
ಮಡಿಕೇರಿ ದಸರೆಯಲ್ಲಿ ಅ. 12ರಿಂದ 21ರವರೆಗೆ ಸಾಂಸ್ಕೃತಿಕ ರಸದೌತಣ
ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಅ. 12ರಿಂದ 21ರವರೆಗೂ ನಿತ್ಯ ಸಂಜೆ 6 ಗಂಟೆಗೆ ಇಲ್ಲಿನ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಪ್ರದರ್ಶನ ಕಾಣಲಿವೆ.
12 ರಂದು ಸಂಜೆ 6ಕ್ಕೆ ನಟೇಶ ನೃತ್ಯ ಶಾಲೆ, ಮದೆನಾಡು ತಂಡದಿಂದ ಶಾಸ್ತ್ರೀಯ ನೃತ್ಯ, ಮೈಸೂರಿನ ಆಕಾಶ್ ಮತ್ತು ತಂಡದಿಂದ ರಸಮಂಜರಿ, ಕುಶಾಲನಗರದ ನಟರಾಜ ಸಂಗೀತ ನೃತ್ಯ ಕಲಾ ಕೇಂದ್ರದಿಂದ ನೃತ್ಯ ವೈವಿಧ್ಯ ಮೈಸೂರಿನ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದಿಂದ ಶಾಸ್ತ್ರೀಯ ಗಾಯನ ಮತ್ತು ಇತರ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿವೆ.
13ರಂದು ಸಂಜೆ 6ಕ್ಕೆ ಮೈಸೂರಿನ ರಾಘವೇಂದ್ರ ಅವರಿಂದ ಹಾಡುಗಾರಿಕೆ, ಭಾಗಮಂಡಲದ ಜಾನ್ ಡ್ಯಾನ್ಸ್ ಗ್ಯಾಲರಿ, ಕುಶಾಲನಗರದ ಎ. ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ, ಹಾಸನದ ನೃತ್ಯ ನಿನಾದ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ವೈವಿಧ್ಯ, ಮೈಸೂರಿನ ನೃತ್ಯ ನಿರಂತರ ಟ್ರಸ್ಟ್‌ನಿಂದ ವಿಶೇಷ ಮಕ್ಕಳ ಸಾಂಸ್ಕೃತಿಕ ವೈವಿಧ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿವೆ.
14ರಂದು ಮಡಿಕೇರಿಯ ಕಲಾಕಾವ್ಯ ನಾಟ್ಯಶಾಲೆಯಿಂದ ಭರತನಾಟ್ಯ, ನಿಯತಿ ನೃತ್ಯ ನಿಕೇತನದಿಂದ ನೃತ್ಯ ವೈವಿಧ್ಯ, ಕುಂದಗೋಡಿನ ಭೂಮಿಕಾ - ದೀಪಿಕಾ ತಂಡದಿಂದ ಹಾಡುಗಾರಿಕೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
15ರಂದು ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪೆನಿಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ವಿಕ್ರಮ್ ಜಾದುಗಾರರ್ ಅವರಿಂದ ಮ್ಯಾಜಿಕ್ ಶೋ, ಮೂರ್ನಾಡಿನ ಸ್ಪೆಪ್ ಅಪ್ ಅಕಾಡೆಮಿ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್‌ನಿಂದ ನೃತ್ಯ ವೈಭವ, ಸುಳ್ಯದ ಫ್ಯೂಷನ್ ಇನ್‌ಸ್ಟಿಟ್ಯೂಟ್‌ನಿಂದ ಸಾಂಸ್ಕೃತಿಕ ವೈಭವ, ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ವೈವಿಧ್ಯ, ಮಡಿಕೇರಿಯ ನಟರಾಜ ನೃತ್ಯನಿಕೇತನದಿಂದ ಶಾಸ್ತ್ರೀಯ ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
16ರಂದು ಮೈಸೂರಿನ ಸುಮಾ ರಾಜಕುಮಾರ್ ಅವರಿಂದ ಮಾತನಾಡುವ ಗೊಂಬೆ (ಜಾದೂ), ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಟೀಮ್ ಎಸ್.ಕೆ.ವೈ.ಸಿ,ಯಿಂದ ನೃತ್ಯ, ಮಡಿಕೇರಿಯ ಕೂಗ್ ಟೆಕ್ವಾಂಡೋದಿಂದ ಕರಾಟೆ ನೃತ್ಯ ಹಮ್ಮಿಕೊಳ್ಳಲಾಗಿದೆ.
17 ರಂದು ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆ, ಮಡಿಕೇರಿಯ ಡ್ಯಾನ್ಸ್ ಲ್ಯಾಬ್‌ನಿಂದ ನೃತ್ಯ ವೈವಿಧ್ಯ, ಮಂಗಳೂರಿನ ಯಶಸ್ವಿ ಡ್ಯಾನ್ಸ್ ಗ್ರೂಪ್‌ನಿಂದ ಯುವಜನರ ಸಾಂಸ್ಕೃತಿಕ ವೈಭವ, ಮೈಸೂರಿನ ಪಿ.ವಿ.ಆರ್ ಇವೆಂಟ್ಸ್ ಮತ್ತು ಎಂಟರ್‌ಟೈನ್‌ಮೆಂಟ್‌ನಿಂದ ಸಾಂಸ್ಕೃತಿಕ ತರಂಗ ಮತ್ತು ಇತರ ಕಾರ್ಯಕ್ರಮ ಮೂಡಿಬರಲಿವೆ.
18ರಂದು ವಿವಿಧ ಜಾನಪದ ಕಲಾತಂಡಗಳಿಂದ ಜಾನಪದ ವೈಭವ, ಸಂಜೆ 6 ಗಂಟೆಯಿಂದ ಯುವ ದಸರಾ ಕಾರ್ಯಕ್ರಮ ನಡೆಯಲಿವೆ.
19ರಂದು ಮಹಿಳಾ ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಅಖಿಲ ಪಜಿಮಣ್ಣು ತಂಡದಿಂದ ರಸಮಂಜರಿ, ಮಡಿಕೇರಿಯ ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಸಾಂಪ್ರದಾಯಿಕ ನೃತ್ಯ, ಕೊಡವ ಸಮಾಜ ಪೊಮ್ಮಕ್ಕಳ ಕೂಟದಿಂದ ಫ್ಯೂಷನ್ ಕೋಲ್, ಮಡಿಕೇರಿಯ ಹಿಂದೂ ಮಲಯಾಳ ಸಂಘ, ಟೀಂ ಕಾಮಾಕ್ಷಿಯಿಂದ ಸಾಂಪ್ರದಾಯಿಕ ನೃತ್ಯ, ಶನಿವಾರಸಂತೆಯ ನಾಟ್ಯ ನಿಲಯಂ ಅಕಾಡೆಮಿಯಿಂದ ಶಾಸ್ತ್ರೀಯ ನೃತ್ಯ ನಡೆಯಲಿವೆ.
20ರಂದು ಆಯುಧ ಪೂಜಾ ಸಮಾರಂಭ, ಕೊಡಗು ಜಿಲ್ಲಾ ಬಂಟರ ಮಹಿಳಾ ಘಟಕದಿಂದ ನೃತ್ಯ ರೂಪಕ, ಬೆಂಗಳೂರಿನ ಟೀಂ ಮೊನಿದ್ದನಿಯಿಂದ ಅರೆಭಾಷೆ ಸಾಂಪ್ರದಾಯಿಕ ನೃತ್ಯ ರೂಪಕ, ಮಂಗಳೂರಿನ ಗಾನ ನೃತ್ಯ ಅಕಾಡೆಮಿಯಿಂದ ನೃತ್ಯ ವೈಭವ, ಸುಂಟಿಕೊಪ್ಪದ ಗ್ಯಾಂಗ್ ಆಫ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ವೈಭವ, ವಂದನ ಕಾರ್ಕಳ ಮತ್ತು ವಿದ್ಯಾರ್ಥಿಗಳಿಂದ ಹಾಡುಗಾರಿಕೆ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
21ರಂದು ವಿಜಯದಶಮಿ ಅಂಗವಾಗಿ ಮಹೇಂದ್ರ ಮತ್ತು ತಂಡ, ಸರಿಗಮಪ ಕಲಾವಿದರಿಂದ ರಸಮಂಜರಿ, ಸಂಸ್ಕೃತಿ ಸಿರಿ ಟ್ರಸ್ಟ್‌ನಿಂದ ನೃತ್ಯ ವೈವಿಧ್ಯ, ಕುಶಾಲನಗರದ ಡಿ.ಸಿ. ಡ್ಯಾನ್ಸ್ ಸ್ಟುಡಿಯೊದಿಂದ ನೃತ್ಯ ವೈವಿಧ್ಯ ಮತ್ತು ಸಂಗೀತ ರಸಸಂಜೆ, ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಸಂಗೀತ ರಸಮಂಜರಿ ಮೂಡಿಬರಲಿದೆ.