾರ್ಶನಿಕರು ಹೇಳಿದ ಮಾತುಗಳು ಸಂವಿಧಾನದಲ್ಲಿವೆ. ಜೆನ್‌ ಜಿಗಳ ಹೋರಾಟದ ಮುಂದೆ ನಾವು ನಗಣ್ಯ ಎನಿಸುತ್ತಿದ್ದೇವೆ’ ಎಂದು ನುಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕೊಪ್ಪಳದ ವೈದ್ಯೆ ಡಾ.ರಾಧಾ ಕುಲಕರ್ಣಿ ಜೈಲರ್ ಅಮರೇಶ ಪೂಜಾರ ಹಿರಿಯ ಇಂಗ್ಲಿಷ್ ಶಿಕ್ಷಕ ಎಸ್.ಸಿ.ಹಿರೇಮಠ ಉದ್ಯಮಿ ಶಿಲ್ಪಾ ಗಾಳಿ ಅವರಿಗೆ ಸಮಾಜಮುಖಿ ಗೌರವ ಸಲ್ಲಿಸಲಾಯಿತು. ಹುಬ್ಬಳ್ಳಿಯ ನಿರ್ಮಲಾ ಶೆಟ್ಟರ್ (ಹಸ್ತಪ್ರತಿ: ಪುಟ್ಟ ಪಾದ) ಹಾಗೂ ದಾವಣಗೆರೆಯ ಪಾಪು ಗುರು (ಈ ಹೊತ್ತಿಗೆ ಇಷ್ಟು ಸಾಕು) ಅವರ ಹಸ್ತಪ್ರತಿಗಳಿಗೆ 2026ನೇ ಸಾಲಿನ ಕವಿ ‘ಗವಿಸಿದ್ದ ಎನ್.ಬಳ್ಳಾರಿ ಕಾವ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ತಲಾ ₹5000 ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ