Asian Games 2026: ಆರ್ಚರಿಯಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿದ ಭಾರತ ಮಹಿಳಾ ತಂಡ, ಐತಿಹಾಸಿಕ ಸಾಧನೆ

Asian Games 2026: ಆರ್ಚರಿಯಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿದ ಭಾರತ ಮಹಿಳಾ ತಂಡ, ಐತಿಹಾಸಿಕ ಸಾಧನೆ

Asian Games 2026: ಆರ್ಚರಿಯಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ಮಣಿಸಿದ ಭಾರತ ಮಹಿಳಾ ತಂಡ, ಐತಿಹಾಸಿಕ ಸಾಧನೆ

Asian Games 2026: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ 2026 ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಶುಕ್ರವಾರ (ಅಕ್ಟೋಬರ್ 2) ನಡೆದ ಆರ್ಚರಿ (ಬಿಲ್ಲುಗಾರಿಕೆ) ರಿಕರ್ವ್ ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡವು ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ, ಚೊಚ್ಚಲ ಬಂಗಾರದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಬಿಲ್ಲುಗಾರಿಕೆ ಕ್ರೀಡೆಯಲ್ಲಿ ದಕ್ಷಿಣ ಕೊರಿಯಾ ತಂಡವು ಜಾಗತಿಕ ಮಟ್ಟದಲ್ಲಿ ಬೃಹತ್ ಪ್ರಾಬಲ್ಯ ಹೊಂದಿದೆ. ಆದರೆ, ಹೈ-ವೋಲ್ಟೇಜ್ ಫೈನಲ್‌ ಸಮರದಲ್ಲಿ ಭಾರತೀಯ ಆಟಗಾರ್ತಿಯರಾದ ಅಂಕಿತಾ ಭಕತ್, ಕೀರ್ತಿ ಹಾಗೂ ಕುಂಕುಮ್ ಮೊಹಮ್ಮದ್ ಅವರ ಸತತ ಕರಾರುವಾಕ್ ಗುರಿ ಕೊರಿಯನ್ನರ ಆಧಿಪತ್ಯವನ್ನು ಧೂಳಿಪಟ ಮಾಡಿತು. ವಿಶ್ವ ಚಾಂಪಿಯನ್ ಕಾಂಗ್ ಚೇ-ಯಂಗ್, ಲೀ ಯುನ್ಜಿ ಮತ್ತು ಓ ಯೆಜಿನ್ ಅವರನ್ನೊಳಗೊಂಡ ಬಲಶಾಲಿ ಪಡೆಯನ್ನು ಭಾರತ 5-3 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು.

ಭಾರತ ಫೈನಲ್‌ಗೆ ತಲುಪಿದ ಹಾದಿ ಹೇಗಿತ್ತು?

ಒಕಾಜಾಕಿ ಚುವೊ ಸೊಗೊ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದ ಮೊದಲ ಎರಡು ಸೆಟ್‌ಗಳಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೊದಲ ಸೆಟ್: 54-54 ಅಂಕಗಳ ಸಮಬಲದೊಂದಿಗೆ ಮುಕ್ತಾಯವಾಯಿತು. ಎರಡನೇ ಸೆಟ್: 56-56 ಅಂಕ ಗಳಿಸಿ ಎರಡೂ ತಂಡಗಳು ಸಮಾನ ಅಂಕ ಹಂಚಿಕೊಂಡವು.

ಭಾರತೀಯ ವನಿತೆಯರ ಅತ್ಯದ್ಭುತ ಪ್ರದರ್ಶನ

ಮೂರನೇ ಸೆಟ್‌ನ ನಿರ್ಣಾಯಕ ಹಂತದಲ್ಲಿ ತೀವ್ರ ಒತ್ತಡಕ್ಕೆ ಒಳಗಾದ ಕೊರಿಯಾ ಆಟಗಾರ್ತಿಯರು ಕೇವಲ 8 ಅಂಕಗಳನ್ನು ಗಳಿಸಿ ಒಟ್ಟು 52 ಅಂಕಗಳಿಗೆ ಸೀಮಿತರಾದರು. ಭಾರತೀಯ ವನಿತೆಯರು 55 ಅಂಕ ಕಲೆಹಾಕಿ ಸೆಟ್ ವಶಪಡಿಸಿಕೊಂಡರು. ನಾಲ್ಕನೇ ಸೆಟ್: ಕೊರಿಯಾ ಮತ್ತು ಭಾರತ ಎರಡೂ ತಂಡಗಳು 54-54 ಅಂಕ ಗಳಿಸಿ ಸಮಬಲ ಸಾಧಿಸಿದವು. ಅಂತಿಮವಾಗಿ 5-3 ಅಂಕಗಳ ಮುನ್ನಡೆಯೊಂದಿಗೆ ಭಾರತ ಅಧಿಕೃತವಾಗಿ ಬಂಗಾರಕ್ಕೆ ಕೊರೊಳೊಡ್ಡಿ ವಿಶ್ವದ ಗಮನ ಸೆಳೆಯಿತು.

ಸೆಮಿಫೈನಲ್‌ನಲ್ಲಿ ಚೀನಾ ಸದೆಬಡೆದ ಭಾರತ

ಫೈನಲ್‌ ಪ್ರವೇಶಿಸುವ ಹಾದಿಯಲ್ಲೂ ಭಾರತೀಯ ಪಡೆ ಅದ್ಭುತ ಪ್ರದರ್ಶನ ನೀಡಿತ್ತು. ಸೆಮಿಫೈನಲ್ ಸೆಣೆಸಾಟದಲ್ಲಿ ಬಲಶಾಲಿ ಚೀನಾ ತಂಡವನ್ನು 5-1 ಅಂತರದಿಂದ ಸದೆಬಡಿದು ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತ್ತು. ಇನ್ನು ಈ ಐತಿಹಾಸಿಕ ಚಿನ್ನದ ಪದಕದೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ ಭರ್ಜರಿ 67ಕ್ಕೆ ತಲುಪಿದೆ.

ಈವರೆಗೂ ಭಾರತ ಗೆದ್ದ ಪದಕಗಳ ವಿವರ

ಇದರಲ್ಲಿ 11 ಚಿನ್ನ, 23 ಬೆಳ್ಳಿ ಮತ್ತು 33 ಕಂಚಿನ ಪದಕಗಳು ಸೇರಿವೆ. ಕಳೆದ 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಕಾಂಪೌಂಡ್ ವಿಭಾಗದಲ್ಲಿ ಕಂಚು ಗೆದ್ದಿದ್ದ ಭಾರತ, ಈ ಬಾರಿ ರಿಕರ್ವ್ ವಿಭಾಗದಲ್ಲೇ ನೇರವಾಗಿ ಚೊಚ್ಚಲ ಚಿನ್ನದ ಪದಕ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿದೆ.

ಚಿನ್ನದ ಪದಕಕ್ಕೆ ಮುತ್ತಿಟ್ಟ ಲವ್ಲೀನಾ

ಇನ್ನೂ ಇದೀಗಜಪಾನ್‌ನಲ್ಲಿ ನಡೆಯುತ್ತಿರುವ 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್ ಅಖಾಡದಲ್ಲಿ ಭಾರತೀಯ ಬಾಕ್ಸಿಂಗ್ ತಾರೆ ಲವ್ಲೀನಾ ಬೋರ್ಗೋಹೈನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 75 ಕೆಜಿ ವಿಭಾಗದ ರೋಚಕ ಫೈನಲ್ ಹಣಾಹಣಿಯಲ್ಲಿ ಚೀನಾದ ಪ್ರಬಲ ಸ್ಪರ್ಧಿ ಜಿಯಿ ಬಾವೊ ಅವರನ್ನು ಧೂಳಿಪಟ ಮಾಡಿದ ಲವ್ಲೀನಾ, ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಫೈನಲ್ ಪಂದ್ಯಕ್ಕೂ ಮುನ್ನ ಸೆಮಿಫೈನಲ್ ಹೆಜ್ಜೆಯಲ್ಲಿಯೂ ಲವ್ಲೀನಾ ಕಠಿಣ ಸವಾಲನ್ನು ಎದುರಿಸಿದ್ದರು. ಕಜಕಿಸ್ತಾನದ ನಟಾಲಿಯಾ ಬೊಗ್ಡಾನೋವಾ ವಿರುದ್ಧ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ 3-2 ಅಂತರದ ಸ್ಪ್ಲಿಟ್ ನಿರ್ಧಾರದ ಜಯ ಸಾಧಿಸಿ ಫೈನಲ್ ರೌಂಡ್ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್ ಸುಯೋನ್ ಅವರನ್ನು ಮಣಿಸಿ ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ಕಠಿಣ ಹಾದಿಯನ್ನು ಯಶಸ್ವಿಯಾಗಿ ಹಾದು ಬಂದ 29 ವರ್ಷದ ಈ ಅನುಭವಿ ಬಾಕ್ಸರ್, ಅಂತಿಮ ಪಂದ್ಯದಲ್ಲೂ ತಮ್ಮ ಪೂರ್ಣ ಪ್ರಭುತ್ವ ಸಾಧಿಸಿದರು.

2022ರಲ್ಲಿ ಚೀನಾದ ಹಾಂಗ್ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಅಸ್ಸಾಂ ಮೂಲದ ಲವ್ಲೀನಾಗೆ ಈ ಬಾರಿಯ ಕೂಟವು ಅತ್ಯಂತ ಮಹತ್ವದ್ದಾಗಿತ್ತು. ಕಳೆದ ಬಾರಿ ಕೈತಪ್ಪಿದ್ದ ಬಂಗಾರದ ಪದಕವನ್ನು ಈ ಬಾರಿ ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ದೃಢ ಸಂಕಲ್ಪದೊಂದಿಗೆ ಅಖಾಡಕ್ಕಿಳಿದಿದ್ದ ಅವರು, ತಮ್ಮ ಶ್ರೇಷ್ಠ ಪ್ರದರ್ಶನದ ಮೂಲಕ ಬೆಳ್ಳಿಯ ಪದಕವನ್ನು ಚಿನ್ನವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಸ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ ಲವ್ಲೀನಾ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿಯೂ ಚಿನ್ನದ ಪದಕ ಗೆದ್ದ ಹಿರಿಮೆ ಹೊಂದಿದ್ದಾರೆ. ಇದೀಗ ಏಷ್ಯನ್ ಗೇಮ್ಸ್‌ನಲ್ಲಿಯೂ ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ತಮ್ಮ ಸುದೀರ್ಘ ಹಾಗೂ ಯಶಸ್ವಿ ಕ್ರೀಡಾ ಜೀವನದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಲವ್ಲೀನಾ ಅವರ ಈ ಗೆಲುವಿನಿಂದಾಗಿ ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಬಾಕ್ಸಿಂಗ್ ಪಡೆಯ ಆತ್ಮವಿಶ್ವಾಸವನ್ನು ಹಿಮ್ಮಡಿಗೊಳಿಸಿದೆ.

game gold medal achievement

game gold medal achievement

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ