ಗದಗ| ಗಾಂಧೀಜಿ ಜೀವನವೇ ಒಂದು ಪ್ರಯೋಗ ಶಾಲೆ: ತೋಂಟದ ಸಿದ್ದರಾಮ ಸ್ವಾಮೀಜಿ

ಗದಗ| ಗಾಂಧೀಜಿ ಜೀವನವೇ ಒಂದು ಪ್ರಯೋಗ ಶಾಲೆ: ತೋಂಟದ ಸಿದ್ದರಾಮ ಸ್ವಾಮೀಜಿ

ಗದಗ| ಗಾಂಧೀಜಿ ಜೀವನವೇ ಒಂದು ಪ್ರಯೋಗ ಶಾಲೆ: ತೋಂಟದ ಸಿದ್ದರಾಮ ಸ್ವಾಮೀಜಿ

ಗದಗ: ‘ಮಹಾತ್ಮಾ ಗಾಂಧೀಜಿಯವರ ಇಡೀ ಜೀವನವೇ ಒಂದು ಪ್ರಯೋಗ ಶಾಲೆ ಆಗಿತ್ತು. ದೇಶದ ಶರಣರು, ದಾರ್ಶನಿಕರು ಮತ್ತು ಸಂತರು ನೀಡಿದ ಸಂದೇಶಗಳನ್ನು ಆಳವಾಗಿ ಅರಿತು, ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡ ಅಪರೂಪದ ವ್ಯಕ್ತಿತ್ವ ಅವರದ್ದು’ ಎಂದು ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಗದಗ ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ 2818ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ನನ್ನ ಜೀವನವೇ ನನ್ನ ಸಂದೇಶ’ ಎಂದು ಸಾರಿದ ಗಾಂಧೀಜಿ, ಸತ್ಯ ಮತ್ತು ಅಹಿಂಸೆಯೆಂಬ ಅಹಿಂಸಾತ್ಮಕ ಅಸ್ತ್ರಗಳ ಮೂಲಕವೇ ಬಲಿಷ್ಠ ಬ್ರಿಟಿಷ್ ಸಾಮ್ರಾಜ್ಯವನ್ನು ಮಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು’ ಎಂದು ಸ್ವಾಮೀಜಿ ಸ್ಮರಿಸಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ನೆನೆದ ಶ್ರೀಗಳು, 'ಜೈ ಜವಾನ್, ಜೈ ಕಿಸಾನ್' ಘೋಷಣೆಯ ಮೂಲಕ ರೈತರು ಮತ್ತು ಸೈನಿಕರಿಗೆ ಸಮಾಜದಲ್ಲಿ ಅಗ್ರಸ್ಥಾನ ಕಲ್ಪಿಸಿದ ಮಹಾನ್ ನಾಯಕ ಅವರು’ ಎಂದರು.

ಮುಳಗುಂದದ ವೈದ್ಯ ಡಾ. ಎಸ್. ಸಿ. ಚವಡಿ ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ದಾನಯ್ಯ ಗಣಾಚಾರಿ ದಂಪತಿಯನ್ನು ಸ್ವಾಮೀಜಿ ಸನ್ಮಾನಿಸಿದರು.

ಕೆ. ಎಸ್. ಪಲ್ಲೆದ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಉಮೇಶ ಪುರದ, ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಸುರೇಖಾ ಪಿಳ್ಳಿ, ವಿದ್ಯಾ ಗಂಜಿಹಾಳ, ಮೃತ್ಯುಂಜಯ ಗುರುನಾಥ ಸುತಾರ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ