
BHELನಲ್ಲಿ ಉದ್ಯೋಗಾವಕಾಶ: 660 ಹುದ್ದೆಗಳಿಗೆ ಹೀಗೆ ಅರ್ಜಿ ಸಲ್ಲಿಸಿ
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಸಂಸ್ಥೆಯು 660 ಆರ್ಟಿಸನ್ ಗ್ರೇಡ್-IV ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ದೇಶದ ಒಂಬತ್ತು ಉತ್ಪಾದನಾ ಘಟಕಗಳಲ್ಲಿ ಈ ನೇಮಕ ಪ್ರಕ್ರಿಯೆ ನಡೆಯಲಿದೆ.
ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ಮತ್ತು ಫೌಂಡ್ರಿಮನ್ (ಲೋಹ ಕರಗಿಸುವವರು) ಸೇರಿದಂತೆ ಏಳು ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 21ರಿಂದ ಆರಂಭವಾಗಲಿದ್ದು, ನವೆಂಬರ್ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯನ್ನು 2026ರ ಅಕ್ಟೋಬರ್ 1ರ ಆಧಾರದಲ್ಲಿ ಪರಿಗಣಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯನ್ನು ಡಿಸೆಂಬರ್ 11ರಂದು ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.
ಫಿಟ್ಟರ್ – 278 ಹುದ್ದೆಗಳು
ವೆಲ್ಡರ್ – 104 ಹುದ್ದೆಗಳು
ಮೆಷಿನಿಸ್ಟ್ – 101 ಹುದ್ದೆಗಳು
ಎಲೆಕ್ಟ್ರಿಷಿಯನ್ – 90 ಹುದ್ದೆಗಳು
ಟರ್ನರ್ – 52 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 23 ಹುದ್ದೆಗಳು
ಫೌಂಡ್ರಿಮನ್ – 12 ಹುದ್ದೆಗಳು
ಫಿಟ್ಟರ್ – 278 ಹುದ್ದೆಗಳು
ವೆಲ್ಡರ್ – 104 ಹುದ್ದೆಗಳು
ಮೆಷಿನಿಸ್ಟ್ – 101 ಹುದ್ದೆಗಳು
ಎಲೆಕ್ಟ್ರಿಷಿಯನ್ – 90 ಹುದ್ದೆಗಳು
ಟರ್ನರ್ – 52 ಹುದ್ದೆಗಳು
ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 23 ಹುದ್ದೆಗಳು
ಫೌಂಡ್ರಿಮನ್ – 12 ಹುದ್ದೆಗಳು
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಅಧಿಸೂಚನೆಯಲ್ಲಿ ತಿಳಿಸಿರುವ ಷರತ್ತುಗಳ ಅನ್ವಯ ಸಂಬಂಧಿತ ವಿಷಯದಲ್ಲಿ ಐಟಿಐ ಮತ್ತು ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಹೊಂದಿರಬೇಕು. ಕನಿಷ್ಠ ಅಂಕಗಳು ಮತ್ತು ಇತರ ಅರ್ಹತಾ ಷರತ್ತುಗಳ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ನಂತರ ದಾಖಲೆಗಳ ಪರಿಶೀಲನೆ ಮತ್ತು ಅರ್ಹತಾ ಕೌಶಲ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಮಾದರಿ, ಅರ್ಜಿ ಶುಲ್ಕ, ವಯೋಮಿತಿ ಹಾಗೂ ಇತರ ನಿಯಮಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ಅಭ್ಯರ್ಥಿಗಳು ಒಂದು ಉತ್ಪಾದನಾ ಘಟಕಕ್ಕೆ ಮತ್ತು ಒಂದು ಟ್ರೇಡ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೀಗಾಗಿ, ಅರ್ಜಿ ಸಲ್ಲಿಸುವ ಮೊದಲು ತಮಗೆ ಸೂಕ್ತವಾದ ಹುದ್ದೆ ಮತ್ತು ಘಟಕವನ್ನು ಆಯ್ಕೆ ಮಾಡಿಕೊಳ್ಳಬೇಕು.
ಅರ್ಜಿ ಸಲ್ಲಿಕೆ ಆರಂಭ: ಅಕ್ಟೋಬರ್ 21
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 18
ಅರ್ಹತೆ ಪರಿಗಣಿಸುವ ದಿನಾಂಕ: ಅಕ್ಟೋಬರ್ 1
ಕಂಪ್ಯೂಟರ್ ಆಧಾರಿತ ಪರೀಕ್ಷೆ: ಡಿಸೆಂಬರ್ 11 (ತಾತ್ಕಾಲಿಕ)
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.